ಸಿಂಧನೂರು : ಭಾರತೀಯ ಜನತಾ ಪಾರ್ಟಿ ಸಿಂಧನೂರು ವಿಧಾನಸಭಾ ಕ್ಷೇತ್ರದ ನಗರ ಮಂಡಲ ಎಸ್.ಸಿ ಮೋರ್ಚಾ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಸೇನಪ್ಪ ಹೆಚ್. ಸೂಲಂಗಿ ಅವರಿಗೆ ನಗರದ ಪ್ರವಾಸಿ ಮಂದಿರದಲ್ಲಿ ಸ್ನೇಹಿತರ ಬಳಗದ ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಹಸೇನಪ್ಪ ಹೆಚ್. ಸೂಲಂಗಿ ಅವರನ್ನು ಪುಷ್ಪಗುಚ್ಛ, ಶಾಲು ಮತ್ತು ಹಾರ ಹಾಕಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು, ಸಾಮಾನ್ಯ ಕಾರ್ಯಕರ್ತನಿಗೂ ಅವಕಾಶ ನೀಡಿ ಉತ್ತೇಜನ ನೀಡುವ ಪಕ್ಷ ಭಾರತೀಯ ಜನತಾ ಪಾರ್ಟಿ ಎಂದು ಹೇಳಿದರು.
ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಬಿಜೆಪಿ ಮುಖಂಡರಾದ ಕೆ. ಕರಿಯಪ್ಪ, ಎಂ. ದೊಡ್ಡ ಬಸವರಾಜ ಹಾಗೂ ಗ್ರಾಮೀಣ ಮಂಡಲ ಅಧ್ಯಕ್ಷ ವೆಂಕೋಬ ನಾಯಕ ರಾಮಾತ್ನಾಳ ಅವರ ಮಾರ್ಗದರ್ಶನದಲ್ಲಿ, ನಗರ ಮಂಡಲ ಅಧ್ಯಕ್ಷರಾದ ಸಿದ್ದರಮೇಶ್ ಮನ್ನಾಪುರ ಅವರು ನನ್ನ ಮೇಲೆ ವಿಶ್ವಾಸ ಇಟ್ಟು ನಗರ ಮಂಡಲದ ಎಸ್.ಸಿ ಮೋರ್ಚಾ ಅಧ್ಯಕ್ಷರ ಜವಾಬ್ದಾರಿಯನ್ನು ನೀಡಿದ್ದಾರೆ ಎಂದು ತಿಳಿಸಿದರು.
ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನ ಮತ್ತು ಕಾರ್ಯಕರ್ತರ ಸಹಕಾರದಿಂದ ಪಕ್ಷದ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಅವರು ಹೇಳಿದರು. ಜೊತೆಗೆ ಸಮಾಜದ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಹಾಗೂ ಪಕ್ಷದ ತತ್ವಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ನಿಷ್ಠೆಯಿಂದ ಮಾಡುವೆ ಎಂದು ಭರವಸೆ ನೀಡಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ನೇಹಿತರು, ಹಸೇನಪ್ಪ ಹೆಚ್. ಸೂಲಂಗಿ ಅವರು ಸರಳ ಹಾಗೂ ಪರಿಶ್ರಮಿ ಕಾರ್ಯಕರ್ತರಾಗಿದ್ದು, ಮುಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮರಿಯಪ್ಪ (ಬಿಎಸ್ಪಿ), ದುರ್ಗಪ್ಪ ಬಾಲಿ, ಅಶೋಕ್ ಮೇಗಳಮನಿ, ಪಂಪಾಪತಿ ಕೆ. ಹಂಚಿನಾಳ, ಜಮದಗ್ನಿ ಕಾರಟಗಿ, ದುರ್ಗಪ್ಪ ಹೆಡಿಗಿಬಾಳ, ನಾಗರಾಜ್ ಹೆಡಿಗಿಬಾಳ, ಸುರೇಶ್ ಎಲೆ ಕೂಡ್ಲಿಗಿ, ಆಲಂಬಷ ಬೂದಿಹಾಳ್, ಹುಸೇನಪ್ಪ ವಿರುಪಾಪೂರ್ ಸೇರಿದಂತೆ ಅನೇಕ ಸ್ನೇಹಿತರು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *