ದೇವದುರ್ಗ:-ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿಗೆ ಸಮಾಜ ಸೇವೆ ಕ್ಷೇತ್ರ ಮತ್ತು ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಗ್ರಾಮದಲ್ಲಿ ಜನಿಸಿದ, ಪ್ರತಿಯೊಬ್ಬರ ಕಷ್ಟಕ್ಕೆ ಸ್ಪಂದಿಸುವ,ಯುವಕರ ಕಣ್ಮಣಿ ಮುದುಕಪ್ಪ ನಾಯಕ 108 ಆಂಬುಲೆನ್ಸ್ ಚಾಲಕರು ಆಯ್ಕೆಯಾಗಿದ್ದಾರೆ.
ಯುವ ಸ್ಪೋಟ ಪತ್ರಿಕೆ ವಾರ್ಷಿಕೋತ್ಸವ ಸಂಸ್ಥೆಯ ಒಂದನೇ ಕಾರ್ಯಕ್ರಮ ಹಾಗೂ ಯುವ ಸ್ಪೋಟ ನವ ಭಾರತ ಸೇವಾ ಟ್ರಸ್ಟ್ (ರಿ) ರಾಜ್ಯಮಟ್ಟದ ಸೇವಾ ಸಮ್ಮೇಳನ ಕಾರ್ಯಕ್ರಮದ ವತಿಯಿಂದ ಕೊಡುವ “ರಾಜ್ಯ ಮಟ್ಟದ ಕಾಯಕ ರತ್ನ” ಪ್ರಶಸ್ತಿಯನ್ನು ದಿನಾಂಕ:-28-11-2025 ರಂದು ದೇವದುರ್ಗ ಪಟ್ಟಣದ ಖೇಣೆದ ಫಂಕ್ಷನ್ ಹಾಲ್ ನಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ಸಾಮಜಿಕ ಮತ್ತು ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ. ವೃತ್ತಿಯಲ್ಲಿ ಇವರು 108 ಆರೋಗ್ಯ ಕವಚ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಪ್ರವೃತ್ತಿಯಲ್ಲಿ ಇವರೂ ಸಮಾಜಕ್ಕೆ ತನ್ನ ಕೈಲಾದ ಅಮೃತ ಹಸ್ತದ ಕಾರ್ಯವನ್ನು ಮಾಡುತ್ತಾ ಇರುತ್ತಾರೆ.ಮಕ್ಕಳಿಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ರೂಪಿಸುವ ನಿಟ್ಟಿನಲ್ಲಿ ಸರಕಾರಿ ಶಾಲೆಯ ಮಕ್ಕಳಿಗೆ ಕ್ರೀಡೆಗೆ ಪ್ರೋತ್ಸಾಹ ನೀಡುವ ಮೂಲಕ ಉತ್ಸುಕರಾಗಿದ್ದಾರೆ.
ಮುದುಕಪ್ಪ ನಾಯಕರ ಸಮಾಜ ಸೇವೆ ಮತ್ತು ಆರೋಗ್ಯ ರಕ್ಷಣೆ ಅಳಿಲು ಸೇವೆಯನ್ನು ಗುರುತಿಸಿ ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿಯನ್ನು “ಯುವ ಸ್ಪೋಟ ನವ ಭಾರತ ಸೇವಾ ಟ್ರಸ್ಟ್ (ರಿ), ಯುವ ಸ್ಪೋಟ ಪತ್ರಿಕೆ ವಾರ್ಷಿಕೋತ್ಸವ” ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು “ಗೌರವಾನ್ವಿತ ಶ್ರೀ ಆದರ್ಶ ನಾಯಕ ಸಂಸ್ಥಾಪಕರು ಅಧ್ಯಕ್ಷರು” ಯುವ ಸ್ಪೋಟ ನವ ಭಾರತ ಸೇವಾ ಸಂಸ್ಥೆ ದೇವದುರ್ಗ ಅವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿಗೆ ಆಯ್ಕೆಯಾದ ಇವರಿಗೆ ಎಲ್ಲಾ ಕಡೆಯಿಂದ ಸಾಧನೆಯನ್ನು ಮೆಚ್ಚಿ ಗ್ರಾಮದ ಹಿರಿಯರು,ಮುಖಂಡರು,ಆತ್ಮೀಯ ಬಂಧುಗಳು, ಹಿತೈಷಿಗಳೂ, ಗೆಳಯರ ಬಳಗ, ಕುಟುಂಬ ವರ್ಗದವರು ಪ್ರಶಸ್ತಿ ಲಭಿಸಿದಕ್ಕೆ ತುಂಬು ಹೃದಯದ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *