ಕೊಪ್ಪಳ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಪ್ಪಳ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ, ಶಾಲುದೀಕ್ಷಾ ಮತ್ತು ರೈತ ಜಾಗೃತಿ ಕಾರ್ಯಕ್ರಮವನ್ನು ಮಾರ್ಚ್ 22 ರಂದು ಬೆಳಗ್ಗೆ 10 ಗಂಟೆಗೆ ನಗರದ ಎ.ಆರ್. ಮೇಘರಾಜ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಪ್ಪ ಮರಳಿ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ವಿವರಗಳನ್ನು ಹಂಚಿಕೊಂಡರು.
ಉದ್ಘಾಟನೆ: ಪ.ಪೂ. ಶಶಿಕಾಂತ ಪಡಸಲಗಿ (ಇಂಚಗೇರಿ ಮಠದ ಯುವ ಸನ್ಯಾಸಿ ಹಾಗೂ ರಾಜ್ಯ ಗೌರವಾಧ್ಯಕ್ಷರು).
ಅಧ್ಯಕ್ಷತೆ: ಚುನ್ನಪ್ಪ ಪೂಜೇರಿ (ರಾಜ್ಯಾಧ್ಯಕ್ಷರು).,
ಮುಖ್ಯ ಅತಿಥಿಗಳು: ಮಹೇಶಗೌಡ ಎಂ. ಸುಬೇದಾರ (ರಾಜ್ಯ ಕಾರ್ಯಾಧ್ಯಕ್ಷರು), ಶಿವಾನಂದ ಮುಗಳಿಹಾಳ (ಉಪಾಧ್ಯಕ್ಷರು), ಕಿಶನ್ ನಂದಿ (ಕಾರ್ಯದರ್ಶಿ) ಸೇರಿದಂತೆ ಹಲವು ರಾಜ್ಯ ಮಟ್ಟದ ಮುಖಂಡರು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶರಣಪ್ಪ ಮರಳಿ ಅವರು ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು:ಕೊಪ್ಪಳ ಸುತ್ತಮುತ್ತಲಿನ 20ಕ್ಕೂ ಹೆಚ್ಚು ಗ್ರಾಮಗಳ ಜನರು ಕಾರ್ಖಾನೆಗಳ ಧೂಳಿನಿಂದ ತತ್ತರಿಸಿದ್ದಾರೆ. ಮಾಲಿನ್ಯಭರಿತ ಮೇವು ತಿಂದು ಜಾನುವಾರುಗಳು ಮೃತಪಡುತ್ತಿವೆ.ಜನ ಹಾಗೂ ಜಾನುವಾರುಗಳಿಗೆ ಕುಡಿಯಲು ಶುದ್ಧ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಗಳ ವಿರುದ್ಧ ಸಂಘಟಿತ ಹೋರಾಟ ರೂಪಿಸಲು ಸಂಘಟನೆಯನ್ನು ಬಲಪಡಿಸಲಾಗುತ್ತಿದೆ.ದೇಶದಲ್ಲಿ ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಆತಂಕಕಾರಿ. ರೈತರ ಆತ್ಮಹತ್ಯೆಯಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಹಸಿರು ಕ್ರಾಂತಿಗೂ ಮೊದಲು ರೈತರ ಬದುಕು ನೆಮ್ಮದಿಯಾಗಿತ್ತು ಎಂದು ಅವರು ವಿಷಾದಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಮಹಮ್ಮದ್ ಇಸ್ಮಾಯಿಲ್ ನಾಲಬಂದ್, ಮುಖಂಡರಾದ ಸುಕುಮಿಯಪ್ಪ, ವಿರೇಶ ಅನ್ವಾಳ, ಭೀಮನಗೌಡ ಉಪಸ್ಥಿತರಿದ್ದರು.

