ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಯಲ್ಲಿ ಸಿಗುತ್ತದೆ. ಉತ್ತಮ ಶಿಕ್ಷಕರನ್ನ ಸರ್ಕಾರ ನೇಮಕ ಮಾಡಿರುತ್ತದೆ.
ಶಿಕ್ಷಕರ ನೇಮಕಾತಿಯಲ್ಲಿ ವಿವಿಧ ಪರೀಕ್ಷೆಗಳನ್ನು ಸರ್ಕಾರ ಒಡ್ಡಿ, ಅದರಲ್ಲಿ ಉತ್ತಮ ಶ್ರೇಣಿಯಲ್ಲಿಯೇ ತೇರ್ಗಡೆಯಾದ ಶಿಕ್ಷಕರನ್ನು ಆಯ್ಕೆಮಾಡಿ ಕಳಿಸಿರುತ್ತದೆ ಯಾವ ಖಾಸಗಿ ಶಾಲೆಗಳಿಗೂ ಕಮ್ಮಿಯಿಲ್ಲ ಸರ್ಕಾರಿ ಶಾಲೆಗಳು, ಅಷ್ಟರಮಟ್ಟಿಗೆ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ಸಿಗುತ್ತಿದೆ ಇದರ ಸದುಪಯೋಗವನ್ನು ಮಕ್ಕಳು ಬಡ ಪಾಲಕರು ಪಡೆದುಕೊಳ್ಳಬೇಕು ಎಂದು ಬಿ.ಆರ್.ಪಿ ಬಸವರಾಜ ಆನೆಗುಂದಿ ಹೇಳಿದರು.

ತಾಲೂಕು ಸಮಿತಿ ಜೈ ಭೀಮ್ ಘರ್ಜನೆ ಸಂಘದ
ಪದಾಧಿಕಾರಿಗಳು ಹಾಗೂ ಸಂಸ್ಥಾಪಕ ಮತ್ತು ಅಧ್ಯಕ್ಷ ನಿರುಪಾದಿ ಸಾಸಲಮರಿ ಅವರ ವತಿಯಿಂದ ನಗರದ ಸುಕಾಲಪೇಟೆಯ ಪಿಎಂಶ್ರೀ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಜ.7 ಬುಧವಾರದಂದು ನೋಟ್ ಬುಕ್, ಪೆನ್, ಮತ್ತು ಶಾಲಾ ಬ್ಯಾಗ್ ವಿತರಣೆ ಹಾಗೂ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಿಂಧನೂರು ತಾಲೂಕು ಮತ್ತು ಜಿಲ್ಲಾ ಸಮಿತಿಗೆ ಆಯ್ಕೆಯಾದ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಂತರ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶರಣಪ್ಪ ಕೆ ಗೋನಾಳ ಮಾತನಾಡಿ, ಸಂವತ್ಸರ, ತಿಂಗಳಗಳು, ಋತುಗಳು, ವಾರಗಳು ಕೇಳಿ ವಿದ್ಯಾರ್ಥಿಗಳ ಕಲಿಕಾ ವಿಧಾನ ಪ್ರಶ್ನಿಸಿದರು. ಮಕ್ಕಳು ಕೊಟ್ಟ ಉತ್ತರಕ್ಕೆ ಭೇಷ್ ಎಂದು ಮಾತು ಮುಂದುವರಿಸಿ ಸರ್ಕಾರಿ ಶಾಲೆಯಲ್ಲಿ ಸಿಗುವ ಸಂಸ್ಕೃತಿ, ಸಾಂಸ್ಕೃತಿಕ, ಪಠ್ಯೇತರ ಚಟುವಟಿಕೆಗಳು ಖಾಸಗಿ ಶಾಲೆಗಳಲ್ಲಿ ಸಿಗುವುದು ಕಡಿಮೆ, ಇಲ್ಲಿ ಉತ್ತಮ ನುರಿತ ಶಿಕ್ಷಕರು ಸಿಗುತ್ತಾರೆ. ಖಾಸಗಿ ಶಾಲೆಗಳಲ್ಲಿ ಸಿಗುವುದು ಕಡಿಮೆ, ಆದರೂ ಇಂದಿನ ಯುಗದಲ್ಲಿ ಖಾಸಗಿ ಶಾಲೆಗಳತ್ತ ಮುಖ ಮಾಡಿ ಆರ್ಥಿಕ ತೊಂದರೆ ಅನುಭವಿಸುತ್ತಿದ್ದೇವೆ. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳಸಿದಾಗ ಮಾತ್ರ ಬಡವರ ಮಕ್ಕಳು ಬೆಳಕಿಗೆ ಬರಲು ಸಾಧ್ಯ ಎಂದರು.

ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ಹೊನ್ನೂರು ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೈ ಭೀಮ್ ಘರ್ಜನೆ ಸಂಘದ ಸಂಸ್ಥಾಪಕ ಹಾಗೂ ಅಧ್ಯಕ್ಷ ನಿರುಪಾದಿ ಸಾಸಲಮರಿ ಸಂಘಟನೆ ಉದ್ದೇಶ ಮತ್ತು ಅದರ ಧ್ಯೆಯಗಳ ಬಗ್ಗೆ ತಿಳಿಸಿದರು.

ಈ ವೇಳೆ: ಉಪಾಧ್ಯಕ್ಷರಾದ ಹೊನ್ನೂರು ಕಟ್ಟಿಮನಿ, ಚನ್ನಬಸವ ಯೆದ್ದಲ್ಲದೊಡ್ಡಿ, ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಸೋಮಲಾಪುರ, ವೀರೇಶ ಬೂದಿವಾಳ ಕ್ಯಾಂಪ್, ಕಾರ್ಯಾಧ್ಯಕ್ಷ ಬಾಲರಾಜ ವಿರುಪಾಪುರ, ಸಂಘಟನಾ ಕಾರ್ಯದರ್ಶಿ ವೀರೇಶ ಬೂದಿವಾಳ,
ಸಹಕಾರ್ಯದರ್ಶಿ ಮುನಿಯಪ್ಪ ತಿಮ್ಮಾಪುರ, ಕಾರ್ಯದರ್ಶಿ ಹುಲಗಪ್ಪ ಸತ್ಯವತಿ ಕ್ಯಾಂಪ್, ವೀರೇಶ ಬೆಳಗುರ್ಕಿ, ಖಜಾಂಚಿ ಆದೇಶ ಮಲ್ಲಾಪುರ, ಮುಖಂಡ ಹಾರೂನ್ ಜಾಗೀರದಾರ್, ರಫೀ, ಶಾಲೆಯ ಮುಖ್ಯ ಗುರುಗಳಾದ ಗುರುಬಸಯ್ಯ ಹಿರೇಮಠ, ತುರ್ವಿಹಾಳ ವಲಯದ ಈ.ಸಿ.ಒ.ಕುಮಾರಸ್ವಾಮಿ, ಕನಕ ನಗರ ವಲಯ ಸಿ.ಆರ್.ಪಿ.ಹನುಮಂತಪ್ಪ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *