ಮಾನ್ವಿ : ಪಟ್ಟಣದ ಈದ್ಗಾ ಮೈದಾನದ ಹತ್ತಿರ ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಂ ಸಮುದಾಯದವರಿಗೆ ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಶುಭಾಶಯಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಂಜಾನ್ ಹಬ್ಬವು ಶಾಂತಿ, ಸಹಾನುಭೂತಿ ಮತ್ತು ಸೌಹಾರ್ದತೆಯ ಪ್ರತೀಕವಾಗಿದ್ದು, ಸಮಾಜದಲ್ಲಿ ಎಲ್ಲರೂ ಒಂದಾಗಿ ಬಾಳಬೇಕೆಂಬ ಸಂದೇಶ ನೀಡುತ್ತದೆ ಎಂದು ಹೇಳಿದರು.
ಇನ್ನೂ ಅವರು, ಧರ್ಮಭಾವನೆಗಳನ್ನು ಗೌರವಿಸಿ ಪರಸ್ಪರ ಸಹಕಾರದಿಂದ ಸಮಾಜದಲ್ಲಿ ಶಾಂತಿ ಮತ್ತು ಏಕತೆ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷ ರಾಜಾ ರಾಮಚಂದ್ರನಾಯಕ, ತಾ. ಅಧ್ಯಕ್ಷ ಡಾ. ಈರಣ್ಣ ಮರ್ಲಟ್ಟಿ, ಹೆಚ್. ಮೌನೇಶ ಗೌಡ, ಶರಣಪ್ಪ ಗೌಡ, ಬಾಷ ಸಾಬ್, ಖಲೀಲ್ ಖುರೇಷಿ, ಶರಣಪ್ಪ ಮೇದಾ, ಸುಭಾನ್ ಬೇಗ್, ಸಾಜಿದ್ ಪಾಷಾ, ಮೌಲಸಾಬ್, ಬಸವರಾಜ ಸ್ವಾಮಿ, ವಿಜಯ ನಾಯಕ ಕೊಟ್ನೆಕಲ್ ಸೇರಿದಂತೆ ಇನ್ನಿತರರು ಇದ್ದರು.


