ಅಂಬಿಗರ ಚೌಡಯ್ಯ 12ನೇ ಶತಮಾನದ ಶರಣ ಸಂತರು ಹಾಗೂ ವಚನಕಾರರು. ಇವರು “ಕಾಯಕವೇ ಕೈಲಾಸ” ಸಮಾನತೆ, ದಾಸೋಹ, ಸತ್ಯ, ನೀತಿ, ಮತ್ತು ಮಾನವೀಯತೆಯೇ ಅವರ ಜೀವನದ ಮೂಲ ಆದರ್ಶಗಳು. ಅವುಗಳನ್ನು ಆಚರಿಸುವುದರ ಮೂಲಕ ಶ್ರಮದ ಗೌರವ, ಸಾಮಾಜಿಕ ಸಮಾನತೆ ಮತ್ತು ನೈತಿಕ ಬದುಕಿನ ಮಹತ್ವವನ್ನು ನೆನಪಿಸಿಕೊಳ್ಳಲಾಗುತ್ತದೆ. ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ನಲ್ಲಾ ವೆಂಕಟೇಶ್ವರರಾವ್ ಹೇಳಿದರು.
ತುರುವಿಹಾಳ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂಬಿಗರ ಚೌಡಯ್ಯ ಜಯಂತಿಯನ್ನು ಆಚರಿಸಿದ ಮಾತನಾಡಿದ ಅವರು, ಕಾಯಕವೇ ಕೈಲಾಸ, ಪ್ರಾಮಾಣಿಕ ಶ್ರಮವೇ ಪೂಜೆ ಎಂದು ನಂಬಿದ್ದರು. ದುಡಿಯದೇ ಬದುಕುವುದು ತಪ್ಪು ಎಂಬ ಸಂದೇಶ ನೀಡಿದರು. ಸಮಾನತೆ ಜಾತಿ, ವರ್ಗ, ಲಿಂಗ ಭೇದವಿಲ್ಲದೆ ಎಲ್ಲರೂ ಸಮಾನರು ಎಂದು ಸಾರಿ ಭಕ್ತಿ
ಸರಳತೆ ಬಾಹ್ಯ ಆಚಾರಗಳಿಗಿಂತ ಒಳಗಿನ ಶುದ್ಧ ಭಕ್ತಿ ಮುಖ್ಯ ಎಂದು ಸತ್ಯ ಮತ್ತು ನೀತಿ ಸತ್ಯವಚನ, ನೈತಿಕ ಜೀವನಕ್ಕೆ ಒತ್ತು ನೀಡಿದರು.
ದುಡಿಯುವುದರಿಂದ ಬಂದ ಆದಾಯವನ್ನು ಇತರರೊಂದಿಗೆ ಹಂಚಿಕೊಳ್ಳಬೇಕು ಎಂಬ ಮನೋಭಾವ, ಅಹಂಕಾರದ ವಿರೋಧ, ಗರ್ವ, ಐಶ್ವರ್ಯ ಪ್ರದರ್ಶನ, ಸುಳ್ಳು ಭಕ್ತಿಯನ್ನು ತೀವ್ರವಾಗಿ ಟೀಕಿಸಿದರು. ಮಾನವೀಯತೆ, ಬಡವರು, ಶೋಷಿತರ ಮೇಲೆ ಕರುಣೆ ಮತ್ತು ಸಹಾನುಭೂತಿಯನ್ನು ತೋರಬೇಕು ಅಂದಾಗ ಮಾತ್ರ ಈ ಜಯಂತಿಗಳಿಗೆ ಅರ್ಥ ಬರುತ್ತದೆ ಎಂದು ಹೇಳಿದರು.
ಕುಮಾರ ಸಂತೋಷ ಮಾತನಾಡಿ, ಅಂಬಿಗರ ಚೌಡಯ್ಯ ನವರು ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಅಂದಿನ ಶಿವಪುರ ಇಂದಿನ ಚೌಡದಾನಪುರದಲ್ಲಿ ಜನಿಸಿದರು, ತಂದೆ ವಿರೂಪಾಕ್ಷ, ತಾಯಿ ಪಂಪಾದೇವಿಯ ಪುಣ್ಯ ಗರ್ಭದಲ್ಲಿ 1120ರ ಜನವರಿ 21ರಂದು ಜನಿಸಿ ತ್ರಿಪುರಗಳಲ್ಲಿ ಒಂದಾದ ನರಸೀಪುರದಲ್ಲಿ ಇರುವ ಉದ್ದಾಲಕ ಮುನಿಗಳ ಆಶ್ರಮದಲ್ಲಿ ಸಕಲ ವಿದ್ಯೆಗಳನ್ನು ಪಡೆದು, ಮುಂದೆ ಬಸವಣ್ಣನವರು ಸ್ಥಾಪಿಸಿದ ವಿಶ್ವದ ಪ್ರಪ್ರಥಮ ಪಾರ್ಲಿಮೆಂಟ್ ಆದ ಅನುಭವ ಮಂಟಪದಲ್ಲಿ ಭಾಗವಹಿಸಿ ಶೂನ್ಯ ಪೀಠಾಧ್ಯಕ್ಷರಾದ ಅಲ್ಲಮಪ್ರಭುಗಳು, ಅಣ್ಣಬಸವಣ್ಣ, ಅಕ್ಕಮಹಾದೇವಿ, ಶಿವಯೋಗಿ ಸಿದ್ಧರಾಮೇಶ್ವರರು, ಹಡಪದ ಅಪ್ಪಣ್ಣ, ಮಡಿವಾಳ ಮಾಚಯ್ಯ, ನುಲಿಯ ಚಂದಯ್ಯ ಮುಂತಾದ ಶರಣರ ಅನುಭಾವ ಚಿಂತನೆ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಆದಿಕವಿ ಶ್ರೀ ವಾಲ್ಮೀಕಿ ವಿಶ್ವವಿದ್ಯಾನಿಲಯದ ವಿದ್ಯಾ ವಿಷಯಕ ಪರಿಷತ್ತಿನ ಸದಸ್ಯರು ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಚಂದ್ರಶೇಖರಗೌಡ ಪೊಲೀಸ್ ಪಾಟೀಲ್, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಜೈರುದ್ದೀನ್ ಸಾಬ್, ಸಿದ್ದರಾಮಯ್ಯ, ಯಂಕಪ್ಪ, ದುರುಗಪ್ಪ, ಬಾಲಾಜಿ, ವೀರಭದ್ರಗೌಡ, ರಾಜಪ್ಪ, ಸಾಯಿಕುಮಾರ, ಶಂಕರಲಿಂಗ, ಲಕ್ಷ್ಮಿ ಗಂಡ ಸೋಮನಾಥ, ಪ್ರಾಂಶುಪಾಲರಾದ ಡಾ.ಕೆ.ಖಾದರ್ ಭಾಷಾ, ಸಹ ಪ್ರಾಧ್ಯಾಪಕರಾದ ಡಾ.ವೆಂಕಟರಮಣ, ಸಹಾಯಕ ಪ್ರಾಧ್ಯಾಪಕರಾದ ಡಾ.ದೇವಿದಾಸ, ಮೌಲಾಸಾಬ್, ಹನುಮೇಶ, ರಾಜೇಶ, ಗಂಗಾಬಾಯಿ, ಉಪನ್ಯಾಸಕರಾದ ಮಹಾದೇವ, ಭೀಮಾಶಂಕರ, ತಿಮ್ಮಯ್ಯ, ಬಸವರಾಜ, ನರಸಣ್ಣ, ನಾಗರಾಜ, ಶಿವಶರಣಪ್ಪ, ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

