ಕವಿತಾಳ :
ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಮೂರ್ತಿ ಅನಾವರಣ ಮಾಡಲು ವಾಲ್ಮೀಕಿ ಸಮಾಜ ಮುಖಂಡ ಭೀಮಣ್ಣ ನಾಯಕ್ ಕಾಚಾಪೂರ ಒತ್ತಾಯಿಸಿದ್ದಾರೆ.
ಅವರು ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
`ಮಹರ್ಷಿ ವಾಲ್ಮೀಕಿ ಪುತ್ತಳಿ ಅನಾವರಣ ಕುರಿತಾಗಿ ನಡೆದ ಘಟನೆಯಲ್ಲಿ ರಾಜಕೀಯ ಪಕ್ಷಗಳ ಜಿದ್ದಾಜಿದ್ದಿ ವಾಲ್ಮೀಕಿಗೆ ಮಾಡುವ ಅನ್ಯಾಯ ಇದು ಶ್ರೀ ರಾಮುಲು ಅವರಿಗೆ ಅವಮಾನ ಆಗಿಲ್ಲ ಬದಲಿಗೆ ರಾಮಾಯಣ ಗ್ರಂಥ ಬರೆದ ಶ್ರೀ ಮಹರ್ಷಿ ವಾಲ್ಮೀಕಿ ಅವರಿಗೆ ಆದಂತ ಅವಮಾನ ಆದ್ದರಿಂದ ಶ್ರೀ ಮಹರ್ಷಿ ಮೂರ್ತಿ ಅನಾವರಣದಲ್ಲಿ ರಾಜಕೀಯ ಬೆಡ ಪಕ್ಷಬೇದ ಮರೆತು ನಾಯಕ ಸಮಾಜದ ಜನರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಸೇರಿ ವಾಲ್ಮೀಕಿ ಮೂರ್ತಿ ಅನಾವರಣ ಮಾಡೋಣ’ ಎಂದು ಹೇಳಿದರು.

`ನನ್ನ ಎಲ್ಲ ಕುಲಬಾಂಧವರು ರಾಜಕೀಯ ಪಕ್ಷವನ್ನು ಬಿಟ್ಟು ಹೊರಬನ್ನಿ ಸಮಾಜದ ಋಣ ತೀರಿಸಲು ಹೋರಾಡೋಣ, ಗುಲಾಮಗಿರಿ ಬಿಡಿ ಸಮಾಜದ ವತಿಯಿಂದ ಮೂರ್ತಿಯನ್ನು ಅನಾವರಣ ಗೊಳಿಸೋಣ ಎಂದು ಮನವಿ ಮಾಡಿದರು ಮತ್ತು ಮುಂದಿನ ತಿಂಗಳು ೮.೯.೨೦೨೬ ರಂದು ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆ ಇರುವ ಕಾರಣ ಜಾತ್ರೆಗೆ ಮುಂಚಿತವಾಗಿ ಬಳ್ಳಾರಿಯಲ್ಲಿ ಮಹಿರ್ಷಿಗಳ ಮೂರ್ತಿ ಅನಾವರಣ ಮಾಡಲು ವಾಲ್ಮೀಕಿ ಸಮಜದ ಮುಖಂಡರು ಕ್ರಮ ಕೈಗೊಳ್ಳಬೇಕು ಇಲ್ಲವಾದರೇ ಇದರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಯಂಕೋಬ ನಾಯಕ ಮಲ್ಲದಗುಡ್ಡ,ಬಸವರಾಜ ನಾಯಕಸೈದಾಪುರ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *