ರಾಯಚೂರು ಜನವರಿ 17 (ಕರ್ನಾಟಕ ವಾರ್ತೆ): ನಗರದ ಅಶೋಕ ಡಿಪೋ ಹತ್ತಿರದ ಮಂಗಳವಾರಪೇಟೆಯ ನಿವಾಸಿ ರಾಜಪ್ಪ ತಂದೆ ಮಹಾದೇವಪ್ಪ (31) ಎಂಬ ಯುವಕ ದಿನಾಂಕ 04-12-2025ರ ಸಂಜೆ 06 ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ಈ ಕುರಿತು ಸದರ್ ಬಜಾರ ಪೊಲೀಸ್ ಠಾಣೆಯಲ್ಲಿ ಗುನ್ನ ಸಂಖ್ಯೆ: 02/2026ಕಲಂ ಮನುಷ್ಯ ಕಾಣೆ ಅಡಿ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ.
ಕಾಣೆ ವ್ಯಕ್ತಿಯ ಚಹರೆ: 31 ವಯಸ್ಸು, 5.5 ಅಡಿ ಎತ್ತರ, ಕಪ್ಪು ಬಣ್ಣದ ಕೂದಲು, ಕಪ್ಪು ಮೈ ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ನೀಲಿ ಬಣ್ಣದ ತುಂಬು ತೋಳಿನ ಅಂಗಿ ಹಾಗೂ ಕಪ್ಪು ಬಣ್ಣದ ಫಾರ್ಮುಲಾ ಪ್ಯಾಂಟ್ ಬಟ್ಟೆ ಧರಿಸಿದ್ದಾನೆ. ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆ ಮಾತನಾಡುತ್ತಾನೆ. ಈ ಚಹರೆವುಳ್ಳ ವ್ಯಕ್ತಿಯು ಕಂಡುಬಂದಲ್ಲಿ ಸದರ್ ಬಜಾರ್ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 08532-226148, ಆರಕ್ಷಕ ನಿರೀಕ್ಷಕರು ಮೊಬೈಲ್ ಸಂಖ್ಯೆ: 9480803830ಗೆ ಸಂಪರ್ಕಿಸುವಂತೆ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *