ರಾಯಚೂರು ಜಿಲ್ಲಾ ಕಾಂಗ್ರೆಸ್ ವತಿಯಿಂದ 22 ನವೆಂಬರ್ ಕರ್ನಾಟಕ ರಾಜ್ಯದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಮುಖ ನಾಯಕರು ಹಾಗೂ ಪ್ರಸ್ತುತ ಸಚಿವ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು . ಚಿತ್ತಾಪುರ ಕ್ಷೇತ್ರದ ಶಾಸಕರು ಹಾಗೂ ಡಿಜಿಟಲ್ ಆಡಳಿತ, ಗ್ರಾಮೀಣ ಸಬಲೀಕರಣ ಮತ್ತು ರಾಜಕೀಯದಲ್ಲಿ ಯುವಜನರ ಪಾಲ್ಗೊಳ್ಳುವಿಕೆಯನ್ನು ಸಕ್ರಿಯವಾಗಿ ಪ್ರತಿಪಾದಿಸುತ್ತಿರುವ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸುಪುತ್ರರಾಗಿರುವ ಪ್ರಿಯಾಂಕಾ ಖರ್ಗೆ ರವರ ಹುಟ್ಟುಹಬ್ಬವನ್ನು ಕೇಕ್ ಕಟ್ ಮಾಡಿ ಅಣ್ಣ ಪ್ರಸಾದ್ ಮಾಡಿಸುವ ಮೂಲಕ ಸಿಹಿ ತಿನಿಸಿ ಆಚರಣೆ ಮಾಡಲಾಯಿತು..
ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ವಿಧಾನ ಪರಿಷತ್ ಶಾಸಕರಾದ ವಸಂತ್ ಕುಮಾರ್, ಕಾಂಗ್ರೆಸ್ ರಾಯಚೂರು ಜಿಲ್ಲಾ ಜಂಟಿ ಕಾರ್ಯದರ್ಶಿ ಶ್ರೀನಿವಾಸ , ಕಾಂಗ್ರೆಸ್ ಮುಖಂಡರಾದ ಅಸ್ಲಾಂ ಪಾಷಾ , ಮುಖಂಡರಾದ ಅಬ್ದುಲ್ ಕರೀಮ್ , ಜಿ ಕುಮಾರ್ ಇನ್ನಿತರ ಮುಖಂಡರು ಉಪಸ್ಥಿತರಿದ್ದರು…


