ಲಿಂಗಸಗೂರು : ಏ, 9 – ತಾಲೂಕಿನ ಹಿರಿಯ ರೈತ ಹೋರಾಟಗಾರ
ಅಮರಣ್ಣ ಗುಡಿಯಾಳ್ ನಿಧನರಾಗಿದ್ದಾರೆ . ಅವರು ಹಲವು ದಶಕಗಳ ಕಾಲ ರೈತ ಚಳುವಳಿ, ರೈತರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ರೈತ ಹೋರಾಟಗಾರ , ರೈತರ ಯಾವುದೇ ಸಮಸ್ಯೆ ಇರಲಿ ಸದಾ ಮುಂಚೂಣಿಯಲ್ಲಿರುತ್ತಿದ್ದರು . ನೀರಾವರಿ, ಸಾಲಮನ್ನಾ ಸೇರಿದಂತೆ ರೈತರ ಸಂಕಷ್ಟಕ್ಕೆ ಸಂಬಂಧಿಸಿ ಅನೇಕ ವಿಷಯಗಳಲ್ಲಿ ಹೋರಾಟಗಳನ್ನು ಮಾಡುತ್ತಾ ತಾಲೂಕ ಆಡಳಿತದ ಗಮನ ಸೆಳೆದವರರು ಗುಡಿಯಾಳ್ ಅವರ ನೇತೃತ್ವದಲ್ಲಿ ನಡೆದ ಹೋರಾಟಗಳು ರೈತ ಸಮುದಾಯಕ್ಕೆ ಹಲವು ರೀತಿಯ ನೆರವನ್ನು ಒದಗಿಸಿವೆ. ಇವರ ಸರಳ ಜೀವನ , ಉನ್ನತ ಚಿಂತನೆ ಎಂಬ ತತ್ವವನ್ನು ಪರಿಪಾಲಿಸಿದವರು ಇವರ ಅಗಲಿಕೆಯಿಂದ ತಾಲೂಕಿನ ರೈತರಿಗೆ ತುಂಬಲಾರದ ನಷ್ಟ ವಾಗಿದೆ .ಇವರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನರೆವರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ .

