ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೊಟ್ಟ ಮನರೇಗಾ ಯೋಜನೆ ಬಡ ಕೂಲಿಕಾರ್ಮಿಕರಿಗೆ ಎಷ್ಟರಮಟ್ಟಿಗೆ ಉಪಯೋಗವಾಗಿದೆ. ಜನರು ಕೊಟ್ಟ ತೆರಿಗೆ ಹಣ ಖರ್ಚಾಗುತ್ತಿದೆ ಎಂದರೆ, ಈ ಮನರೇಗಾ ಯೋಜನೆ ಹಸಿರು ಹುಲ್ಲು ಗಾವಲಿನ ತಾಣವಾಗಿತ್ತು. ಕೂಲಿಕಾರರಿಂದ ಹಿಡಿದು, ರಾಜಕಾರಣಿಗಳವರೆಗೂ ಹಂಚಿ ತಿನ್ನುವ ಯೋಜನೆಯಾಗಿದೆ ಎಂದು ಮಾಜಿ ಸಂಸದರಾದ ಕೆ.ವಿರುಪಾಕ್ಷಪ್ಪ ಗಂಭೀರ ಆರೋಪ ಮಾಡಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರದಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಾದ ಮಹಾತ್ಮಗಾಂಧಿ ಹೆಸರು ಬದಲು ಹಾಗೂ ಕೂಲಿ ಕಾರ್ಮಿಕರಿಗೆ ಅನ್ಯಾಯ ಆಗುತ್ತಿದೆ ಎಂಬುದಾಗಿದೆ. ಆದರೆ ಕಾಂಗ್ರೆಸ್ ಮಹಾತ್ಮಗಾಂಧಿ ಅವರಿಗೆ ಈ 78 ವರ್ಷಗಳಲ್ಲಿ ಎಷ್ಟು ಗೌರವಕೊಟ್ಟಿದೆ. ಈಗ ಯಾರ ಕೂಡ ಕಾಂಗ್ರೆಸ್ಸಿನಲ್ಲಿ ಇಲ್ಲ. ಅಥವಾ ಇವರು ಉಳಿಸಿಕೊಂಡಿಲ್ಲ. ಜೊತೆಗೆ ಸ್ವತಂತ್ರ ಹೋರಾಟಗಾರರ ಕುಟುಂಬಸ್ಥರನ್ನ ಎಷ್ಟರಮಟ್ಟಿಗೆ ಬಳಸಿಕೊಂಡಿದೆ ಮತ್ತು ಅವಕಾಶ ಕಲ್ಪಿಸಿಕೊಟ್ಟಿದೆ ಮಹಾತ್ಮಗಾಂಧಿಗಾಗಲಿ ಅವರ ಕುಟುಂಬದ ಸದಸ್ಯರಾಗಲಿ, ಅವಮಾನ ಆಗಿರುವುದು ಕಾಂಗ್ರೆಸ್ ಪಕ್ಷದಿಂದ ಹೊರತು ಬೇರೆ ಯಾವುದೇ ಪಕ್ಷಗಳಿಂದಲ್ಲ.
ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಾಯಿಸಿದ್ದನ್ನೇ ಸಹಿಸದ ಕಾಂಗ್ರೆಸ್ಸಿನವರು, ಮಹಾತ್ಮಗಾಂಧಿಯವರ ಕುಟುಂಬಕ್ಕೆ ಇವರ ಕೊಡುಗೆ ಏನು? ಅವರ ಮನೆತನದವರಿಗೆ ಎಷ್ಟು ಜನಕ್ಕೆ ಇವರು ಅಧಿಕಾರ ಕೊಟ್ಟಿದ್ದಾರೆ ? ಮನಮೋಹನ್ ಸಿಂಗ್ ಅವರು, ಈ ಮನರೇಗಾವನ್ನು ಜಾರಿಗೆ ತಂದಿದ್ದು ಮೆಚ್ಚುವಂತಹದ್ದು, ಆದರೆ ಖರ್ಚಾದ ಹಣದಿಂದ ಎಷ್ಟು ಆಸ್ತಿ ಆಗಿದೆ. ಈ ನರೇಗಾ ಯೋಜನೆ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ, ಪರಿಶುದ್ದ ಹಾಲು ಹಿಂಡುವ ಯೋಜನೆಯಾಗಿದೆ.
ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನೈಜ ಕೂಲಿಕಾರರನ್ನು ಹೊರತು ಪಡಿಸಿ, ಮೇಟಿಗಳು, ಅಧಿಕಾರಿಗಳು, ರಾಜಕಾರಣಿಗಳವರೆಗೂ ಹಗಲು ದರೋಡೆ ನಡೆದಿದೆ. 669 ಕೋಟಿ ಅಕ್ರಮ ಹಣ ಬಳಕೆ, 100 ಕೋಟಿ ವಸೂಲಿಯಾಗಿದೆ. ಅಕ್ರಮದಲ್ಲಿ ಬಳಕೆಯಾದ 643 ಅಧಿಕಾರಿಗಳನ್ನು ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ. 306 ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ. 85 ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆಂದು ಈಗಾಗಲೇ ಹಲವಾರು ಪತ್ರಿಕೆಗಳಲ್ಲಿ ವರದಿಯಾಗಿದೆ.
ಹಣ ದುರುಪಯೋಗ ತಡೆಯಲು ಕೇಂದ್ರ ಸರ್ಕಾರ ‘ನರೇಗಾ ‘ಯೋಜನೆಯಲ್ಲಿ ಕೆಲವು ರೂಪರೇಷೆಗಳನ್ನು ಬದಲಾವಣೆ ಮಾಡಲು ಹೊರಟಿದ್ದಾರೆ. ಇದನ್ನೇ ರಾಜ್ಯ ಕಾಂಗ್ರೆಸ್ ಸರ್ಕಾರ ವಿರೋಧ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ? ಜೆಸಿಬಿ ಮೂಲಕ ಕೆಲಸ, ಸಾಕಷ್ಟು ಆಸ್ತಿ ಅಂತಸ್ತು ಹೊಂದಿದವರ ಹೆಸರಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಣ ಎತ್ತಿದ್ದಾರೆ. ಇದಕ್ಕೆಲ್ಲ ಕೂಲಿ ಕಾರ್ಮಿಕರು ಯಾರೂ ಕೂಡ ಕಿವಿಗೊಡದೆ, ಈ ಮನರೇಗಾ ಯೋಜನೆಯನ್ನು ಬೆಂಬಲಿಸಬೇಡಿ ಕೇಂದ್ರ ಸರ್ಕಾರದ ಯೋಜನೆಗಳು ದೇಶದ ಜನಸಂಖ್ಯೆಗೆ ಅನುಗುಣವಾಗಿ ಆಧರಿಸಿರುತ್ತವೆ ಹೊರತು ಇಲ್ಲಿ ಕೂಲಿ ಕಾರ್ಮಿಕರಿಗೆ ಅನ್ಯಾಯ ಆಗುವಂತದ್ದಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಕಾಂಗ್ರೆಸ್ ರಾಜ್ಯದಲ್ಲಿ
ಅಪಪ್ರಚಾರ ಮಾಡುತ್ತಿದೆ ಎಂದು ತಿಳಿಸಿದರು.
ಈ ವೇಳೆ: ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಲಿಂಗರಾಜ ಹೂಗಾರ, ನಗರ ಘಟಕದ ಅಧ್ಯಕ್ಷ ಸಿದ್ರಾಮೇಶ ಮನ್ನಾಪೂರು, ಗ್ರಾಮೀಣ ಮಂಡಲ ಅಧ್ಯಕ್ಷ ಯಂಕೋಬ ರಾಮತ್ನಾಳ್, ವಿರೋಜಿರಾವ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

