ಸಿಂಧನೂರು ಜ21 ತ್ರಿವಿಧ ದಾಸೋಹಿಮೂರ್ತಿಗಳಾದ ಸಿದ್ದಗಂಗಾ ಮಠದ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳ 7ನೇ ವರ್ಷದ ಪುಣ್ಯರಾಧನೆಯ ದಾಸೋಹ ದಿನ ಹಾಗೂ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ವಿಶ್ವ ಆರ್. ಎಂ.ಎಸ್.ಮೊಬೈಲ್ ಶಾಪ್ ಸಿಂಧನೂರು ವೀರೇಶಗೌಡ ಸೋಮಲಾಪುರ ಮಾಲೀಕರು – ಪ್ರಿಯಾಂಗ ಸೂಪರ್ ಮಾರ್ಕೆಟ್, ಒಳಬಳ್ಳಾರಿ ರಸ್ತೆ ಸಿಂಧನೂರು ಇವರುಗಳ ವತಿಯಿಂದ ಆಶ್ರಮದಲ್ಲಿ ಇಡೀ ದಿನದ ಮಹಾಪ್ರಸಾದ ಸೇವೆ ಹಾಗೂ ಹಣ್ಣು ಹಂಪಲುಗಳನ್ನು ವಿತರಿಸಿ ಸಿದ್ದಗಂಗಾ ಶ್ರೀಗಳ ನಿಜಶರಣ ಅಂಬಿಗರ ಚೌಡಯ್ಯ ಇವರುಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅರ್ಥಪೂರ್ಣವಾಗಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಸಿಂಧನೂರು ತಾಲೂಕಿನ ಬಂಗಾರಿ ಕ್ಯಾಂಪಿನ ಪರಮಪೂಜ್ಯ ಶ್ರೀ ಸದಾನಂದ ಶರಣರ ಪಾದ ಪೂಜಾ ಸಮಾರಂಭ ಕಾರ್ಯಕ್ರಮ ಹಾಗೂ ಪರಮಪೂಜ್ಯರಿಗೆ ಗೌರವ ಸಮರ್ಪಣೆ ಅರ್ಪಿಸಲಾಯಿತು. ನಂತರ ಗಂಗಾಮತ ಸಮಾಜದ ಸಿಂಧನೂರು ತಾಲೂಕ ಅಧ್ಯಕ್ಷರಾದ ರಾಮಣ್ಣ ಜವಳಗೇರಾ ಹಾಗೂ ಮುಖಂಡರಾದ ಕೋಮಾರೆಪ್ಪ ಜವಳಗೇರಾ ಇವರುಗಳನ್ನು ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಬಂಗಾರಿ ಕ್ಯಾಂಪಿನ ಸಿದ್ದಾಶ್ರಮದ ಪೂಜ್ಯ ಶ್ರೀ ಸದಾನಂದ ಶರಣರು ಇಂದು ನಮ್ಮ ಸಿಂಧನೂರಿನ ಕರುಣೆಯ ಕುಟುಂಬದಲ್ಲಿ ನಡೆದಾಡುವ ದೇವರಾಗಿ ತ್ರಿವಿಧ ದಾಸೋಹಿ ಮೂರ್ತಿಗಳಾಗಿ ಅಕ್ಷರ ಅನ್ನ ಜ್ಞಾನದಾಸೋಹವನ್ನು ಮಾನವ ಧರ್ಮಕ್ಕೆ ಉಣ ಬಡಿಸಿದ ಸಿದ್ದಗಂಗಾ ಶ್ರೀಗಳು ಜಗತ್ತಿನ ಪರಮಪೂಜ್ಯರಾಗಿದ್ದಾರೆ. ಸಿದ್ದಗಂಗಾ ಶ್ರೀಗಳ ಆಶಯದಂತೆ ಕಾರುಣ್ಯ ಆಶ್ರಮದ ಕರ್ತವ್ಯ ನಾಡಿಗೆ ಅರ್ಪಣೆಯಾಗಿದೆ. ಕಾರುಣ್ಯಾಶ್ರಮದ ಸೇವೆಯೂ ಸಿದ್ದಗಂಗಾ ಶ್ರೀಗಳ ಕಾಯಕದಂತಿದೆ. ನೊಂದ ನೆಲೆ ಇಲ್ಲದ ಜೀವಿಗಳಿಗೆ ತಮ್ಮ ಜೋಳಿಗೆಯ ಮೂಲಕ ಹರೇಟನೂರು ಹಿರೇಮಠದ ಕುಟುಂಬ ಮಾಡುತ್ತಿರುವ ಈ ಕಾಯಕ ಕಾರುಣ್ಯ ಎನ್ನುವ ಕುಟುಂಬವನ್ನು ಹುಟ್ಟು ಹಾಕಿರುವುದು ಸಿದ್ದಗಂಗಾ ಶ್ರೀಗಳ ಆದರ್ಶಕ್ಕೆ ಕಾರಣವಾಗಿದೆ. ಸಿದ್ದಗಂಗಾ ಶ್ರೀಗಳ ಕಾಯಕದಂತೆ ಕಾರುಣ್ಯ ಆಶ್ರಮದ ಸೇವೆ ನೆರವೇರುತ್ತಿದೆ. ನಿಜ ಶರಣ ಅಂಬಿಗರ ಚೌಡಯ್ಯ ಸರ್ವ ಸಮಾಜದ ಸಂತನಾಗಿ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಇಂತಹ ಶರಣರ ಕಾರ್ಯಕ್ರಮ ಕಾರುಣ್ಯ ಆಶ್ರಮದಲ್ಲಿ ಜರುಗಿರುವುದು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಆಶೀರ್ವಚನ ನೀಡಿದರು. ನಂತರ ಶ್ರೀ ಶಾಂಭವಿ ಪುಣ್ಯಾಶ್ರಮದ ಹೀಟಾಧಿಪತಿಗಳಾದ ವೇ. ಮೂ.ವೀರೇಶ ಯಡಿಯೂರು ಮಠ ಮಾತನಾಡಿ ಸರ್ವ ಸಮಾಜಕ್ಕೆ ಆದರ್ಶವಾಗಿರುವ ಈ ಇಬ್ಬರು ಶರಣರು ನಡೆದಾಡುವ ದೇವರುಗಳಾಗಿ ಪ್ರತಿಯೊಬ್ಬ ಮಾನವರ ಹೃದಯದಲ್ಲಿ ನೆಲೆಯೂರಿರುವ ಈ ಶರಣರ ಜಯಂತಿ ಹಾಗೂ ಪುಣ್ಯರಾಧನೆ ಕಾರ್ಯಕ್ರಮ ವಿಶೇಷವಾಗಿ ನಮ್ಮ ಕಾರುಣ್ಯ ಆಶ್ರಮದಲ್ಲಿ ನೆರವೇರಿರುವುದು ಸಮಾಜಕ್ಕೆ ಉತ್ತಮ ಸಂದೇಶ ನೀಡಿದೆ. ಮತ್ತು ಈ ಕಾರ್ಯಕ್ರಮದಲ್ಲಿ ಗಂಗಾ ಮತ್ತು ಸಮಾಜದ ಎಲ್ಲಾ ಹಿರಿಯರುಗಳು ಭಾಗವಹಿಸಿರುವುದು. ನಿಜಶರಣ ಅಂಬಿಗರ ಚೌಡಯ್ಯ ಜಯಂತಿಗೆ ಅರ್ಥ ಬಂದಂತಾಗಿದೆ. ಅಕ್ಷರ ಅನ್ನ ಜ್ಞಾನ ದಾಸೋಹದ ಸಿದ್ದಗಂಗಾ ಶ್ರೀಗಳು ದಾಸೋಹದ ಮೂರ್ತಿಗಳಾಗಿ ಸಮಾಜದ ಪ್ರತಿಯೊಬ್ಬ ಶರಣರಿಗೆ ಆದರ್ಶವಾಗಿದ್ದಾರೆ. ಅವರ ಕಾಯಕದಂತೆ ನಮ್ಮ ಕಾರುಣ್ಯ ಆಶ್ರಮದ ಚನ್ನಬಸಯ್ಯ ಸ್ವಾಮಿ ದಂಪತಿಗಳು ತಮ್ಮನ್ನು ತಾವು ಸಮಾಜಕ್ಕೆ ಮೀಸಲಿಟ್ಟಿರುವುದು ಸಿಂಧನೂರಿನ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿರುವುದು ನಮ್ಮೆಲ್ಲರಿಗೆ ಸಂತೋಷವಾಗಿದೆ ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ನಾಗರಾಜ ಸ್ವಾಮಿಗಳು ದೇವಿ ಆರಾಧಕರು ಕಾರಟಗಿ ಇವರು ದಿವ್ಯ ಸಾನಿಧ್ಯ ವಹಿಸಿದ್ದರು. ಪೂಜಾ ಕಾರ್ಯಕ್ರಮವನ್ನು ರುದ್ರಸ್ವಾಮಿ ಹಿರೇಮಠ ಪಗಡದಿನ್ನಿ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಮಣ್ಣ ಜವಳಗೇರಾ ಅಧ್ಯಕ್ಷರು ಗಂಗಾಮತ ಸಮಾಜ ಸಿಂಧನೂರು. ಹನುಮಂತಪ್ಪ ಇಚ್ಚಂಗಿ ಉಪಾಧ್ಯಕ್ಷರು. ಕೋಮಾರೆಪ್ಪ ಜವಳಗೇರಾ ಹಿರಿಯ ಮುಖಂಡರು ಗಂಗಾಮತ ಸಮಾಜ. ಹಾಗೂ ಗಂಗಾಮತ ಸಮಾಜದ ಹಿರಿಯರುಗಳಾದ ವೀರೇಶ ಕೋರಿ ಉದ್ಬಾಳ ಇ. ಜೆ.ಬಸಪ್ಪ ಕೋರಿ. ಶ್ರೀ ಗಂಗೋತ್ರಿ ಪಟ್ಟಣ ಸೌಹಾರ್ದ ಸಹಕಾರ ಸಂಘ ನಿಯಮಿತ. ನಿರ್ದೇಶಕರುಗಳಾದ ಅಮರೇಶ ಹುಡಾ. ವೆಂಕಟೇಶನ ನವಲಿ.ವೆಂಕೋಬ. ಅಮರೇಶ ಬಾಗೋಡಿ ಅಧ್ಯಕ್ಷರು ಯುವ ಘಟಕ ಗಂಗಾಮತ ಸಮಾಜ ಸಿಂಧನೂರು. ವೀರೇಶ ಒಂಟಿಗೇರು. ಕರಿಯಣ್ಣ ಕಲ್ಲೂರು. ಹಾಗೂ ಹೊಸಗೆರಪ್ಪ ಗೊರೆಬಾಳ ಅಧ್ಯಕ್ಷರು ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಸಮಿತಿ ಸಿಂಧನೂರು. ಮತ್ತು ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ. ಶ್ರೀಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದಗುಡ್ಡ. ಸಿದ್ದಯ್ಯ ಸ್ವಾಮಿ ಮರಿಯಪ್ಪ ಜ್ಯೋತಿ. ಮತ್ತು ಸಿಂಧನೂರು ತಾಲೂಕ ಗಂಗಾಮತ ಸಮಾಜದ ಅನೇಕ ಉಪಸ್ಥಿತರಿದ್ದರು

