ಕವಿತಾಳ : ಪಟ್ಟಣ ಸಮೀಪದ ವಟಗಲ್ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ನೂತನ ಎಸ್‌ಡಿಎಂಸಿ ರಚನೆ ಮಾಡಲಾಯಿತು ಅಧ್ಯಕ್ಷರಾಗಿ ಅಮರೇಶ ಸಾನಬಾಳ, ಉಪಾದ್ಯಕ್ಷರಾಗಿ ಮಲ್ಲಮ್ಮ ಮಲ್ಲಪ್ಪ ಜಡಿದರ್ ಅವರನ್ನಾಗಿ ಆಯ್ಕೆ ಮಡಲಾಯಿತು.
ಒಟ್ಟು ೧೮ಜನ ನೂತನ ಸದಸ್ಯರನ್ನು ಮೊದಲು ಆಯ್ಕೆ ಮಾಡಲಾಯಿತು ಆಯ್ಕೆಯಾದ ಸದಸ್ಯರಲ್ಲಿ ೧೦ಜನ ಸದಸ್ಯರು ಅಧ್ಯಕ್ಷ ಉಪಾದ್ಯಕ್ಷರ ಪರವಾಗಿ ಮತದಾನ ಮಾಡುವ ಮುಲಕ ಆಯ್ಕೆ ಮಾಡಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು,ಉಪಾದ್ಯಕ್ಷರು, ಪಿಡಿಓ ಹಾಗೂ ಮುಖ್ಯ ಶಿಕ್ಷಕಿ, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.


