ಲಿಂಗಸಗೂರು :- ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಜೊತೆಗೆ ಸಮಸ್ಯೆಗಳೂ ಹೆಚ್ಚುತ್ತಲೇ ಇವೆ. ಪುರಸಭೆ ಸಾರ್ವಜನಿಕರ ಸಮಸ್ಯೆ ನಿವಾರಣೆಗೆ ಮುಂದಾಗಬೇಕೆಂದು ನಮ್ಮ ಕರವೇ ತಾಲೂಕ ಅಧ್ಯಕ್ಷ ತಿಮ್ಮರೆಡ್ಡಿ ಮುನ್ನೂರು ಪುರಸಭೆಯ ಮುಖ್ಯಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿ ಒತ್ತಾಯಿಸಿದರು .
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪೂರ್ತಿಗೊಳಿಸಿ, ಜನಸಾಮಾನ್ಯರ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಆಡಳಿತ ಅನುವು ಮಾಡಿಕೊಡಬೇಕು.
ಬೆಂಗಳೂರು ಬೈ ಪಾಸ್ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ತಾಂಡವವಾಡುತ್ತಿದೆ. ಕೂಡಲೇ ಖಾಸಗಿ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಿ, ಸುಗಮ ಪಾಕಿರ್ಂಗ್ ವ್ಯವಸ್ಥೆ ಮಾಡಿಸಬೇಕು.
ಪಟ್ಟಣದ ಹಳೇ ಬಸ್ಟಾಂಡ್‌ನಲ್ಲಿ ಒತ್ತುವರಿ ಮಾಡಿದ ಸರಕಾರಿ ಜಮೀನನ್ನು ತೆರವು ಗೊಳಿಸಬೇಕು. ಫುಟ್ ಪಾತ್ ಹೋಟೆಲ್‌ಗಳ ಮುಸುರಿ ನೀರನ್ನು ಬಸ್ಟ್ಯಾಂಡ್ ಬಳಿಯ ಡಿವೈಡರ್‌ಗಳ ಮೇಲೆ ಚೆಲ್ಲುತ್ತಿರುವ ಪರಿಣಾಮ ದನಗಳು, ನಾಯಿಗಳು ಅದನ್ನು ತಿನ್ನಲು ಬರುತ್ತವೆ. ಇದರಿಂದ ವಾಹನ ಸವಾರರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ. ಕೂಡಲೇ ಫುಟ್‌ಪಾತ್ ವ್ಯಾಪಾರಿಗಳಿಗೆ ಮುಸುರಿ ನೀರು ಚೆಲ್ಲದಂತೆ ತಾಕೀತು ಮಾಡಬೇಕು. ತರಕಾರಿ ಮಾರ್ಕೆಟ್ ಕಾಮಗಾರಿ ಅರ್ಧದಲ್ಲೇ ನಿಂತಿದ್ದು, ಕೂಡಲೇ ಕಾಮಗಾರಿ ಆರಂಭಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಬೇಕು. ಬೀದಿ ನಾಯಿಗಳು, ಬಿಡಾಡಿ ದನಗಳು ರಸ್ತೆಗೆ ಬಂದು ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದ್ದು, ತ್ವರಿತವಾಗಿ ಕ್ರಮಕ್ಕೆ ಮುಂದಾಗಬೇಕು.
ಹಳೆ ಬಸ್‌ಸ್ಟ್ಯಾಂಡ್ ಒತ್ತುವರಿ ಕೆಲವರು ಮಾಡಿಕೊಂಡು ಬಾಡಿಗೆಯನ್ನು ತಿನ್ನುತ್ತಿದ್ದಾರೆ. ಹಾಗಾಗಿ ಕೂಡಲೇ ಅಲ್ಲಿದ್ದವರನ್ನು ತೆರವುಗೊಳಿಸಿ, ಪುರಸಭೆಯವರು ಮಳಿಗೆ ಕಟ್ಟುವಂತಹ ಕೆಲಸವಾಗಬೇಕು.
ಜಿಟಿಟಿಸಿ ಕಾಲೇಜು ಪಕ್ಕದ ಹಳ್ಳದಲ್ಲಿ ಚಿಕನ್ ಅಂಗಡಿಗಳ ತ್ಯಾಜ್ಯ, ಸತ್ತ ಪ್ರಾಣಿಗಳನ್ನು ಎಸೆಯುತ್ತಾರೆ. ಇದರಿಂದ ಸುತ್ತಮುತ್ತಲ ಜನರು ಅನಾರೋಗ್ಯದ ವಾತಾವರಣದಲ್ಲಿ ಜೀವಿಸುವಂತಾಗಿದೆ. ಹಳೇ ಬಸ್ಟಾಂಡ್, ಸಂತೆ ಬಜಾರ್ ಏರಿಯಾದಲ್ಲಿರುವ ಚಿಕನ್ ಅಂಗಡಿಗಳ ಮಾಲೀಕರಿಗೆ ಹಳ್ಳದಲ್ಲಿ ತ್ಯಾಜ್ಯ ಎಸೆಯದಂತೆ ತಾಕೀತು ಮಾಡಬೇಕು. ಪುರಸಭೆ ವ್ಯಾಪ್ತಿಯಲ್ಲಿ ಖಾಲಿ ಇರುವ ನಿವೇಶನಗಳಲ್ಲಿ ಜಾಲಿ ಮುಳ್ಳು ಬೆಳೆದು 7, 9, 14, 15, 17 ವಾರ್ಡುಗಳು ಸೇರಿ ವಿವಿಧ ಬಡಾವಣೆಗಳಲ್ಲಿ ಹುಳುಹುಪ್ಪಡಿಗಳ ಕಾಟ ಹೆಚ್ಚಾಗಿದೆ. ಖಾಸಗಿ ನಿವೇಶನಗಳ ಮಾಲೀಕರಿಗೆ ದಂಡ ಹಾಕಿ, ಪ್ಲಾಟ್‌ಗಳನ್ನು ಸ್ವಚ್ಛ ಮಾಡಿಸಬೇಕು.
ಪಟ್ಟಣದ ಎಸ್.ಎಲ್.ವಿ. ಹೋಟೆಲ್ ಪಕ್ಕದ ಹಳ್ಳದಲ್ಲಿ ತ್ಯಾಜ್ಯ ತುಂಬಿ ವಾತಾವರಣ ಕಲುಷಿತವಾಗಿದೆ. ಕೂಡಲೇ ತ್ಯಾಜ್ಯ ತೆಗೆಸಿ, ಹಳ್ಳವನ್ನು ಸ್ವಚ್ಛಗೊಳಿಸಬೇಕು.
ಗಡಿಯಾರ ಚೌಕದಿಂದ ಸಂತೆಬಜಾರ್ ಹೋಗುವ ರಸ್ತೆ ಕಾಮಗಾರಿ ಸ್ಥಗಿತವಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ತುರ್ತಾಗಿ ಕಾಮಗಾರಿ ಆರಂಭಿಸಿ ಜನರಿಗೆ, ಹಾಗೂ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಬೇಕು.
ಗಡಿಯಾರ ಚೌಕದಿಂದ ಮಲ್ಲಯ್ಯತಾತಾ ಗದ್ದಿಗೆವರೆಗೆ ಸಿಸಿ ರಸ್ತೆ ಕಾಮಗಾರಿ ಆಗಿದ್ದು, ಗುತ್ತಿಗೆದಾರರು ಅಲ್ಲಲ್ಲಿ ಕಲ್ಲು, ಮಣ್ಣುಗಳನ್ನು ಬಿಟ್ಟಿರುತ್ತಾರೆ. ಕೂಡಲೇ ಕಾಂಟ್ರಾಕ್ಟರಗಳನ್ನು ಕರೆಯಿಸಿ. ಅವುಗಳನ್ನು ತೆರವುಗೊಳಿಸಬೇಕು.
ಸಂತೆಬಜಾರ್ ಹೋಗುವ ರಸ್ತೆ ಕಾಮಗಾರಿ ಸ್ಥಗಿತವಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ತುರ್ತಾಗಿ ಕಾಮಗಾರಿ ಆರಂಭಿಸಿ ಜನರಿಗೆ, ಹಾಗೂ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಬೇಕು.
6ನೇ ವಾರ್ಡಿನಲ್ಲಿರುವ ನಾಲಾಕ್ಕೆ ಕುರಿ-ಕೋಳಿಗಳನ್ನು ಕೊಯ್ದ ತ್ಯಾಜ್ಯಗಳನ್ನು ಎಸೆಯುತ್ತಿದ್ದಾರೆ. ಅದನ್ನು ಎಸೆಯದಂತೆ ಕ್ರಮ ಕೈಗೊಳ್ಳಬೇಕು.
ಬೇಸಿಗೆ ಕಾಲ ಬರುತ್ತಿರುವ ಪರಿಣಾಮ ಪುರಸಭೆ ವ್ಯಾಪ್ತಿಯ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು.
ಪುರಸಭೆ ವ್ಯಾಪ್ತಿಯಲ್ಲಿನ ಉದ್ಯಾನವನಗಳ ಸ್ವಚ್ಛತೆ ಮಾಡಿಸುವ ಮೂಲಕ ಸಾರ್ವಜನಿಕರ ವಿಶ್ರಾಂತಿಗೆ ವ್ಯವಸ್ಥೆ ಮಾಡಬೇಕೆಂದು ತಿಳಿಸಿದರು ಈ ಸಂದರ್ಭದಲ್ಲಿ ರಮೇಶ್ ಗುತ್ತೇದಾರ , ಭೀಮೇಶ್ ಎಲ್ ನಾಯಕ್ , ಅಶೋಕ್ ಗಸ್ತಿ , ಯಲ್ಲಪ್ಪ ಬಂಡಿ , ಹಿಟ್ಲರ್ ಮೇಕ್ಯನಿಕ್ , ರವಿಕುಮಾರ್ , ಶ್ರೀರಾಮ್ ಗುಂಟಿ , ಉದಯ ಕುಮಾರ್ , ವಿಜಯ ಕುಮಾರ್ ಪೋಳ್ , ಈರಪ್ಪ ಯಲಗಲಾದಿನ್ನಿ , ಹನುಮಂತ ಯಲಗಲಾದಿನ್ನಿ , ಈರಣ್ಣ ರೆಡ್ಡಿ , ಶರಣಮ್ಮ ಹೊನ್ನೂರು , ಲಕ್ಷ್ಮಿ ಅಂಕನಾಳ್ ಸೇರಿದಂತೆ ಇತರರು ಇದ್ದರು .

