ಕವಿತಾಳ:
ಪಟ್ಟಣದ ಗಣೇಶ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಇಂದು ಸಂಜೆ ದೀಪೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ದೀಪೋತ್ಸವ ಪ್ರಯುಕ್ತ ಗಣೇಶ ಮೂರ್ತಿಗೆ ಪಂಚಾಮೃತ ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ವಿಧಿವಿದಾನಗಳನ್ನು ನೆರವೇರಿಸಲಾಯಿತು.
ಪುರುಷರಾದಿಯಾಗಿ, ಮಹಿಳೆಯರು ಮತ್ತು ಮಕ್ಕಳು ದೀಪ ಹಚ್ಚುವ ಮೂಲಕ ತಮ್ಮ ಭಕ್ತಿಸೇವೆಯನ್ನು ಸಲ್ಲಿಸಿದರು.
ಬಸಮ್ಮ ಅಮೀನಗಡ, ನೀಲಮ್ಮ ಅಮೀನಗಡ, ಮಾಧವಿ ಬಳ್ಳಾಋಇ, ಸುಜಾತ,ಲತಾ, ಕವಿತಾ ಹಿರೇಮಠ, ಭಾರತಿ, ಬಸಮ್ಮ ಸಜ್ಜನ್,ಶಂಕ್ರಣ್ಣ, ಸಂಗಮೇಶ ಸಾಲಿಮನಿ, ದೇವರಾಜ್, ತಾಯಣ್ಣಸ್ವಾಮಿ, ಸೇರಿದಂತೆ ಇನ್ನಿತರ ಭಕ್ತರು ಇದ್ದರು.
