ಹಾಲಾಪೂರ ನಾಡಕಚೇರಿಯಲ್ಲಿ 12ನೇ ಶತಮಾನದ ಶ್ರೇಷ್ಠ ಶಿವಶರಣರು, ವಚನಕಾರರಲ್ಲಿ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ರವರ ಸಾಮಾಜಿಕ ನ್ಯಾಯದ ಪರಿವರ್ತನೆ ಬದಲಾವಣೆ ಅತ್ಯಂತ ಮಹತ್ವಪೂರ್ಣ ಹೆಜ್ಜೆ ಇಟ್ಟಿರುವ ಶ್ರೇಷ್ಠ ಮಹನ್ ಪುರುಷರು, ಇವರು ವೃತ್ತಿಯಲ್ಲಿ ಅಂಬಿಗರು, ಪ್ರವೃತ್ತಿಯಲ್ಲಿ ಅನುಭಾವಿಗಳು ನೇರ ವ್ಯಕ್ತಿತ್ವ, ನಿರ್ಭಿತ ವಚನಗಳು ನುಡಿಗಳಿಂದ ಜನಮನದಲ್ಲಿ ಅತ್ಯಂತ ಪ್ರಸಿದ್ಧತೆ ಪಡೆದಿರುವ ಪುರುಷರಾಗಿದ್ದರು, ಇವರು ವಿಶ್ವಜ್ಯೋತಿ ಶ್ರೀ ಬಸವೇಶ್ವರ ಇವರಿಂದ ಲಿಂಗ ದೀಕ್ಷೆಯನ್ನು ಪಡೆದರು. ಮುಂದೆ ಅಂಬಿಗರ ಚೌಡಯ್ಯ ಇವರ ವಚನಗಳ ನಾಮಾಂಕಿತವಾಗಿ ಜನರ ಹೃದಯದಲ್ಲಿ ನೆಲೆಯೂರಿತು. ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಕೃಷ್ಣಪ್ಪ, ಕಂಪ್ಯೂಟರ್ ಆಪರೇಟರ್ ಚನ್ನನಗೌಡ, ಯಂಕಪ್ಪ ತಳವಾರ, ಚಂದಪ್ಪ, ಮೌನೇಶ್ ಹಾಲಾಪೂರ ಹಾಗೂ ಇನ್ನಿತರರು ಇದ್ದರು.

