ಈದ್ ಉಲ್ ಫಿತ್ರ್ ಹಬ್ಬದ ಪವಿತ್ರ ಹಾಗೂ ಸಂತೋಷಭರಿತ ಸಂದರ್ಭದಲ್ಲಿ ರಾಯಚೂರು ನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರೊಂದಿಗೆ ಸಮೂಹ ನಮಾಜ್‌ನಲ್ಲಿ ಪಾಲ್ಗೊಂಡಿದ್ದು ನನ್ನ ಜೀವನದ ಒಂದು ಸ್ಮರಣೀಯ ಕ್ಷಣವಾಗಿದೆ. ಈ ಪವಿತ್ರ ದಿನದಂದು ಎಲ್ಲರೊಂದಿಗೆ ಸೇರಿ ಪ್ರಾರ್ಥನೆ ಸಲ್ಲಿಸುವ ಮೂಲಕ ಏಕತೆ, ಸಹೋದರತ್ವ ಹಾಗೂ ಮಾನವೀಯ ಮೌಲ್ಯಗಳ ಮಹತ್ವವನ್ನು ಮತ್ತಷ್ಟು ಅನುಭವಿಸಿದೆ.
ನಮಾಜ್ ನಂತರ ಮುಸ್ಲಿಂ ಬಾಂಧವರಿಗೆ ಹೃದಯಪೂರ್ವಕ ಶುಭಾಶಯಗಳನ್ನು ತಿಳಿಸಿ, ಪರಸ್ಪರ ಅಪ್ಪುಗೆಗಳು, ಶುಭಾಶಯ ವಿನಿಮಯಗಳು ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು. ನಗರದಲ್ಲಿನ ಹಿರಿಯರು, ಯುವಕರು ಹಾಗೂ ಮಕ್ಕಳಿಂದ ಕೂಡಿದ ಈ ಸಮಾರಂಭವು ಒಗ್ಗಟ್ಟಿನ ಪ್ರತೀಕವಾಗಿತ್ತು.
ಈದ್ ಹಬ್ಬವು ನಮಗೆ ದಾನ, ಸಹಾನುಭೂತಿ, ಸಹಿಷ್ಣುತೆ ಹಾಗೂ ಪ್ರೀತಿಯ ಮಹತ್ವವನ್ನು ಸಾರುತ್ತದೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆ ಬೆಳೆಸುವಲ್ಲಿ ಈ ಹಬ್ಬವು ಪ್ರಮುಖ ಪಾತ್ರವಹಿಸುತ್ತದೆ. ಈ ಪವಿತ್ರ ಹಬ್ಬವು ಪ್ರತಿಯೊಬ್ಬರ ಮನೆಮನೆಗೆ ಸುಖ, ಸಮೃದ್ಧಿ ಹಾಗೂ ಆಶೀರ್ವಾದಗಳನ್ನು ತರಲಿ ಎಂದು ಹಾರೈಸುತ್ತೇನೆ.

