ಬಳ್ಳಾರಿ ಜಿಲ್ಲೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಮೂರ್ತಿ ಅನಾವರಣ ನೆನೆಗುದಿಗೆ ಬಿದ್ದ ಕಾರಣವಾಗಿ ಇಂದು ಕವಿತಾಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ಮಹಾಸಭಾ ಉಪಾಧ್ಯಕ್ಷರಾದ ಭೀಮಣ್ಣ ನಾಯಕ್ ಕಾಚಾಪುರ್ ಬಳ್ಳಾರಿ ಜಿಲ್ಲಾಯಲ್ಲಿ ಮಾಜಿ ಸಚಿವರು ಹಾಲಿ ಶಾಸಕರು ಎಲ್ಲರೂ ಇದ್ದರೂ ಸಹ ಅಲ್ಲಿ ಅವಮಾನವಾಗಿರುವುದು ನಮ್ಮ ಆದಿಕವಿ ಮಹರ್ಷಿ ವಾಲ್ಮೀಕಿ ಅವರಿಗೆ ಇಂತಹ ದೊಡ್ಡ ಆಘಾತ ನಡೆದರೂ ಸಹ ಈ ಸಮಾಜದ ಮುಖಂಡರು ಪಾರ್ಟಿ ಅವರು ಯಾರೊಬ್ಬರೂ ಸಹ ಮಾತನಾಡದೇ ಇರುವುದು ತುಂಬಾ ವಿಷದನೀಯ ಸಂಗತಿ.
ಸಮಾಜದ ಹೆಸರಿನಲ್ಲಿ ಹಲವಾರು ಸಂಘಟನೆಗಳನ್ನು ಕಟ್ಟಿ, ಸಮಾಜದ ಸೌಲತ್ತುಗಳನ್ನು ತೆಗೆದುಕೊಂಡು ಈಗ ಇಂತಹ ಸಮಯದಲ್ಲಿ ಮೌನವಾಗಿರುವುದೇಕೆ? ನೀವೇನಾದರೂ ಪಾರ್ಟಿ ಗುಲಾಮರೆ? ಎಲ್ಲಿ ನಿಮ್ಮ ಹೋರಾಟ? ಸಮಾಜ ಎಂದು ಬೊಬ್ಬೆ ಇಡುವ ಹೋರಾಟಗಾರರೇ ಎಲ್ಲಿ ಬನ್ನಿ ಹೊರಡೋಣ ಸಮಾಜದ ಮುಖಂಡರೇ ಬನ್ನಿ ಪಾರ್ಟಿ ಬಿಟ್ಟು ಬನ್ನಿ ಬಳ್ಳಾರಿ ಮೂರ್ತಿಯನ್ನು ಸಮಾಜ ವತಿಯಿಂದ ಯಶಸ್ವಿಗೊಳಿಸೋಣ.
2026 ಫೆಬ್ರವರಿ 5 .8. 9ರಂದು ರಾಜನಹಳ್ಳಿ ವಾಲ್ಮೀಕಿಯವರ ಜಾತ್ರೆ ಇರುವ ಕಾರಣ ಜಾತ್ರೆಯೊಳಗೆ ಬಳ್ಳಾರಿಯಲ್ಲಿ ಮೂರ್ತಿ ಅನಾವರಣ ಆಗಬೇಕು. ಇಲ್ಲದಿದ್ದರೆ ಉಗ್ರವಾದ ಹೋರಾಟ ಮಾಡುವುದಾಗಿ ಹೇಳಿಕೆಯನ್ನು ನೀಡಿದ್ದಾರೆ.
ಭೀಮಣ್ಣ ನಾಯಕ್ ಕಚಾಪುರ್ ರಾಯಚೂರು ಜಿಲ್ಲೆಯಾದ್ಯಂತ ಸುಮಾರು 5000ಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದೇನೆ ಹಾಗೂ ಜಿಲ್ಲೆಯಾದ್ಯಂತ 180ಕ್ಕೂ ಅಧಿಕ ಸಂಘಟನೆಗಳನ್ನ ಪ್ರತಿಷ್ಠಾಪಿಸಿದ್ದೇನೆ. ಜಿಲ್ಲೆಯಾದ್ಯಂತ 30ಕ್ಕೂ ಹೆಚ್ಚು ವಾಲ್ಮೀಕಿ ಮಹರ್ಷಿಯವರ ಮೂರ್ತಿಯನ್ನು ಅನಾವರಣ ಮಾಡಿದ್ದೇನೆ ಅಂತ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ಮಹಾಸಭಾ ಉಪಾಧ್ಯಕ್ಷರಾದ ಭೀಮನಾಯಕಚಪುರ್ ವೆಂಕನಗೌಡ ನಾಯಕ್ ಮಲದಗುಡ್ಡ ಗ್ರಾಮ ಘಟಕದ ಅಧ್ಯಕ್ಷರು ಬಸವರಾಜ್ ನಾಯಕ್ ಮಲ್ಲದಗುಡ್ಡ ಗ್ರಾಮದ ಘಟಕ ಉಪಾಧ್ಯಕ್ಷರು ಹಾಗೂ ಚೆನ್ನಪ್ಪ ನಾಯಕರು ಉಪಸ್ಥಿತರಿದ್ದರು..

