ಸಮೀಪದ ನವಲಹಳ್ಳಿ ಗ್ರಾಮದಲ್ಲಿ ಭಾನುವಾರ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಮತ್ತು 52ನೇ ವರ್ಷದ ಪುರಾಣ ಪ್ರವಚನ ಮಂಗಲೋತ್ಸವ ಹಾಗೂ ಸಂಜೆ ಮಹಾರಥೋತ್ಸವ ಜರುಗಿತು.
ಬೆಳಿಗ್ಗೆ ಜಾತ್ರಾ ಮಹೋತ್ಸವ ಪ್ರಯುಕ್ತ ಶರಣಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಈಶ್ವರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ನಡೆದವು.
ನಂತರ ಸಕಲ ವಾದ್ಯಗಳೊಂದಿಗೆ ಮತ್ತು ಮಹಿಳೆಯರಿಂದ ಕುಂಭಕಳಸ ಮೆರವಣಿಗೆ ಮತ್ತು ಗೋಪೂರ ಕಳಸ ಪೂಜೆ, ಕಳಸಾರೋಹಣ ಜರುಗಿತು.
ಮಧ್ಯಾಹ್ನ ಶರಬಸವೇಶ್ವರ ಕಲ್ಯಾಣ ಮಂಟಪದಲ್ಲಿ 9 ಜೋಡಿ ಸಾಮೂಹಿಕ ವಿವಾಹ ಮತ್ತು ವಿವಿಧ ದಾರ್ಮಿಕ ಕಾರ್ಯಕ್ರಮಗಳು ನಡೆದವು. ಕುಷ್ಟಗಿ ಮದ್ದಾನಿಮಠದ ಕರಿಬಸವ ಶಿವಾಚಾರ್ಯರು, ಸಿದ್ದಬಸವ ಕಬೀರಾನಂದ ಸ್ವಾಮೀಜಿ, ಮಹಾಂತ ಬಸವಲಿಂಗ ಸ್ವಾಮೀಜಿ ಅವರು ವಧು-ವರರಿಗೆ ಆಶೀರ್ವಾದ ನೀಡಿದರು.
ಸಂಜೆ ನಡೆದ ಮಹಾ ರಥೋತ್ಸವಕ್ಕೆ ಎಂ.ಗುಡದೂರು ಮಠದ ನೀಲಕಂಠಯ್ಯ ತಾತನವರು ಚಾಲನೆ ನೀಡಿದರು. ಮಾಜಿ ಶಾಸಕ ಕೆ.ಶರಣಪ್ಪ, ಜಿ.ಪಂ ಮಾಜಿ ಸದಸ್ಯ ಕೆ.ಮಹೇಶ, ಮೇದಮೂರ್ತಿ ಮುರಗಯ್ಯಸ್ವಾಮಿ ಹಿರೇಮಠ, ವಕೀಲರಾದ ಅಮರೇಗೌಡ ಪಾಟೀಲ, ಬಸವರಾಜ ಬಿ., ಪ್ರಮುಖರಾದ ದೊಡ್ಡನಗೌಡ ಪಾಟೀಲ, ಬಸನಗೌಡ ಎನ್.ಪಾಟೀಲ, ಬಸವರಾಜ ಬಂಡೇರ್, ಅಮರೇಗೌಡ ಸಿ.ಪಾಟೀಲ, ಪರಸಪ್ಪ ಚಿಟಗಿ, ನಿಂಗಪ್ಪ ಬಾರಕೇರ, ನಿಂಗಪ್ಪ ಗುಂಡೂರು, ವಿ.ಬಿ.ಅಂಗಡಿ, ಗ್ರಾ.ಪಂ ಮಾಜಿ ಸದಸ್ಯರಾದ ಬಸವರಾಜ ಮ್ಯಾದರಡೊಕ್ಕಿ, ದುರಗೇಶ, ಗಂಗಮ್ಮ ಇದ್ದರು.

