ರಾಯಚೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದ 100 ಮೀಟರ್‌ ಓಟದ ಸ್ಪರ್ಧೆಯಲ್ಲಿ ರಾಮನಗೌಡ ಹಾಗೂ ಶ್ರೀದೇವಿ ಅವರು ವೇಗದ ಓಟಗಾರರಾಗಿ ಹೊರ ಹೊಮ್ಮಿದರು.
ಪುರಷರ ವಿಭಾಗದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಮಸ್ಕಿ ಆರೋಗ್ಯ ಇಲಾಖೆಯ ರಾಮನಗೌಡ ಪ್ರಥಮ ಸ್ಥಾನ, ಮಸ್ಕಿ ಶಾಲಾ ಶಿಕ್ಷಣ ಇಲಾಖೆಯ ಬಸವರಾಜ ದ್ವಿತೀಯ ಸ್ಥಾನ ಹಾಗೂ ದೇವದುರ್ಗದ ಶಾಲಾ ಶಿಕ್ಷಣ ಇಲಾಖೆಯ ಸದ್ದಾಂ ಹುಸೇನ್ ತೃತೀಯ ಸ್ಥಾನ ಪಡೆದರು.

ಮಹಿಳೆಯರ ವಿಭಾಗದಲ್ಲಿ ಮಸ್ಕಿ ಕಂದಾಯ ಇಲಾಖೆಯ ಶ್ರೀದೇವಿ ಪ್ರಥಮ ಸ್ಥಾನ, ದೇವದುರ್ಗದ ಕಂದಾಯ ಇಲಾಖೆಯ ದೀಪಾ ದ್ವಿತೀಯ ಹಾಗೂ ದೇವದುರ್ಗದ ಆರೋಗ್ಯ ಇಲಾಖೆಯ ಹುಲಿಗೆಮ್ಮ ತೃತೀಯ ಸ್ಥಾನ ಪಡೆದರು.

200 ಮೀಟರ್ ಓಟ: ಸಿಂಧನೂರಿನ ಶಾಲಾ ಶಿಕ್ಷಣ ಇಲಾಖೆಯ ಜಗದೀಶ ಪ್ರಥಮ ಸ್ಥಾನ, ಮಸ್ಕಿ ಆರೋಗ್ಯ ಇಲಾಖೆಯ ರಾಮನಗೌಡ ದ್ವಿತೀಯ ಸ್ಥಾನ, ಮಸ್ಕಿ ಶಾಲಾ ಶಿಕ್ಷಣ ಇಲಾಖೆಯ ಚಂದ್ರಶೇಖರ ತೃತೀಯ ಸ್ಥಾನ ಪಡೆದರು.

ಮಹಿಳೆಯರ ವಿಭಾಗದಲ್ಲಿ ಮಸ್ಕಿ ಕಂದಾಯ ಇಲಾಖೆಯ ಶ್ರೀದೇವಿ ಪ್ರಥಮ ಸ್ಥಾನ, ದ್ವಿತೀಯ ಸ್ಥಾನ ದೇವದುರ್ಗದ ಕಂದಾಯ ಇಲಾಖೆಯ ದೀಪಾ, ತೃತೀಯ ಸ್ಥಾನ ಸಿಂಧನೂರಿನ ಸರ್ವೆ ಇಲಾಖೆಯ ನಾಗರತ್ನ ಪಡೆದುಕೊಂಡರು.

400 ಮೀಟರ್ ಓಟ: ಬಿಸಿಎಂ ಇಲಾಖೆಯ ರಮೇಶ ಪ್ರಥಮ ಸ್ಥಾನ, ಸಮಾಜ ಕಲ್ಯಾಣ ಇಲಾಖೆಯ ರಾಘವೇಂದ್ರ ದ್ವಿತೀಯ ಹಾಗೂ ಅಯ್ಯಪ್ಪ ತೃತೀಯ ಸ್ಥಾನ ‍ಪಡೆದರು.

ಮಹಿಳಾ ವಿಭಾಗದಲ್ಲಿ ಮಾನವಿ ಶಾಲಾ ಶಿಕ್ಷಣ ಇಲಾಖೆಯ ಶಿವಲೀಲಾ ಪ್ರಥಮ ಸ್ಥಾನ, ಸಿಂಧನೂರಿನ ಶಾಲಾ ಶಿಕ್ಷಣ ಇಲಾಖೆಯ ವಿದ್ಯೇಶ್ವರಿ ದ್ವಿತೀಯ ಸ್ಥಾನ, ಲಿಂಗಸೂಗೂರಿನ ಶಾಲಾ ಶಿಕ್ಷಣ ಇಲಾಖೆಯ ರೂಪಾ ತೃತೀಯ ಸ್ಥಾನ ಪಡೆದರು.

800 ಮೀಟರ್ ಓಟ: ಬಿಸಿಎಂ ಇಲಾಖೆಯ ರಮೇಶ ಪ್ರಥಮ ಸ್ಥಾನ, ನ್ಯಾಯಾಂಗ ಇಲಾಖೆಯ ಮಾರುತಿ ದ್ವಿತೀಯ ಸ್ಥಾನ ಹಾಗೂ ಆರೋಗ್ಯ ಇಲಾಖೆಯ ಚೇತನಕುಮಾರ ಅವರು ತೃತೀಯ ಪಡೆದರು.

ಮಹಿಳೆಯರ ವಿಭಾಗದಲ್ಲಿ ರಾಯಚೂರಿನ ಶಾಲಾ ಶಿಕ್ಷಣ ಇಲಾಖೆಯ ಜಯಲಕ್ಷ್ಮಿ ಪ್ರಥಮ, ದೇವದುರ್ಗದ ಕಂದಾಯ ಇಲಾಖೆಯ ಶ್ರೀದೇವಿ ದ್ವಿತೀಯ ಹಾಗೂ ದೇವದುರ್ಗದ ಆರೋಗ್ಯ ಇಲಾಖೆಯ ಚಾಂದಬೀಬಿ ತೃತೀಯ ಸ್ಥಾನ ಪಡೆದರು.
ರಾಯಚೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದ ಮಹಿಳೆಯರ ಕಬಡ್ಡಿ ಪಂದ್ಯದಲ್ಲಿ ಕ್ರೀಡಾಪಟುಗಳ ಸೆಣಸಾಟ
ಉದ್ದ ಜಿಗಿತ: ಮಂಜುನಾಥ ಪ್ರಥಮ ಸ್ಪರ್ಧೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಮಂಜುನಾಥ ಪ್ರಥಮ ಸ್ಥಾನ ಬಿ.ಪ್ರಭು ದ್ವಿತೀಯ ಶಶಿಧರ ತೃತೀಯ ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಶಾಲಾ ಶಿಕ್ಷಣ ಇಲಾಖೆಯ ನೀಲಮ್ಮ ಪ್ರಥಮ ಸ್ಥಾನ ಸಿಂಧನೂರಿನ ಶಾಲಾ ಶಿಕ್ಷಣ ಇಲಾಖೆಯ ಮಂಜುಳಾ ದ್ವಿತೀಯ ಸ್ಥಾನ ದೇವದುರ್ಗದ ಶಾಲಾ ಶಿಕ್ಷಣ ಇಲಾಖೆಯ ಪದ್ಮಾವತಿ ತೃತೀಯ ಸ್ಥಾನ ಪಡೆದರು.

Leave a Reply

Your email address will not be published. Required fields are marked *