ಮಾನ್ವಿ: ಪಟ್ಟಣದ ಶ್ರೀ ವಿರೂಪಾಕ್ಷೇಶ್ವರ ಸೌಹಾರ್ಧ ಸಹಕಾರಿಯ ಸಭಾಂಗಣದಲ್ಲಿ ರಾಯಚೂರು ಜಿಲ್ಲಾ ಸಹಕಾರ ಭಾರತಿ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ನಡೆದ ಸಮಾಲೋಚನೆ ಹಾಗೂ ನೋಂದಣಿ ಕಾರ್ಯಕ್ರಮ ಸಹಕಾರ ಭಾರತಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಅಮರೇಗೌಡ ನಕ್ಕುಂದಿ ರವರು ಸಹಕಾರ ಭಾರತೀಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷö್ಮಣರಾವ್ ಇನಾಂದರ್ ರವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವ ಮೂಲಕ ಚಾಲನೆ ನೀಡಿ ಮಾತನಾಡಿ ರಾಜ್ಯದಲ್ಲಿ ಸಹಾಕರಿ ಸಂಸ್ಥೆಗಳ ಬೆಳವಣಿಗೆಯಲ್ಲಿ ಅಂಗ ಸಂಸ್ಥೆಯಾಗಿ ಸಹಕಾರ ಭಾರತಿ ಕಾರ್ಯನಿರ್ವಹಿಸುತ್ತಿದೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ನೋಂದಾಯಿಸಿಕೊಂಡು ತಾಲೂಕಿನ ಸಹಕಾರ ಭಾರತಿ ಸಂಸ್ಥೆಯ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗುವುದು ಎಂದು ತಿಳಿಸಿದರು.
ಮಾನವಿ ಪಟ್ಟಣ ಸಹಕಾರಿ ಸೌಹಾರ್ಧ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಕ ಅಧಿಕಾರಿಗಳಾದ ನಾಗರಾಜ್ ಮಾತನಾಡಿ 1978 ರಲ್ಲಿ ಸಹಕಾರ ಭಾರತಿ ಸ್ಥಾಪನೆಯಾಗಿದ್ದು ಸಹಕಾರ ಭಾರತಿ ಸಹಕಾರಿ ಸಂಸ್ಥೆಗಳ ಸಹಕಾರಿಗಳ ಜವಾಬ್ದಾರಿಗಳನ್ನು ಹಿತಾಸಕ್ತಿಯನ್ನು ಕಾಪಾಡುವಲ್ಲಿ ಶ್ರಮಿಸುತ್ತಿದೆ. ಸಂಸ್ಕಾರ ಮತ್ತು ಸಹಕಾರ ಇಲ್ಲದೆ ಉದ್ದಾರ ಸಾಧ್ಯವಿಲ್ಲ ಎನ್ನುವುದು ಸಹಕಾರ ಭಾರತಿಯ ಮೂಲ ಆಶಾಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರ್.ಕೆ.ಡಿ.ಸಿ.ಸಿ. ಬ್ಯಾಂಕಿನ ನಿರ್ದೇಶಕರಾದ ಮಲ್ಲನಗೌಡ ನಕ್ಕುಂದಿ, ಕಲಬುರ್ಗಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ರಾಜಕುಮಾರ್. ಜಿಲ್ಲಾ ಪ್ರ. ಕಾರ್ಯದರ್ಶಿ ಬಸವರಾಜ. ಬಿ, ಜಿಲ್ಲಾ ಮಹಿಳಾ ಪ್ರಮುಖ್ ರಾದ ನಾಗರತ್ನಮ್ಮ ಪಾಟೀಲ, ತಾಲೂಕಿನ ವಿವಿಧ ಸಹಕಾರಿ ಸಂಸ್ಥೆಯ ಅಧ್ಯಕ್ಷರಾದ ಆರ್. ಬಸವರಾಜ್, ರವಿಕುಮಾರ್ ಪಾಟೀಲ್ ವಕೀಲರು, ಮುತ್ತಣ್ಣ,ಹೆಚ್.ಮೌನೇಶ್ ಗೌಡ , ವಿವಿಧ ಸಹಕಾರಿ ಸಂಸ್ಥೆಗಳ ಕಾರ್ಯನಿರ್ವಹಕ ಅಧಿಕಾರಿಗಳಾದ ಶಂಕರಾನAದ,ಅಜೇಯ್ ಕುಮಾರ್, ದೇವರಾಜ ಪೊತ್ನಾಳ್ ಸೇರಿದಂತೆ ತಾಲೂಕಿನ ವಿವಿಧ ಸಹಕಾರಿ ಸಂಸ್ಥೆಗಳ ಪದಾಧಿಕಾರಿಗಳು , ಸಿಬ್ಬಂದಿಗಳು ಭಾಗವಹಿಸಿದರು.

