ಸಂಕ್ರಾಂತಿ ವೈಭವವು ಸೂರ್ಯನ ಮಕರ ರಾಶಿ ಪ್ರವೇಶವನ್ನು ಆಚರಿಸುವ, ಸುಗ್ಗಿ ಮತ್ತು ನವೀಕರಣದ ಹಬ್ಬವಾಗಿದೆ, ಇದರಲ್ಲಿ ಎಳ್ಳು-ಬೆಲ್ಲ ವಿನಿಮಯ, ಪುಣ್ಯಸ್ನಾನ, ಜಾನುವಾರು ಪೂಜೆ, ಗಾಳಿಪಟ ಹಾರಿಸುವಿಕೆ, ಸಾಂಪ್ರದಾಯಿಕ ಖಾದ್ಯಗಳ ತಯಾರಿಕೆ (ಮಾಧ್ಲಿ, ಸಜ್ಜಿ ರೊಟ್ಟಿ, ಪೊಂಗಲ್), ಮತ್ತು ಕೌಟುಂಬಿಕ ಬಂಧಗಳನ್ನು ಬಲಪಡಿಸುವ ವೈವಿಧ್ಯಮಯವಾದ ಆಚರಣೆಗಳು ಇರುತ್ತವೆ. ಇದು ಕೃಷಿ, ಸಂಸ್ಕೃತಿ ಮತ್ತು ಧರ್ಮದೊಂದಿಗೆ ಬೆರೆತಿದ್ದು, ಎಲ್ಲರಲ್ಲೂ ಪ್ರೀತಿ, ಶಾಂತಿ ಮತ್ತು ಸಮೃದ್ಧಿಯ ಸಂದೇಶವನ್ನು ಸಾರುತ್ತದೆ.

ತಾಲೂಕಿನ (ಬರ್ಮಾ ಕ್ಯಾಂಪ್) ಆರ್.ಎಚ್.ನಂ.1ರ ಸೆಂಟ್ ಮೇರಿ ಹೈಯರ್ ಮತ್ತು ಹೈಸ್ಕೂಲ್ ನಲ್ಲಿ ಮಂಗಳವಾರದಂದು ಸಂಕ್ರಾಂತಿ ಹಬ್ಬವನ್ನು ಅತ್ಯಂತ ವೈಭವದಿಂದ ಸಡಗರ ಸಂಭ್ರಮದಿಂದ ವಿದ್ಯಾರ್ಥಿಗಳು ಅವರ ಪೋಷಕರು, ಆಡಳಿತ ಮಂಡಳಿಯವರು, ಶಾಲೆಯ ಶಿಕ್ಷಕರು, ಮತ್ತು ಸಿಬ್ಬಂದಿಯವರು, ಸೇರಿ ಒಂದು ಹಳ್ಳಿಯನ್ನೇ ಸೃಷ್ಟಿಮಾಡಿದ್ದರು. ಒಂದು ಸಣ್ಣ ಗುಡಿಸಲು, ಊರ ಭಾವಿ, ಎತ್ತಿನ ಬಂಡಿ, ಹೊಲದಲ್ಲಿನ ರಾಶಿ, ಶಾಲೆಯ ಮಕ್ಕಳು ಮತ್ತು ಶಿಕ್ಷಕರಿಂದ ಸಂಕ್ರಾಂತಿ ಹಬ್ಬದ ವಿವಿಧ ಶೈಲಿಯ ನೃತ್ಯಗಳು ನೋಡುಗರ ಕಣ್ಮನ ಸೆಳೆದು ಮನಸೋರೆಗೊಂಡರು.

ಈ ಸಂಕ್ರಾಂತಿ ಹಬ್ಬದ ಕಾರ್ಯಕ್ರಮವನ್ನು ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿ ಮಸ್ಕಿಯ ಭೂ ನ್ಯಾಯ ಮಂಡಳಿ ಸದಸ್ಯರಾದ ಮಹಾಂತೇಶ ಜಾಲವಾಡಗಿಯವರು ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ನಾವು ಸಣ್ಣವರಿದ್ದಾಗ ಇಂತಹ ಹಬ್ಬಗಳ ಸಡಗರ ಸಂಭ್ರಮ ನೋಡಿದ್ದೇವೆ, ಸಂಕ್ರಾಂತಿ ಹಬ್ಬದ ವೈಭವವನ್ನು ಕಣ್ಣು ತುಂಬಿಕೊಂಡಿದ್ದೇವೆ. ಏಕೆಂದರೆ ಆಗ ಹಳ್ಳಿಗಳಲ್ಲಿ ಎತ್ತುಗಳು, ಬಂಡಿಗಳು, ಹೊಲದಲ್ಲಿ ರಾಶಿಗಳನ್ನು ಸಹ ನೋಡಿದ್ದೇವೆ. ಅದೇ ರೀತಿಯಲ್ಲಿ ಈ ಸೆಂಟ್ ಮೇರಿ ಹೈಯರ್ ಮತ್ತು ಹೈಸ್ಕೂಲ್ ಆಡಳಿತ ಮಂಡಳಿಯವರು ವೈಭವಕರಿಸಿದ್ದನ್ನ ನಾವು ನೀವೆಲ್ಲ ಇಂದು ನೋಡುತ್ತಿದ್ದೇವೆ. ಅಷ್ಟು ಅಚ್ಚುಕಟ್ಟಾಗಿ ಹಳ್ಳಿಯ ವಾತಾವರಣವನ್ನು ಸೃಷ್ಟಿ ಮಾಡಿದ್ದಾರೆ. ಮಕ್ಕಳು ಅವರ ಪೋಷಕರು, ಶಿಕ್ಷಕರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ನೂರಾರು ಬಡ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುವುದಲ್ಲದೇ ಹಳ್ಳಿಯ ವಾತಾವರಣವನ್ನು ಸಹ ತಿಳಿಯಪಡಿಸಿ ಪ್ರೋತ್ಸಾಹಿಸುತ್ತಿದ್ದಾರೆ ಎಂದರು.

ನಂತರ ಕಾಂಗ್ರೆಸ್ ಮುಖಂಡ ಮಲ್ಲನಗೌಡ ಪಾಟೀಲ್ ಗುಂಡಾ ಅವರು ಮಾತನಾಡಿ, ಸಂಕ್ರಾಂತಿ ಅಂದರೆ ಪೈರು, ಕರಾವಳಿ ಭಾಗದಲ್ಲಿ ಪೊಂಗಲ್ ಅಂತಾರೆ. ಪೊಂಗಲ್ ಅಂದರೆ ಅಕ್ಕಿ, ಅನ್ನ, ತುಪ್ಪ, ಹಾಲು, ದೇಶಕ್ಕೆ ಅನ್ನ ಕೊಡುವ ರೈತನ ಮುಖದಲ್ಲಿ ಸಂಕ್ರಾಂತಿ ಅಂದರೆ ಸಂಭ್ರಮ ಇಂತಹ ದೊಡ್ಡ ಸಂಭ್ರಮದ ಸಂಕ್ರಾಂತಿ ಹಬ್ಬವನ್ನು ಶಾಲೆಯ ಆಡಳಿತ ಮಂಡಳಿಯವರು
ಮುದ್ದುಮಕ್ಕಳಿಂದ ಆಚರಿಸುತ್ತಿದ್ದಾರೆ ಇದು ಶ್ಲಾಘನೆ ಕೆಲಸ, ದೇಶ ನಡೆಯುತ್ತಿರುವುದು ರೈತರಿಂದ ಅಧಿಕಾರಿಗಳಿಂದಲ್ಲ. ಶಿಕ್ಷಣ ಪಡೆಯುವುದು ಅರಿವಿಕೆ ಮತ್ತು ತಿಳುವಳಿಕೆಗಾಗಿ ಹೊರತು ಅಧಿಕಾರಕ್ಕಾಗಿ ಅಲ್ಲ. ಪ್ರಜ್ಞಾವಂತರನ್ನಾಗಿ, ದೇಶದ ಉತ್ತಮ ಪ್ರಜೆಗಳನ್ನಾಗಿ,  ರೂಪಿಸುವಲ್ಲಿ ಸಂಸ್ಥೆಯ ಉದ್ದೇಶವಾಗಿರಬೇಕೆಂದರು.

ತದನಂತರ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಕೆ.ಮಂಜುಳಾ ಪಾಟೀಲ್ ಮಾತನಾಡಿ, ಮಕ್ಕಳು ತಮ್ಮ ಕುಟುಂಬದವರೊಂದಿಗೆ ಈ ಸಂಕ್ರಾಂತಿ ಹಬ್ಬವನ್ನು ಸಂಭ್ರಮಿಸುತ್ತಾ, ಪೊಂಗಲ್ ತಿನ್ನುತ್ತಾ, ಸಂಭ್ರಮ ಸಡಗರದಿಂದ ಆಚರಿಸುವುದನ್ನು ನೋಡುವುದೆ ಒಂದು ಸೌಭಾಗ್ಯ, ಈ ಸಂಕ್ರಾಂತಿ ಹಬ್ಬ ರೈತರು ಬೆಳೆಯುವ ಭೂಮಿ ತಾಯಿಗೆ ಋಣ ತೀರಿಸುವ ಹಬ್ಬವಾಗಿದೆ. ಈ ಸುಗ್ಗಿಯ ಹಬ್ಬ ನಿಮ್ಮೆಲ್ಲರ ಬಾಳಲ್ಲಿ ಖುಷಿ ನೀಡಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ: ಮಸ್ಕಿಯ ಗ್ರೀನ್ ಸಿಟಿ ಲ್ಯಾಂಡ್ ಲಾರ್ಡ್ ಮಲ್ಲಿಕಾರ್ಜುನ, ಕಾಂಗ್ರೆಸ್ ಮುಖಂಡ ಅಮರೇಶ ಕ್ಯಾತನಟ್ಟಿ, ಕೆಎಸ್ಆರ್.ಟಿಸಿ ಮಾಜಿ ಕಂಟ್ರೋಲರ್ ಬಸವಂತಪ್ಪ, ಬೀರಪ್ಪ ಗೌಡನಬಾವಿ, ಅರ್ಥಶಾಸ್ತ್ರ ಉಪನ್ಯಾಸಕ ಅಮರೇಶ ಹಿರೇಮಠ ಸಿಂಧನೂರು, ಕನ್ನಡ ಉಪನ್ಯಾಸಕ ಡಾ.ಲಕ್ಷ್ಮಣ, ದೈಹಿಕ ಶಿಕ್ಷಕ ರಾಘವೇಂದ್ರ, ಅಶ್ವಮೇಧ ವೆಲ್ ಫರ್ ಟ್ರಸ್ಟ್ ಹಾಗೂ ಶಾಲೆಯ ಕಾರ್ಯದರ್ಶಿಗಳಾದ ಕೆ.ಬಸನಗೌಡ ಪಾಟೀಲ್, ಮುಖ್ಯ ಗುರುಗಳಾದ ಪ್ರಿಯಾ ಜೈನ್, ಸಹ ಶಿಕ್ಷಕರಾದ ಜಾಕ್ಲಿನ್, ಮಂಜುನಾಥ, ಚಾಂದಪಾಷಾ, ರಾಮಕೃಷ್ಣ, ಬಸಮ್ಮ, ಪವಿತ್ರ, ಶಹಿರಾಭಾನು, ಮರಿಯಮ್ಮ, ಸೋಫಿಯಾ, ಕಾರ್ತಿಕ್, ಶರಣಬಸವ, ರಮೇಶ, ಅರುಣ್, ಸೇರಿದಂತೆ ಪಾಲಕರು, ಮಕ್ಕಳು, ಪಾಲ್ಗೊಂಡು ಸಂಕ್ರಾಂತಿ ಹಬ್ಬದ ಸಂಭ್ರಮವನ್ನು ಆಚರಿಸಿದರು.

Leave a Reply

Your email address will not be published. Required fields are marked *