ರಾಯಚೂರು ಮಾರ್ಚ್ 10 (ಕರ್ನಾಟಕ ವಾರ್ತೆ): ಇಲ್ಲಿನ ಜೆಸ್ಕಾಂ ಗ್ರಾಮೀಣ ಕಾರ್ಯ ಮತ್ತು ಪಾಲನೆ ಉಪ ವಿಭಾಗದ ವ್ಯಾಪ್ತಿಯ ಮಾಟಮಾರಿ 110/11 ಕೆವಿ ವಿದ್ಯುತ್ ಉಪ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವ ಪ್ರಯುಕ್ತ ಮಾರ್ಚ್ 12ರ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಮಟಮಾರಿ, ಗಾರಲದಿನ್ನಿ, ಆರೋಳ್ಳಿ, ನಾಗಲಾಪೂರ, ಪುರತಿಪ್ಲಿ, ಹೀರಾಪುರ, ಗಟ್ಟುಬಿಚ್ಚಾಲಿ, ಕಟಕ್ನೂರ್, ರಾಜೋಳ್ಳಿ, ಜುಕುರ್ ವ್ಯಾಪ್ತಿಯಲ್ಲಿ
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಜೆಸ್ಕಾಂ ಗ್ರಾಮೀಣ ಕಾರ್ಯ ಮತ್ತು ಪಾಲನೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

