ರಾಯಚೂರು ಮಾರ್ಚ್ 24 (ಕರ್ನಾಟಕ ವಾರ್ತೆ): ಇಲ್ಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2026-27ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶ ಪರೀಕ್ಷೆಯನ್ನು ಏಪ್ರಿಲ್ 12ರಂದು ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಏಕಕಾಲಕ್ಕೆ ಜರುಗಲಿದ್ದು, ಅರ್ಜಿ ಸಲ್ಲಿಸಿರುವ ಅರ್ಹ ವಿದ್ಯಾರ್ಥಿಗಳು ಈ ಪರೀಕ್ಷಗೆ ಕಡ್ಡಾಯವಾಗಿ ಹಾಜರಾಗುವಂತೆ ಕೋರಲಾಗಿದೆ.
ಜಿಲ್ಲೆಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ರಾಯಚೂರು (ಬೋಳಮಾನದೊಡ್ಡಿ ರಸ್ತೆ), ಗಿಲ್ಲೇಸೂಗೂರು ( ಚಂದ್ರ ಬಂಡ ರಸ್ತೆ), ಯರಮರಸ್ ಕ್ಯಾಂಪ್, ಗಿಲ್ಲೆಸುಗೂರು ಕ್ಯಾಂಪ್, ಮಾನವಿ, ಸಿಂಧನೂರು, ಚನ್ನಹಳ್ಳಿ, ಮಸ್ಕಿ, ಲಿಂಗಸೂಗೂರು, ಸಿರವಾರ, ದೇವದುರ್ಗ ಮತ್ತು ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆ, ಯರಮರಸ್ ಕ್ಯಾಂಪ್ ರಾಯಚೂರಿನಲ್ಲಿ 6ನೇ ತರಗತಿಯಿಂದ 10ನೇ ತರಗತಿಯ ವರೆಗೆ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಅಲ್ಪಸಂಖ್ಯಾತರ ಸಮುದಾಯಕ್ಕೆ ಶೇ.75 ರಷ್ಟು ಸ್ಥಾನಗಳನ್ನು ಮತ್ತು ಶೇ.25 ರಷ್ಟು ಸ್ಥಾನಗಳನ್ನು ಇತರೆ ವರ್ಗದವರಿಗೆ ಮೀಸಲಿರಿಸಿ, ಪ್ರಸ್ತುತ ಕರ್ನಾಟಕದ ಸರ್ಕಾರದ/ಅಂಗೀಕೃತ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ಉತ್ತೀರ್ಣರಾದ ಅರ್ಹ ವಿದ್ಯಾರ್ಥಿಗಳಿಂದ 6ನೇ ತರಗತಿ ಪ್ರವೇಶಕ್ಕಾಗಿ ಅಲ್ಪಸಂಖ್ಯಾತರ ಸಮುದಾಯದವರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬುದ್ದಿಸ್ಟ್, ಸಿಖ್ ಮತ್ತು ಪಾರ್ಸಿ ಅರ್ಹ ವಿದ್ಯಾರ್ಥಿಗಳು ಮತ್ತು ಪ.ಜಾತಿ/ಪ.ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಅರ್ಹ ವಿದ್ಯಾರ್ಥಿಗಳಿಗೆ ಆನ್‌ಲೈನ್ ಸೇವಾಸಿಂಧು ವಿಳಾಸ: Website:https://sevasindhuservices.karnataka.gov.in ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತು. ಅರ್ಜಿ ಸಲ್ಲಿಸಿರುವ ಅರ್ಹ ವಿದ್ಯಾರ್ಥಿಗಳಿಗೆ ದಿನಾಂಕ:12.04.2026 ಭಾನುವಾರದಂದು ಪ್ರವೇಶ ಪರೀಕ್ಷೆಯು ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಏಕಕಾಲಕ್ಕೆ ಜರುಗಲಿದ್ದು, ಅರ್ಜಿ ಸಲ್ಲಿಸಿರುವ ಅರ್ಹ ವಿದ್ಯಾರ್ಥಿಗಳು ಸದರಿ ಪರೀಕ್ಷಗೆ ಕಡ್ಡಾಯವಾಗಿ ಹಾಜರಾಗುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: ಅಲ್ಪಸಂಖ್ಯಾತರ ಸಹಾಯವಾಣಿ 8277799990, 08022535902, ರಾಯಚೂರು 8496098631, 9731028420, 9731341815, 9686853719, 6361866571, 9108175899 ಅಥವಾ 9902906266, ಮಾನವಿ, ಸಿರವಾರ 7411771075, 886733478, ದೇವದುರ್ಗ 9731794252, 9148233616, ಲಿಂಗಸೂಗೂರು, ಮಸ್ಕಿ ಮತ್ತು ಸಿಂಧನೂರು 8217621732, 9740871306 ಅಥವಾ 8660879712ಗೆ ಸಂಪರ್ಕಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

