2004-5 ರಲ್ಲಿ ಎಡ ಪಕ್ಷಗಳ ಬೆಂಬಲದ ಮೇಲೆ ಆದಾರವಾಗಿದ್ದ ಮನಮೋಹನಸಿಂಗ್ ಸರ್ಕಾರ ಉದ್ಯೋಗ ಖಾತ್ರಿ ಕಾಯ್ದೆಯನ್ನು ಜಾರಿಗೊಳಿಸಿತ್ತು.
ಈ ಕಾಯ್ದೆಯು ಗ್ರಾಮೀಣರ ಕೃಷಿ ಕಾರ್ಮಿಕರಿಗೆ ದೊಡ್ಡ ವರದಾನವಾಗಿತ್ತು. ಇದನ್ನು ಬಿಜೆಪಿ ನೇತೃತ್ವದ ಸರ್ಕಾರ ಬದಲಿಸುತ್ತಿರುವುದನ್ನು ಖಂಡಿಸಿ, ಜ.6 ಮಂಗಳವಾರ ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದಿಂದ ಸಾಲಗುಂದಾ, ಧಡೇಸೂಗೂರು, ಹಾಗೂ ವಿರುಪಾಪುರ ಗ್ರಾಮ ಪಂಚಾಯತಿಗಳ ಪಿಡಿಓ ಅವರ ಮೂಲಕ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಎಡ ಪಕ್ಷಗಳ ಒತ್ತಡದ ಹಿನ್ನಲೆಯಲ್ಲಿ ಮೂಡಿಬಂದ ಮನರೇಗಾವನ್ನು ಆಗಿನ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿ, ಗ್ರಾಮೀಣ ಕಾರ್ಮಿಕರಿಗೆ ಉದ್ಯೋಗದ ಖಾತ್ರಿ ನೀಡಿತ್ತು. ಉದ್ಯೋಗ ಮನರೇಗಾದಲ್ಲಿ ಹಕ್ಕಾಗಿತ್ತು. ಕೆಲಸ ಕೇಳಿದ ಮೇಲೆ ಕೆಲಸ ಒದಗಿಸಬೇಕು ಇಲ್ಲದಿದ್ದಲ್ಲಿ ನೀರುದ್ಯೋಗ ಭತ್ಯೆಯನ್ನಾದರೂ ನೀಡಬೇಕು ಎಂದು ಕಾನೂನಿನಲ್ಲಿತ್ತು. ಈ ಮೂಲಭೂತ ಹಕ್ಕನ್ನೆ ಈಗಿನ ಜಿರಾಮಜಿ ಕಾಯ್ದೆ ಕಿತ್ತು ಹಾಕಿದೆ. ಹಣ ಇರುವವರೆಗೆ ಮಾತ್ರ ಕೆಲಸ ಎಂದಿದೆ. ಮತ್ತು ವಿಕೇಂದ್ರಿಕರಣದ ಮೂಲತತ್ವ ಗ್ರಾ.ಪಂಚಾಯತಿಗಳಿಗೆ ಮನರೇಗಾದಲ್ಲಿ ತೀರ್ಮಾನ ತೆಗೆದುಕೊಳ್ಳುವುದನ್ನು ಹೊಸ ಕಾಯ್ದೆಯನ್ನು ಬದಲಾಯಿಸಿ, ಗುತ್ತಿಗೆದಾರರಿಗೆ ನೀಡುವ ಯೋಜನೆ ರೂಪಿಸಿದೆ.
ಮೊದಲಿನ ಕೇಂದ್ರ ಸರ್ಕಾರದ ನೀಡುತ್ತಿದ್ದ ಅನುದಾನ ಬದಲಾಯಿಸಿ, ಈಗ ಶೇ.60 ರಷ್ಟು ಕೇಂದ್ರ ಸರ್ಕಾರ ಶೇ.40 ರಷ್ಟು ರಾಜ್ಯ ಸರ್ಕಾರ ಎಂದು ಬದಲಿಸಿದ್ದು, ಇದರಿಂದಾಗಿ ರಾಜ್ಯ ಸರ್ಕಾರಗಳ ಮೇಲೆ ಬಹುದೊಡ್ಡ ಆರ್ಥಿಕ ಹೊರೆ ಹೆಚ್ಚಾಗಲಿದೆ. ಹೊಸ ಕಾಯ್ದೆಯನ್ನು ರದ್ದು ಪಡಿಸಿ, ಹಿಂದಿನ ಮನರೇಗಾವನ್ನು ಜಾರಿಗೊಳಿಸಿ ಅದರಲ್ಲಿರುವ ನ್ಯೂನತೆಗಳನ್ನು ಬದಲಾಯಿಸಿ, ನಗರ ಪ್ರದೇಶಕ್ಕೆ ವಿಸ್ತರಿಸುವುದು. 200 ದಿನಗಳಿಗೆ ಮಾನವ ದಿನಗಳನ್ನು ಹೆಚ್ಚಿಸುವುದು, 600 ಕೂಲಿ ಹೆಚ್ಚಿಸುವ ಮಾರ್ಪಾಡು ಮಾಡಲು ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ಒತ್ತಾಯಿಸಿ, ಜ.6ರ ಮಂಗಳವಾರದಂದು ಸಾಲಗುಂದಾ, ಧಡೇಸೂಗೂರು, ಹಾಗೂ ವಿರುಪಾಪುರ ಗ್ರಾಮ ಪಂಚಾಯತಿ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ: ಮುಖಂಡರಾದ ಅಪ್ಪಣ್ಣ ಕಾಂಬ್ಳೆ, ಶಂಕ್ರಪ್ಪ ಕೆಂಗಲ್, ಹುಸೇನಪ್ಪ ಧಡೇಸೂಗೂರು, ಯಲ್ಲಪ್ಪ, ಮಲ್ಲಮ್ಮ, ಮೌನಮ್ಮ, ಖಾಜಾಬಿ, ಜೈನಾಬಿ, ಶಾದಿ ಅಲಿ, ಪಾರ್ವತಮ್ಮ, ಮದರಬಿ, ಈಬಳೇಸ್, ರಾಜಾಸಾಬ್, ಮೇಗಳಮನಿ ಯಲ್ಲಪ್ಪ, ರಾಜಪ್ಪ, ವೀರೇಶ, ಸತ್ಯಪ್ಪ, ಹನುಮೇಶ, ಚಿದಾನಂದಪ್ಪ, ಕರಿಯಮ್ಮ, ಹನುಮಂತ, ಗಂಗಮ್ಮ, ದುರುಗಮ, ಸೇರಿದಂತೆ ಅನೇಕ ಮನರೇಗಾ ಕಾರ್ಮಿಕರು ಇದ್ದರು.

