ರಾಯಚೂರು ಜನವರಿ 07 (ಕರ್ನಾಟಕ ವಾರ್ತೆ): ಕರ್ನಾಟಕ ಜಾನಪದ ಅಕಾಡೆಮಿಯು ಫೆಲೋಶಿಪ್ (ಅಧ್ಯಯನ ವೇತನ) ಲೇಖನಗಳಿಗೆ ಸಾಮಾನ್ಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಜಾನಪದ ಅಕಾಡೆಮಿಯ ವೆಬ್‌ಸೈಟ್ ವಿಳಾಸ: (https://janapada.karnataka.gov.in) ನಲ್ಲಿ ತಿಳಿಸಿರುವ ಶಿರ್ಷಿಕೆಗಳನ್ನು ಆಧರಿಸಿ ಕ್ಷೇತ್ರಕಾರ್ಯ ನಡೆಸಿ ಅಧ್ಯಯನ ಕೃತಿಗಳನ್ನು ಸಿದ್ಧಪಡಿಸಿಕೊಡಲು ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿರುವ ಒಂದು ಶೀರ್ಷಿಕೆಯನ್ನು ಆಯ್ಕೆ ಮಾಡಿ 5 ಪುಟಗಳ ಸಾರಲೇಖ (Synopsis)ವನ್ನು ಬರೆದು ಜನವರಿ 223ರೊಳಗಾಗಿ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, ಎರಡನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು – 560002 ಇವರಿಗೆ ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *