ಮಸ್ಕಿ: ನಮ್ಮ ಭಾಗದ ವಿದ್ಯಾರ್ಥಿಗಳು ಮುಂಬರುವ ದಿನಮಾನಗಳಲ್ಲಿ ಶಿಕ್ಷಣಕ್ಕೆ ಇನ್ನಷ್ಟು ಹೆಚ್ಚಿನ ಒತ್ತು ನೀಡಿ. ವಿದ್ಯಾರ್ಥಿಗಳ ಜೀವನದಲ್ಲಿ ೮ ರಿಂದ ೧೦ನೇ ತರಗತಿ ಬಹುಮುಖ್ಯವಾಗಿದ್ದರಿಂದ ಸಮಯವನ್ನು ವ್ಯರ್ಥ ಮಾಡದೆ ಓದಿಯಲ್ಲಿ ಶ್ರಮ ಪಡೆಬೇಕೆಂದು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಆರ್.ಬಸನಗೌಡ ತುರವಿಹಾಳ ಹೇಳಿದರು.
ಪಟ್ಟಣದ ಕೇಂದ್ರ ಶಾಲೆ ಆವರಣದಲ್ಲಿರುವ ಪದವಿ ಪೂರ್ವ ಬಾಲಕಿಯರ ಕಾಲೇಜಿನ ೨ ನೂತನ ಕಟ್ಟಡ ಮತ್ತು ೨ ಪ್ರಯೋಗಲಯಗಳ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ನಂತರ ಮಾತನಾಡಿದ ಅವರು ಇವತ್ತಿನ ಸ್ಪರ್ಧಾತ್ಮಾಕ ಯುಗದಲ್ಲಿ ವಿದ್ಯಾರ್ಥಿಗಳು ಬರೀ ಪುಸ್ತಕಗಳಿಗೆ ಸಿಮೀತವಾಗಬಾರದು, ಪುಸ್ತಕಗಳ ಜತೆಗೆ ಹೊರಗಿನ ಸಾಮಾನ್ಯ ಜ್ಞಾನವನ್ನು ಪಡೆದುಕೊಳ್ಳಬೇಕು. ಈ ಸ್ಪರ್ಧಾತ್ಮಾಕ ಯುವಗಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣವನ್ನು ಒಳ್ಳೆಯ ಉದ್ದೇಶಕ್ಕಾಗಿ ಬಳಸಿಕೊಳ್ಳಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರೌಢ ಶಾಲೆ ಮತ್ತು ಕಾಲೇಜ್ ವಿದ್ಯಾರ್ಥಿಗಳ ಕೈಯಲ್ಲಿ ಮೊಬೈಲ್‌ಗಳಿರುತ್ತಾವೆ. ಆದರೆ ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ಓದಿನ ಕಡೆ ಆಶಕ್ತಿ ತೋರಿತ್ತಿಲ್ಲ. ಈ ಬಗ್ಗೆ ಪಾಲಕರು ಮತ್ತು ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಉಪನ್ಯಾಸಕರು ಜಾಗೃತಿ ಮೂಡಿಸುವ ಮೂಲಕ ವಿದ್ಯಾರ್ಥಿಗಳ ಮುಂದಿನ ಉತ್ತಮ ಜೀವನ ರೂಪಿಸಲು ಕಾರ್ಯಪ್ರಾವೃತ್ತರಾಗಬೇಕೆಂದು ಕಿವಿಮಾತು ಹೇಳಿದರು. ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಸ್ಥಾನಪಡೆದ ವಿದ್ಯಾರ್ಥಿನಿಯರಿಗೆ ಶಾಸಕರು ೧೦ ಸಾವಿರ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದರು.
ಪುಸ್ತಕ ವಿತರಣೆ: ಇದೇ ಸಂದರ್ಭದಲ್ಲಿ ಶಾಸಕರು ಕಾಲೇಜಿನ ವಿದ್ಯಾರ್ಥಿನಿಯರಿಗೆ ಪುಸ್ತಕ ವಿತರಿಸಿದರು.
ಭೂಮಿ ಪೂಜೆ: ಪಟ್ಟಣದ ಕೇಂದ್ರ ಶಾಲೆಯ ನೂತನ ೩ ಶಾಲಾ ಕಟ್ಟಡಗಳಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ೩ ಶಾಲಾ ಕಟ್ಟಡಗಳಿಗೆ ೪೧ ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿದೆ ಎಂದು ಜೆಇ ಗಜಾನನ ತಿಳಿಸಿದರು.

ಕೇಂದ್ರ ಶಾಲೆ: ಪುಡಾರಿಗಳ ಹಾವಳಿಗೆ ಬ್ರೇಕ್ ಹಾಕಲು ಶಾಸಕರಿಗೆ ಮನವಿ

ಪಟ್ಟಣದ ಕೇಂದ್ರ ಶಾಲಾ ಆವರಣದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಕಾಲೇಜ್ ಶಿಕ್ಷಣ ಇರುವುದರಿಂದ ಸಂಜೆ ಹಾಗೂ ರಾತ್ರಿಯ ಸಮಯದಲ್ಲಿ ಆವರಣದಲ್ಲಿ ಮತ್ತು ರಸ್ತೆಯಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ಅಲ್ಲದೇ ಸಂಜೆಯಾಗುತ್ತಿದ್ದಂತೆ ಆವರಣದಲ್ಲಿ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಾರೆ. ಆದ್ದರಿಂದ ಪುಡಾರಿಗಳ ಹಾವಳಿಗೆ ಬ್ರೇಕ್ ಹಾಕುವಂತೆ ಶಾಸಕರಲ್ಲಿ ಉಪನ್ಯಾಸಕ ಮಹಾಂತೇಶ ಮಸ್ಕಿ ಮನವಿ ಮಾಡಿಕೊಂಡಾಗ ಸ್ಥಳದಲ್ಲಿಯೇ ಶಾಸಕರು ಸಿಪಿಐ ರಾಮಪ್ಪ ಜಲಿಗೇರಿ ಅವರಿಗೆ ಶಾಲಾ-ಕಾಲೇಜ್ ಸುತ್ತಲೂ ಗಸ್ತು ಹಾಕಲು ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತ ಹೂನೂರು, ಪ್ರಾಂಶುಪಾಲ ರಂಗಯ್ಯ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಶಾಲಾ ಶಿಕ್ಷಕರು ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿದ್ದರು.

Leave a Reply

Your email address will not be published. Required fields are marked *