ರಾಯಚೂರು : ರಾಯಚೂರಿನಲ್ಲಿ ಸ್ಥಾಪಿಸಲಾಗಿರುತ್ತಿರುವ ಟೆಕ್ಸ್ ಟೈಲ್ ಪಾರ್ಕ್ ಈ ಮೊದಲು ಸಹಭಾಗಿತ್ವದಲ್ಲಿ ನಡೆಸಲು ಉದ್ದೇಶಿಲಾಗಿತ್ತು. ಆದರೀಗ ರಾಜ್ಯ ಸರ್ಕಾರವೇ ಪಿಪಿಪಿ ಮಾದರಿ ಪಾರ್ಕ್ ಸ್ಥಾಪಿಸುವದನ್ನು ಕೈ ಬಿಟ್ಟು ಶೀಘ್ರದಲ್ಲಿ ಆದೇಶ ಹೊರಬೀಳುವ ಸಾಧ್ಯತೆಗಳಿವೆಂದು ರಾಯಚೂರು ಕಾಟನ್ ಮಿಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷ ವಿ.ಲಕ್ಷ್ಮೀರೆಡ್ಡಿ ಹೇಳಿದರು.
ನಗರದ ರಾಜೇಂದ್ರ ಗಂಜ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಅನೇಕ ಕೈಗಾರಿಕೆಗಳು ಸೇರಿದಂತೆ ಉದ್ಯಮಗಳಲ್ಲಿ ಅನ್ಯ ರಾಜ್ಯದವೇ ಉದ್ಯೋಗ ಪಡೆಯುತ್ತಿದ್ದಾರೆ. ಸ್ಥಳೀಯರ ಇಲ್ಲಿಯೇ ಕೆಲಸ ಮಾಡಲು ಹಿಂಜರೆದರು ಬೇರಡೆಗೆ ಉದ್ಯೋಗ ಅರಸಿ ಹೋಗುತ್ತಿದ್ದಾರೆ. ಜಿಲ್ಲಾ ಕೈಗಾರಿಕಾ ಕೇಂದ್ರ ಸಹಯೋಗದಲ್ಲಿ ತರಬೇತಿ ನೀಡಲು ಉದ್ದೇಶಿಸಲಾಗಿದೆ.

ಕೈಗಾರಿಕೆಗಳಲ್ಲಿ ಹೆಲ್ಪರ್ ಮೆಕ್ಯಾನಿಕಲ್ ಸೇರಿದಂತೆ ಲೆಕ್ಕಪತ್ರ ನಿರ್ವಹಣೆ ಪಡೆಯಲು ಯುವಕ ಯುವತಿಯರು ಮುಂದಾಗಬೇಕೆಂದರು ಸ್ಥಳೀಯವಾಗಿ ಲಭ್ಯವಾಗುವ ಉದ್ಯಮಿಗಳಿಗೆ ಅಗತ್ಯವಿರುವ ಉದ್ಯೋಗ ತರಬೇತಿ ಪಡೆಯಲು ಅಸೋಸಿಯೇಷನ್‌ನಿಂದ ತರಬೇತಿ ಕೇಂದ್ರ ಸ್ಥಾಪಿಸಲು ಯೋಚಿಸಲಾಗುತ್ತಿದೆ ಇದರಿಂದ ಸಾವಿರಾರು ಯುವಕ ಯುವತಿಯರಿಗೆ ಉದ್ಯೋಗ ದೊರೆಯಲಿದೆ ಎಂದರು.

ಈ ಸಂದರ್ಭದಲ್ಲಿ ಅಸೋಸಿಯೇಷನ್ ಪ್ರಮುಖ ಸಿದ್ದನಗೌಡ ಗಾರಲದಿನ್ನಿ, ಶೈಲೇಶಕುಮಾರ, ವಿಜಯಕುಮಾರ ರೆಡ್ಡಿ ಇದ್ದರು.

Leave a Reply

Your email address will not be published. Required fields are marked *