ರಾಯಚೂರು ಮಾರ್ಚ್ 04 (ಕರ್ನಾಟಕ ವಾರ್ತೆ): ಮಾರ್ಚ 16ರಿಂದ ಮಾರ್ಚ 20ರವರೆಗೆ ಯುಗಾದಿ ಹಬ್ಬದ ಪ್ರಯುಕ್ತ ಶ್ರೀಶೈಲಂ ಶ್ರೀಮಲ್ಲಿಕಾರ್ಜುನ ಜಾತ್ರಗೆ ರಾಯಚೂರು ವಿಭಾಗದ ವ್ಯಾಪ್ತಿಯಲ್ಲಿ ಬರುವ ರಾಯಚೂರು, ಲಿಂಗಸೂಗುರು, ಸಿಂಧನೂರು, ಮಾನವಿ, ದೇವದುರ್ಗ, ಮಸ್ಕಿ ಘಟಕಗಳಿಂದ 280 ವಿಶೇಷ ಬಸ್ಸುಗಳ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ.
ಮಾರ್ಚ್ 16 ರಿಂದ 20ರವರೆಗೆ ಶ್ರೀಶೈಲಂ ಜಾತ್ರೆ ನಡೆಯುತ್ತಿದೆ. ಅಲ್ಲದೆ ಮಾರ್ಚ್ 19 ರಂದು ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ ಜರುಗಲಿದೆ.
ರಾಯಚೂರು-ಕರ್ನೂಲ್-ಶ್ರೀಶೈಲ್, ಸಿಂಧನೂರು-ಆದೋನಿ-ಶ್ರೀಶೈಲ್, ಸಿಂಧನೂರು-ರಾಯಚೂರು-ಕರ್ನೂಲ್-ಶ್ರೀಶೈಲ್, ಲಿಂಗಸುಗೂರು-ಮಸ್ಕಿ-ಸಿಂಧನೂರು-ಆದೋನಿ-ಶ್ರೀಶೈಲ್, ಮಾನವಿ-ಸಿಂಧನೂರು-ಕರ್ನೂಲ್-ಶ್ರೀಶೈಲ್, ಮಾನವಿ-ಸಿಂಧನೂರು-ಆದೋನಿ-ಶ್ರೀಶೈಲ್, ಮಸ್ಕಿ-ರಾಯಚೂರು-ಕರ್ನೂಲ್-ಶ್ರೀಶೈಲ್, ಮಸ್ಕಿ-ಸಿಂಧನೂರು-ಆದೋನಿ-ಶ್ರೀಶೈಲ್, ದೇವದುರ್ಗ-ರಾಯಚೂರು-ಕರ್ನೂಲ್-ಶ್ರೀಶೈಲ್ ಮಾರ್ಗವಾಗಿ ಬಸ್‌ಗಳು ಸಂಚಾರ ಮಾಡಲಿವೆ.
50 ಪ್ರಯಾಣಿಕರು ಲಭ್ಯವಿದ್ದಲ್ಲಿ ಅವರ ಸ್ವ-ಸ್ಥಳದಿಂದ ನೇರವಾಗಿ ಶ್ರೀಶೈಲಂಗೆ ಬಸ್ಸು ವ್ಯವಸ್ಥೆಯನ್ನು ಒದಗಿಸಲಾಗುವುದು. ಹಾಗೂ ಪ್ರಯಾಣಿಕರು ಮಹಾನಂದಿಗೆ ಹೋಗುವುದಕ್ಕೆ ಇಷ್ಟಪಟ್ಟಲ್ಲಿ ನಿಗದಿತ ಟಿಕೇಟ್ ದರದಂತೆ ಬಸ್ ಸೌಲಭ್ಯ ಒದಗಿಸಲಾಗುತ್ತಿದ್ದು, ಶ್ರೀ ಶ್ರೀಶೈಲಂ ಹೋಗಿ ಬರುವ ಪ್ರಯಾಣಿಕರು, ಈ ವಿಷೇಶ ಬಸ್ಸುಗಳ ಸೌಕರ್ಯವನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ರಾಯಚೂರು-1ನೇ ಘಟಕ ಮೊಬೈಲ್ ಸಂಖ್ಯೆ: 7760992363, ರಾಯಚೂರು-2ನೇ ಘಟಕ ಮೊಬೈಲ್ ಸಂಖ್ಯೆ: 7760992364, ರಾಯಚೂರು-3ನೇ ಘಟಕ ಮೊಬೈಲ್ ಸಂಖ್ಯೆ: 7619351087, ಲಿಂಗಸುಗೂರು ಘಟಕ ಮೊಬೈಲ್ ಸಂಖ್ಯೆ: 7760992365, ಸಿಂಧನೂರು ಘಟಕ ಮೊಬೈಲ್ ಸಂಖ್ಯೆ: 7760992366, ಮಾನವಿ ಘಟಕ ಮೊಬೈಲ್ ಸಂಖ್ಯೆ: 7760992367, ದೇವದುರ್ಗ ಘಟಕ ಮೊಬೈಲ್ ಸಂಖ್ಯೆ: 7760992368, ಮಸ್ಕಿ ಘಟಕ ಮೊಬೈಲ್ ಸಂಖ್ಯೆ: 7760992361, ಕೇಂದ್ರ ಬಸ್ ನಿಲ್ದಾಣ ರಾಯಚೂರು ಮೊಬೈಲ್ ಸಂಖ್ಯೆ: 7760992370 ಅಥವಾ ವಿಭಾಗೀಯ ಸಂಚಾರ ಅಧಿಕಾರಿ ಮೊಬೈಲ್ ಸಂಖ್ಯೆ: 7760992352ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಚಂದ್ರಶೇಖರ್ ಎಂ.ಎಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


