ಕರ್ನಾಟಕ ರಾಜ್ಯ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಇಲಾಖೆ ಬೆಂಗಳೂರು 2024-25ನೇ ಸಾಲಿನ ಶ್ರಮ ಸಾಮರ್ಥ್ಯ ಯೋಜನೆ ಅಡಿಯಲ್ಲಿ ವಿವಿಧ ವೃತ್ತಿಗಳ (ಎಲೆಕ್ಟ್ರಿಶೀಯನ್, ಮೇಸನ್, ವೇಲ್ಡರ್, ಕಾರ್ಪೆಂಟರ್, ತೆಯುoಚರ್, ಮತ್ತು ಪ್ಲಾಂಟರ್, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ವಿವಿಧ ವೃತ್ತಿಗಳಲ್ಲಿ ಕೆಲಸಗಳ ಕಾರ್ಮಿಕರಿಗೆ ವೃತ್ತಿಯ ಸುರಕ್ಷಾ ಕಿಟ್ ಗಳನ್ನು ನೋಂದಾಯಿತಾ ಫಲನುಭವಿಗಳಿಗೆ ಜನವರಿ 21 ಬುಧವಾರ ಶಾಸಕ ಹಂಪನಗೌಡ ಬಾದರ್ಲಿ ವಿತರಿಸಿದರು.
ಈ ವೇಳೆ: ಕಾರ್ಮಿಕ ನಿರೀಕ್ಷರಾದ ವಿಜಯಲಕ್ಷ್ಮಿ, ಕಚೇರಿ ಸಿಬ್ಬಂದಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಲಿಂಗಪ್ಪ ಎಂ.ಧಡೇಸೂಗೂರು, ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಬಸವರಾಜ ನಿಟ್ಟೂರು ಮಲ್ಲಾಪುರ, ಪಕ್ಷದ ಮುಖಂಡರಾದ ಅಮರೇಶ ಎನ್, ಶಬ್ಬೀರ ನಾಯಕ, ಸೂಗರಪ್ಪಗೌಡ ಬನ್ನಿಗನೂರ, ಸೇರಿದಂತೆ ಅನೇಕರು ಇದ್ದರು.

