ಸಿರವಾರ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಯೋಜನೆಯಡಿ ನಿರ್ಗತಿಕರಿಗೆ ಒದಗಿಸುವ ಉಚಿತ ಮನೆ ನಿರ್ಮಾಣಕ್ಕೆ ಜಿಲ್ಲಾ ಯೋಜನಾ ನಿರ್ದೇಶಕ ರಾಘವೇಂದ್ರ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.
ಪಟ್ಟಣದ ವಿಜಯನಗರ ಕಾಲೊನಿಯ ಬಸಮ್ಮ ಅವರಿಗೆ ಮಂಜೂರಾದ ವಾತ್ಸಲ್ಯ ಯೋಜನೆಯ ಮನೆ ನಿರ್ಮಾಣಕ್ಕೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದ ಅವರು, ‘ವಾತ್ಸಲ್ಯ’ ಯೋಜನೆ ಹೇಮಾವತಿ ಅಮ್ಮನವರ ಕನಸಿನ ಕೂಸು ನಿರ್ಗತಿಕರಿಗೆ ಸೂರು ಕಲ್ಪಿಸುವ ಮಹತ್ವದ ಯೋಜನೆ ಇದಾಗಿದೆ’ ಎಂದರು.

ಜಿಲ್ಲಾ ಜನ ಜಾಗೃತಿ ಸಮಿತಿ ಕೋಶಾಧಿಕಾರಿ ಅಯ್ಯನಗೌಡ ಏರಡ್ಡಿ ಮಾತನಾಡಿ, ‘ನಮ್ಮಲ್ಲಿರುವ ನಿರ್ಗತಿಕರನ್ನು ಸ್ಥಳೀಯರಾದ ನಾವು ಗುರುತಿಸಲು ಸಾಧ್ಯವಾಗದಿದ್ದರೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುರುತಿಸುತ್ತಿರುವುದು ನಮ್ಮ ಭಾಗ್ಯ’ ಎಂದರು.

ತಾಲ್ಲೂಕು ಯೋಜನಾಧಿಕಾರಿ ಬಿ.ಚಂದ್ರಹಾಸ, ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಜ್ಞಾನಮಿತ್ರ, ಜ್ಞಾನ ವಿಕಾಸದ ಸಮನ್ವಯಾಧಿಕಾರಿ ಯಶೋಧಾ, ವಲಯ ಮೇಲ್ವಿಚಾರಕಿ ವನೀತಾ ಹಾಗು ಒಕ್ಕೂಟದ ಅಧ್ಯಕ್ಷೆ ಲಕ್ಷ್ಮಿ, ಅಂಬಿಕಾ, ಗೀತಾ ಮತ್ತು ಪದಾಧಿಕಾರಿಗಳು,ಸೇವಾ ಪ್ರತಿನಿಧಿಗಳಾದ ಶಾಂತಾ,ಸೌಮ್ಯ, ಕಲ್ಪನಾ, ಪರ್ವೀನ್, ದುರ್ಗಮ್ಮ ಹಾಗು ಸಿಬ್ಬಂದಿ ಅಕ್ಬರ್ ಹಾಜರಿದ್ದರು.

Leave a Reply

Your email address will not be published. Required fields are marked *