ಸಿಂಧನೂರು —- ಆಂಧ್ರಪ್ರದೇಶದ ಆದೋನಿ ತಾಲೂಕಿನ ಸಂತೆಕೂಡ್ಲೂರು ಗ್ರಾಮದ ಸರ್ವಧರ್ಮ ಸೇವಾಶ್ರಮದ ಪೀಠಾಧಿಪತಿಗಳಾದ ಸೂಫಿ ಡಾ. ಮಸ್ತಾನ್ ವಲಿ ಖಾದ್ರಿ ಅವರು ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮಕ್ಕೆ ಭೇಟಿ ನೀಡಿ ಆಶ್ರಯದಾತರುಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ ಚನ್ನಬಸಯ್ಯಸ್ವಾಮಿ ಹಿರೇಮಠ ಇವರನ್ನು ಸನ್ಮಾನಿಸಿ ಗೌರವಿಸಿ ಸೇವೆಗೆ ಪ್ರೋತ್ಸಾಹಿಸಿ ಆಶೀರ್ವದಿಸಿದರು. ಈ ಸಮಯದಲ್ಲಿ ಆಶ್ರಮದ ವತಿಯಿಂದ ಪೂಜ್ಯರನ್ನು ಗೌರವಿಸಲಾಯಿತು. ನಂತರ ಸೂಫಿ ಡಾ. ಮಸ್ತಾನ್ ವಲಿ ಖಾದ್ರಿ ಅವರು ಸುಮಾರು ವರ್ಷಗಳಿಂದ ಸಮಾಜಕ್ಕೆ ಪ್ರಾಮಾಣಿಕ ಸೇವೆಯ ಮೂಲಕ ಗಡಿನಾಡ ಭಾಗದಲ್ಲಿಯೂ ಕೂಡ ಪ್ರತಿಯೊಬ್ಬರ ಪ್ರೀತಿಗೆ ಕಾರುಣ್ಯಾಶ್ರಮವು ಪಾತ್ರವಾಗಿದೆ. ಜಂಗಮನು ಕಾಯಕಯೋಗಿ ಎನ್ನುವುದು ಕಾರುಣ್ಯ ಆಶ್ರಮದ ಮೂಲಕ ದೃಢಪಟ್ಟಿದೆ. ಅನಾಥರ ನೊಂದವರ ತಮಗರಿವಿಲ್ಲದೇ ಮಲಗಿದ್ದೇನೆ ಎಲ್ಲಾ ಚಟುವಟಿಕೆಗಳನ್ನು ಮಾಡಿಕೊಳ್ಳುವ ಅದೆಷ್ಟೋ ಮಾನವ ಜೀವಿಗಳನ್ನು ಸ್ವಂತ ಕುಟುಂಬದ ರೀತಿ ಅವರನ್ನು ನೋಡಿಕೊಳ್ಳುತ್ತಿರುವುದು ಇದುವೇ ನಿಜವಾದ ಸ್ವರ್ಗ ಎನಿಸಿದೆ. ಬಸವಣ್ಣನವರ ಕಾಯಕವೇ ಕೈಲಾಸ ಎನ್ನುವ ಹಾಕಿ ಸತ್ಯ ಕಾಯಕದ ಹಾದಿಯಲ್ಲಿ ಸಾಗುತ್ತಿರುವ ಕಾರುಣ್ಯ ಆಶ್ರಮ ಸರ್ವಧರ್ಮ ಗುರುಗಳ ಆಶೀರ್ವಾದದ ಅಂದದ ಅರಮನೆಯಾಗಿದೆ. ಈ ನಮ್ಮ ಸಿಂಧನೂರಿನ ಕಾರುಣ್ಯಾಶ್ರಮವು ಸಂಸ್ಕೃತಿಯ ಅನುಭವ ಮಂಟಪ ಇಲ್ಲಿ ಸಂಸ್ಕೃತಿ ಸಂಸ್ಕಾರವನ್ನು ಈ ಕಾರುಣ್ಯ ಕುಟುಂಬದಲ್ಲಿ ಸಾರ್ವಜನಿಕರು ಸೇವೆ ಮಾಡುವ ಮೂಲಕ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿರುವುದು ನಮ್ಮೆಲ್ಲರಿಗೆ ಸಂತೋಷವನ್ನು ಉಂಟು ಮಾಡಿದೆ ಈ ಆಶ್ರಮದಲ್ಲಿ ಸೇವೆ ಮಾಡಿರುವಂತಹ ಅದೆಷ್ಟೋ ಸೇವಕರ್ತರುಗಳು ವಿಭಿನ್ನ ರೀತಿಯ ಸೇವೆ ಮಾಡಿ ಸಮಾಜಕ್ಕೆ ಮಾದರಿಯಾಗುತ್ತಿರುವುದು ಕಾರುಣ್ಯ ಕುಟುಂಬದ ಘನತೆ ಗೌರವವನ್ನು ಹೆಚ್ಚಿಸುತ್ತಿದೆ. ಈ ಕಾರುಣ್ಯ ಕುಟುಂಬಕ್ಕೆ ನಮ್ಮೆಲ್ಲರ ನಿರಂತರ ಸಹಾಯ ಸಹಕಾರ ಆಶೀರ್ವಾದ ಸದಾವಕಾಲವಿರುತ್ತದೆ ಎಂದು ಆಶೀರ್ವಚನ ನೀಡಿದರು. ಈ ಕಾರ್ಯಕ್ರಮದಲ್ಲಿ ಸೂಫಿ ಹಾಜಿ ಮಲ್ಲಿಂದ ಬಾಬಾ ಖಾದ್ರಿ ಹಣವಾಳ ಸಂತೆಕೂಡ್ಲೂರು. ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ. ಶ್ರೀಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದ ಗುಡ್ಡ ಸಿದ್ದಯ್ಯ ಸ್ವಾಮಿ ಮರಿಯಪ್ಪ ಜ್ಯೋತಿ ಹಾಗೂ ಸಂತೆಕೂಡ್ಲುರಿನ ಹಲವಾರು ಸದ್ಭಕ್ತರು ಉಪಸ್ಥಿತರಿದ್ದರು

