ಕಾಂಗ್ರೆಸ್ ಪಕ್ಷದಿಂದ ರಾಜ್ಯದಾದ್ಯಂತ ‘ಮನರೇಗಾ ಬಚಾವ್ ಸಂಗ್ರಾಮ್’ ಜನಾಂದೋಲನ ರೂಪಿಸಿ,
ಯುಪಿಎ ಜಾರಿಗೆ ತಂದ ಕಾರ್ಯಕ್ರಮಗಳನ್ನು ರದ್ದು ಮಾಡಿ ಉದ್ಯೋಗದ ಹಕ್ಕು ಕಸಿದುಕೊಳ್ಳಲು ಕೇಂದ್ರ, ಸರ್ಕಾರ ನಡೆಸಿದ ಬಾರಿ ಸಂಚಿನ ವಿರುದ್ದ ತಾಲೂಕು ಕಾಂಗ್ರೆಸ್ ಸಮಿತಿಯಿಂದ ಜ.16 ರಂದು ತಹಶೀಲ್ದಾರ್ ಕಚೇರಿ ಮುಂದೆ ಒಂದು ದಿನದ ಉಪವಾಸ ಸತ್ಯಾಗ್ರಹ
ಹಮ್ಮಿಕೊಳ್ಳಲಾಗುವುದು ಎಂದು ವಿಧಾನ ಪರಿಷತ್ ಶಾಸಕ ಬಸನಗೌಡ ಬಾದರ್ಲಿ ಹೇಳಿದರು.
ಸೋಮವಾರ ನಗರದ ಪತ್ರಿಕಾ ಭವನದಲ್ಲಿ
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,
ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅಧಿಕಾರದ ಅವಧಿಯಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರ ಹೆಸರಿನಲ್ಲಿ ‘ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’ ಹೆಸರನ್ನು ಜಾರಿಗೆ ತಂದಿತ್ತು. ಕೇಂದ್ರ ಬಿಜೆಪಿ ಸರ್ಕಾರ ಸಂಪೂರ್ಣ ಬದಲಾಯಿಸಿ, ಬಡಜನರ ಉದ್ಯೋಗದ ಹಕ್ಕನ್ನು ಕಿತ್ತಿಕೊಳ್ಳುವ ಕೆಲಸವನ್ನು ಮಾಡುತ್ತಿದೆ. ಇದನ್ನು ವಿರೋಧಿಸಲು ನಮ್ಮ ಕಾಂಗ್ರೆಸ್ ಪಕ್ಷ ನಿದರ್ಶನ ನೀಡಿದೆ. ಸಿಂಧನೂರು ತಾಲೂಕಿನ ಪ್ರತಿ ಗ್ರಾ.ಪಂ.ಮಟ್ಟದಲ್ಲಿ ಜ.18 ರಿಂದ 29 ವರೆಗೆ ‘ಜನ ಸಂಪರ್ಕ ಸಭೆ’ ಮತ್ತು ಜ.29 ತಾಲೂಕು ಕಾಂಗ್ರೆಸ್ ಸಮಿತಿ ವತಿಯಿಂದ 5 ಕಿ.ಮೀ. ಪಾದಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ.
ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ ಪ್ರತಿಯೊಬ್ಬರಿಗೂ ಉದ್ಯೋಗ ಪಡೆವ ಹಕ್ಕನ್ನು ಹೊಂದಿದ್ದಾರೆ. ಇದನ್ನು ನಿಷ್ಕ್ರಿಯಗೊಳಿಸುವ ಹುನ್ನಾರ ಪ್ರಧಾನಿ ನರೇಂದ್ರ ಮೋದಿ, ಗೃಹಮಂತ್ರಿ ಅಮಿತ್ ಷಾ ಅವರು ಮಾಡುತ್ತಿದ್ದಾರೆ. ಇದು ಬಡವರ ಹಕ್ಕನ್ನು ಕಿತ್ತಿ ಕೈಗಾರಿಕೆಗಳ ಕೈಗೆ ಕೊಡುವ ಕೆಲಸ ಮತ್ತು ವರ್ಷದ 365 ದಿನದ ಕೆಲಸವನ್ನು 60 ದಿನಕ್ಕೆ ಇಳಿಸಲು ಪ್ರಯತ್ನ ಇದಾಗಿದ್ದು, ನಿರುದ್ಯೋಗ ತಾಂಡವಾಡಲು ಮಾಡುವ ಹುನ್ನಾರ ಎಂದು ಆರೋಪಿಸಿದರು.
ಈ ವೇಳೆ: ಶಿವಕುಮಾರ ಜವಳಿ, ವೆಂಕಟೇಶ ರಾಗಲಪರ್ವಿ, ಶರಣಯ್ಯಸ್ವಾಮಿ ಕೋಟೆ, ವೀರರಾಜ, ಅಮರೇಶ ಗಿರಿಜಾಲಿ, ಅಬಿಬ್, ಖಾಜಾಸಾಬ್ ರೌಡಕುಂದ, ಯುಸೂಫ್ ಏತ್ಮಾರಿ, ಸೇರಿದಂತೆ ಅನೇಕರು ಪತ್ರಿಕಾಗೋಷ್ಠಿಯಲ್ಲಿದ್ದರು.

