ಈ ನಾಡಿನ ಮಹಾನ್ ಶರಣರಾದ ಬುದ್ದ, ಬಸವರ
ಜಯಂತಿಯ ಅಂಗವಾಗಿ ಏಪ್ರಿಲ್ 20 ರಂದು 51 ಜೋಡಿಗಳ ಸಾಮೂಹಿಕ ವಿವಾಹವನ್ನು ಸಿಂಧನೂರು ಪಿಡಬ್ಲ್ಯೂಡಿ ಕ್ಯಾಂಪಿನ ಯಮನೂರಪ್ಪ ದರ್ಗಾದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಛಲವಾದಿ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ವೀರೇಶ ಹಂಚಿನಾಳ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನೋಂದಣಿಗೆ ಮಾರ್ಚ್ 30 ಕೊನೆಯ ದಿನಾಂಕವಾಗಿದೆ. ವಧುವರರ ವಯಸ್ಸು
ವರನಿಗೆ 21ವರ್ಷ, ವಧುವಿಗೆ 19 ವರ್ಷ ಕಡ್ಡಾಯ. ವಧು-ವರರ ಹಾಗೂ ತಂದೆ-ತಾಯಿಯರ ಆಧಾರ ಕಾರ್ಡ್, ಜಾತಿ ಆದಾಯ ಪ್ರಮಾಣ ಪತ್ರ, ವಾಸಸ್ಥಳ, ವಯಸ್ಸಿನ ಪ್ರಮಾಣ ಪತ್ರ ಝರಾಕ್ಸ್ ಪ್ರತಿ ಹಾಗೂ ಇತ್ತೀಚಿನ ಭಾವಚಿತ್ರ ಕೊಡಬೇಕು ಎಂದು ತಿಳಿಸಿದರು.

ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ರಾಜ್ಯ ಅದ್ಯಕ್ಷ ನಿವೃತ್ತ ಐಎಎಸ್ ಅಧಿಕಾರಿಯಾದ ಸಿದ್ದಯ್ಯ ಅವರು ಆಗಮಿಸುವರು, ಸಮಾಜದ ಮುಖಂಡರು, ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು, ಸಮಾಜದ ಬಂದು-ಬಾಂಧವರು ಆಗಮಿಸಿ ವಧು-ವರರಿಗೆ ಆರ್ಶೀವದಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ: ಸಂಘಟನೆ ಪ್ರಧಾನ ಕಾರ್ಯದರ್ಶಿ ಅಂಬಣ್ಣ ಮಲ್ಲಾಪುರ, ಶರಣಪ್ಪ ಸೋಮನಾಳ, ಮಾರೆಪ್ಪ ರಾಮತ್ನಾಳ್, ಕುಬೇರಪ್ಪ ಹೊಸಳ್ಳಿ, ಹನುಮಂತ ಮಲ್ಲಾಪುರ, ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *