ಸಿಂಧನೂರು : ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಪ್ರಾಥಮಿಕ ಆರೋಗ್ಯ ಕೇಂದ್ರ ಜವಳಗೇರಾ ಇವರ ಸಂಯುಕ್ತ ಆಶ್ರಯದಲ್ಲಿ ಸಮುದಾಯದಲ್ಲಿ ಕ್ಷಯರೋಗ ದಿನಾಚರಣೆ ಅರಗಿನ ಮರದ ಕ್ಯಾಂಪ್ ನಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಅವರು ಮಾತನಾಡಿ ಪ್ರತಿ ವರ್ಷದಂತೆ ಮಾರ್ಚ್ 24 ರಂದು ಕ್ಷಯರೋಗ ದಿನಾಚರಣೆ ಆಚರಣೆ ಮಾಡಲಾಗುತ್ತದೆ ಡಾಕ್ಟರ ರಾಬರ್ಟ್ ಕೋಚ್ ಎಂಬ ವಿಜ್ಞಾನಿ ಕ್ಷಯ ರೋಗ ಮೈಕೊಬ್ಯಾಟೀರಿಯಂದಿಂದ ಹರಡುತ್ತತ್ತದೆ ಎಂದು ತಿಳಿಸಿದರು. .ಕ್ಷಯರೋಗ ಹರಡದಂತೆ ಸಮುದಾಯದ ಸಹಭಾಗಿತ್ವ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಹತ್ವದ್ದಾಗಿದೆ
ಕ್ಷಯರೋಗ ರೋಗದ ಲಕ್ಷಣಗಳು ಕಂಡು ಬಂದರೆ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು ಕ್ಷಯರೋಗದ ಲಕ್ಷಣಗಳಾದ ಎರಡು ವಾರದ ಹೆಚ್ಚಿನ ಕೆಮ್ಮು ಕಫದಲಿ ರಕ್ತ ಬರುವುದು ಹಸಿವಿಲ್ಲದೆ ಇರುವುದು ದೇಹದ ತೂಕ ಕಡಿಮೆಯಾಗುವುದೂ ರಾತ್ರಿ ವೇಳೆ ಅತಿಯಾದ ಜ್ವರ ಮತ್ತು ಬೆವರುವುದು ಕ್ಷಯರೋಗದ ಲಕ್ಷಣವಾಗಿ ರುತ್ತದೆ ಇಂತಹ ಲಕ್ಷಣಗಳು ಕಂಡು ಬಂದರೆ ಕೂಡಲೇ ಹತ್ತಿರದ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದರು.
ನಂತರ ಮಾತನಾಡಿದ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು ನಿಂಗಮ್ಮ ಕ್ಷಯರೋಗ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳಲ್ಲಿ ಬರುವ ಸಾಧ್ಯತೆ ಹೆಚ್ಚು ಹೆಚ್ .ಐ.ವಿ. ಪೀಡಿತರಿಗೆ ಕ್ಷಯರೋಗ ಹರಡುವ ಸಾಧ್ಯತೆ ಇದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವವರು ಹೆಚ್ಚಾಗಿ ಕ್ಷಯರೋಗಕ್ಕೆ ತುತ್ತಾಗಬಹುದು. ಸಂಪೂರ್ಣ ಚಿಕಿತ್ಸೆಯಿಂದ ಕ್ಷಯರೋಗ ಬೇಗನೆ ಗುಣಪಡಿಸಬಹುದು.ಸಮುದಾಯದಲ್ಲಿ ಜನರಲ್ಲಿ ಆರೋಗ್ಯ ಶಿಕ್ಷಣ ಮತ್ತು ಜಾಗೃತಿ ಮೂಡಿಸುವ ಮೂಲಕ ಕ್ಷಯರೋಗ ನಿರ್ಮೂಲನೆ ಮಾಡಬಹುದು ಕೆಮ್ಮುವಾಗ ಮಾಸ್ಕ್ ಧರಿಸಿ ಎದೆಯಲ್ಲಿ ನೋವೂ ಮತ್ತು ಅಸ್ವಸ್ಥತೆಯ ಕಂಡುಬಂದರೆ ಕೊಡಲೆ ಪರೀಕ್ಷೆ ಮಾಡಿಕೊಂಡು ಸ್ಪಲ್ಪ ನಿಂತು ಓದಿ ಯೋಚಿಸಿ ಕ್ಷಯರೋಗದ ಲಕ್ಷಣಗಳು ಕಂಡು ಬಂದರೆ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ ಸೂಕ್ತ ಚಿಕಿತ್ಸೆಯಿಂದ ಸಂಪೂರ್ಣ ಗುಣವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವಿಜಯಲಕ್ಷ್ಮಿ ಅಂಗನವಾಡಿ ಮೇಲ್ವಿಚಾರಕರು. ಅಂಗನವಾಡಿ ಕಾರ್ಯಕರ್ತೆಯರು ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು ರಾಧಾ. ಆಶಾ ಕಾರ್ಯಕರ್ತೆರಾದ ಲಕ್ಷ್ಮಿ. ಮಹೇಶ್ವರಿ. ಅಂಗನವಾಡಿ ಕಾರ್ಯಕರ್ತೆಯರಾದ ಆದಿಲಕ್ಷ್ಮೀ. ವಿಜಯಲಕ್ಷ್ಮಿ .ರೂಪಾ. ಬಸವಂತಮ್ಮ . ಸಾರ್ವಜನಿಕರು ಹಾಗೂ ಮಕ್ಕಳ ತಾಯಿಂದಿರು ಉಪಸ್ಥಿತರಿದ್ದರು


