ಲಿಂಗಸಗೂರು :
ತಾಲೂಕಿನ ಅಡವಿಬಾವಿ ಕೆ. ಶಾಲೆಯಲ್ಲಿ ಈಚನಾಳ ಸಿ.ಆರ್.ಸಿ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಶುಕ್ರವಾರ ಜರುಗಿತು.
ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಭಾಗವಹಿಸಿದ ಲಿಂಗಸಗೂರು ತಾಲ್ಲೂಕು ಅಕ್ಷರ ದಾಸೋಹ ನಿರ್ದೇಶಕರಾದ ಮಾರ್ಟಿನ್ ಅಮಲರಾಜ್ ” ಮಕ್ಕಳ ಪ್ರತಿಭೆ ಹೊರ ಹೊಮ್ಮಲು ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮಗಳು ಅತ್ಯುತ್ತಮ ವೇದಿಕೆ ಒದಗಿಸುತ್ತವೆ, ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಮತ್ತು ಶಿಕ್ಷಕರು ಈ ಕಾರ್ಯಕ್ರಮ ಇದ್ದಾಗ ಮಾತ್ರ ಸಿದ್ಧತೆ ಮಾಡದೆ ವರ್ಷದ ಪ್ರತೀ ಕಲಿಕಾ ದಿನವೂ ಮಕ್ಕಳ ಪ್ರತಿಭೆ ಅನಾವರಣಕ್ಕೆ ಅವಕಾಶ ಮಾಡಿಕೊಡಬೇಕು” ಎಂದು ಹೇಳಿದರು.
ನಂತರ ಮಾತಾಡಿದ ವಲಯ ಸಿ.ಆರ್.ಪಿ ಮುಕ್ತುಂಸಾಬ ತಾಳಿಕೋಟಿ “ಇಪ್ಪತ್ತೊಂದು ಶಾಲೆಯ ಮಕ್ಕಳು ಮೂವತ್ತಮೂರು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದು ನಿರ್ಣಾಯಕರ ನಿರ್ಣಯ ಪಾರದರ್ಶಕವಾಗಿರಲಿ, ಇಲ್ಲಿ ಗೆದ್ದ ಮಕ್ಕಳು ತಾಲ್ಲೂಕು, ಜಿಲ್ಲಾ ಮಟ್ಟದಲ್ಲೂ ಜಯಶಾಲಿಗಳಾಗಲಿ” ಅಂತ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಸಿದ್ದಮ್ಮ ಆರ್.ಪಾಟೀಲ, ಹನಮಂತ ಜಿ.ಬಡಿಗೇರ ಅದ್ಯಕ್ಷರು ವಿಜಯಸೇನೆ, ಮುನೀರಬೇಗಂ ಅದ್ಯಕ್ಷರು ಗ್ರಾಂ.ಪಂ., ಹೊನ್ನಪ್ಪ ಉಪ್ಪಾರ, ಶರಣಬಸವ ಕೆ. ಗುಡದಿನ್ನಿ, ಶೇರ್ ಷಾ ದೋಟಿಹಾಳ, ಜಗದೀಶ್ ತೊಗರಿ, ನಾಗೇಶ ಬಿರದಾರ, ಗ್ರಾಮ ಪಂಚಾಯತಿ ಸದಸ್ಯರಾದ ದುರುಗನಗೌಡ ರಾಂಪೂರ, ಹುಲಿಗೆಮ್ಮ ಅಮರಗುಂಡಮ್ಮ, ಬಸಮ್ಮ ಬಸವರಾಜ, ಮೌನೇಶ ರಾಂಪೂರ, ಈರನಗೌಡ ರಾಂಪೂರ, ಹನಮಪ್ಪ ಮೂಲಿಮನಿ, ಮಾನಪ್ಪ ತೋಟದ, ರಾಮಲಿಂಗಪ್ಪ ಅಗಸಿಮನಿ, ಸೋಮಪ್ಪ ಈಚನಾಳ, ಹುಲಗಪ್ಪ ನಾಗರಾಳ, ಕುಪ್ಪಣ್ಣ ತಳವಾರ,, ತಿರುಪತಿ ಜಾಲಿಬೆಂಚಿ ಸೇರಿದಂತೆ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು .

Leave a Reply

Your email address will not be published. Required fields are marked *