ತಾಳಿಕೋಟಿ: ಪಟ್ಟಣದ ವಾರ್ಡ್ ನಂಬರ್ 19ರ ಭೋವಿ ವಡ್ಡರ ಓಣಿಯಲ್ಲಿ ಬರುವ ಅಂಗನವಾಡಿ ಕೇಂದ್ರದ ಅವ್ಯವಸ್ಥೆಗೆ ಕಾರಣೀಭೂತರಾದ ಅಂಗನವಾಡಿ ಕೇಂದ್ರದ ಕಾರ್ಯಕರ್ತರು, ಸಹಾಯಕರು ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ವಜಾಗೊಳಿಸಿ ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಪಟ್ಟಣದ ಅಂಬೇಡ್ಕರ್ ಸೇನೆ ತಾಲೂಕ ಘಟಕ ಹಾಗೂ ಬಾಬು ಜಗಜೀವನ ರಾಮ್ ಮಹಿಳಾ ಸ್ವಸಹಾಯ ಸಂಘದ ಪದಾಧಿಕಾರಿಗಳು ಇಲಾಖೆಯ ಅತ್ತಾರ ಮುನ್ನಾ ಮೂಲಕ ತಹಸಿಲ್ದಾರ್ ಗೆ ಮಂಗಳವಾರ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇನೆ ಜಿಲ್ಲಾ ಉಪಾಧ್ಯಕ್ಷ ಬಸ್ಸು ಮಾದರ ಹಾಗೂ ತಾಲೂಕ ಅಧ್ಯಕ್ಷ ಗೋಪಾಲ ಕಟ್ಟಿಮನಿ ಮಾತನಾಡಿ ಸದರಿ ಅಂಗನವಾಡಿ ಕೇಂದ್ರ ಅವ್ಯವಸ್ಥೆಯ ಆಗರ ವಾಗಿದ್ದು, ಕಳೆದ 7 ತಿಂಗಳುಗಳಿಂದ ಕೇಂದ್ರಕ್ಕೆ ಬರುವ ದವಸ ದಾನ್ಯಗಳನ್ನು ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ಪೂರೈಸಿರುವುದಿಲ್ಲ, ಮಕ್ಕಳಿಗೆ ಪಾಠ ಹೇಳಿಕೊಡಲು ಒಬ್ಬ ಶಿಕ್ಷಕರೂ ಕೂಡಾ ಇಲ್ಲ. ಆಹಾರ ವಸ್ತುಗಳ ದಾಸ್ತಾನು ಮಾಡುವ ಕೋಣೆ ಇಲಿ ಹೆಗ್ಗಣಗಳ ತಾಣವಾಗಿದೆ, ಯಾವುದೇ ರೀತಿಯ ಸ್ವಚ್ಛತೆ ಕೈಗೊಂಡಿಲ್ಲ ಈ ಎಲ್ಲ ದುರಾವಸ್ಥೆ ಕುರಿತು ಈಗಾಗಲೇ ಇಲಾಖೆಯ ಸಿಡಿಪಿಓ ಹಾಗೂ ಸೂಪರ್ವೈಸರ್ ಗೆ ಈ ಮೊದಲು ತಿಳಿಸಿದ್ದು ಅವರು ಭೇಟಿ ನೀಡಿ ಪರಿಶೀಲನೆ ಕೂಡಾ ನಡೆಸಿದ್ದಾರೆ ಆದರೆ ಇಲ್ಲಿವರೆಗೆ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಿಲ್ಲ, ನಾವು ಈಗ ಮತ್ತೇ ತಹಸಿಲ್ದಾರ್ ಅವರಿಗೆ ಮನವಿ ಮೂಲಕ ಆಗ್ರಹಿಸುತಿದ್ದೇವೆ ಬೇಜವಾಬ್ದಾರಿ ತೋರಿದ ಎಲ್ಲರನ್ನು ಈ ಕೂಡಲೇ ಸೇವೆಯಿಂದ ವಜಗೊಳಿಸಬೇಕು ಹೀಗೆ ಮಾಡದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದರು. ಈ ಸಮಯದಲ್ಲಿ ಅಂಬೇಡ್ಕರ್ ಸೇನೆ ತಾಲೂಕ ಘಟಕದ ಪದಾಧಿಕಾರಿಗಳಾದ ಭೀಮಸಿ ಕಾರಕೂರ ಪ್ರಜ್ವಲ್ ಕಟ್ಟಿಮನಿ, ಕಾಶಿನಾಥ್ ಮಾದರ, ಭೀಮಾಶಂಕರ ಸೋನಾನೆ, ಸಾಹೇಬಣ್ಣ ಢವಳಗಿ, ಭಾಗ್ಯಶ್ರೀ ಹೊಟಗಾರ,ಭಾರತಿ ಸೋನಾನೆ, ಹುಸೇನ್ ಜಕಾತಿ ಹಾಗೂ ವೃಂದಾ ಬ್ಯಾಕೋಡ್ ಇದ್ದರು.

