ಸಿಂಧನೂರು: ಬೇಸಿಗೆಯ ತೀವ್ರ ಬಿಸಿಲಿನ ಹಿನ್ನೆಲೆ ಪ್ರತಿ ವರ್ಷದಂತೆ ಈ ವರ್ಷವು ಕೂಡ ಸಾರ್ವಜನಿಕರ ದಾಹ ನೀಗಿಸುವ ಉದ್ದೇಶದಿಂದ, ಶ್ರೀ ಬಸವಶ್ರೀ ನೌಕರರ ಪತ್ತಿನ ಸಹಕಾರ ಸಂಘ ನಿಯಮಿತ, ಮಾನವಿ ಸಿಂಧನೂರು ಶಾಖೆಯ ವತಿಯಿಂದ ಸಿಂಧನೂರು ನಗರದ ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಅರವಟಿಗೆಯನ್ನು ಪ್ರಾರಂಭಿಸಲಾಯಿತು.
ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಡಾ|| ಶಂಕರಗೌಡ ಎಸ್. ಪಾಟೀಲ್ ಅವರ ಮಾರ್ಗದರ್ಶನದಲ್ಲಿ, ನೆರವೇರಿತು
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ವೀರೇಶ ಎನ್. ಹೊಸೂರ್ ಅವರು ಮಾತನಾಡಿ ವರ್ಷ ದಿಂದ ವರ್ಷಕ್ಕೆ ಬಿಸಿಲಿನ ತಾಪ ಮಾರ್ಚ್ ತಿಂಗಳಿಂದ ಹೆಚ್ಚಾಗುವದರಿಂದ ಪಟ್ಟಣಕ್ಕೆ ಬರುವ ಸಾವಿರಾರು ಪ್ರಯಾಣಿಕರು ಮತ್ತು ಸಾರ್ವಜನಿಕರಿಗೆ ಹಳ್ಳಿಗರ ನೀರಿನ ದಾಹ ತಣಿಸಲು ಸಹಕಾರಿಯಾಗಿದೆ ಎಂದರು ನಮ್ಮ ಸಂಸ್ಥೆಯ ಶಾಖೆಗಳಾದ ಮಾನವಿ ಲಿಂಗಸಗೂರು,ಸಿರವಾರ,ದೇವದುರ್ಗ,ರಾಯಚೂರು, ಗಂಗಾವತಿ,ಕೊಪ್ಪಳ,ಹುಣಸಗಿ ಹಾಗೂ ಯಾದಗಿರಿ ನಗರಗಳಲ್ಲಿ ದಿನ ಆಗಮಿಸುವ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಸಿಂಧನೂರು ನಗರದ ನಿವೃತ್ತ ನೌಕರರ ಸಂಘದ ಕಾರ್ಯದರ್ಶಿಗಳಾದ ಶ್ರೀ ವೆಂಕಟರೆಡ್ಡಿ ಅವರು ಅರವಟಿಗೆಯನ್ನು ಉದ್ಘಾಟಿಸಿ, ಸಂಘದ ಈ ಸಾಮಾಜಿಕ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಪ್ರಮುಖರಾದ ತಿಮ್ಮಾರೆಡ್ಡಿ, ಚಂದ್ರಪ್ಪ, ಈಶ್ವರಪ್ಪ,ಶೌಕತಲಿ ಖಾನ್, ಜಡೇಶ, ನಿಂಗಪ್ಪ ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಸಿಂಧನೂರು ಶಾಖಾ ವ್ಯವಸ್ಥಾಪಕರಾದ ಸೂಗನಗೌಡ ಚೀಕಲಪರ್ವಿ ಹಾಗೂ ಸಂಘದ ಸಿಬ್ಬಂದಿ ವರ್ಗದವರು ಭಾಗವಹಿಸಿ, ಸಾರ್ವಜನಿಕ ಸೇವೆಗೆ ಚಾಲನೆ ನೀಡಿದರು.
ಬೇಸಿಗೆಯ ಅವಧಿಯಲ್ಲಿ ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಲಾಗಿದೆ.

