ಮಾನ್ವಿ: ಪಟ್ಟಣದ ಪತ್ರಿಕಾ ಭವನದಲ್ಲಿ ಕರ್ನಾಟಕ ರಾಷ್ಟç ಸಮಿತಿ ಪಕ್ಷದ ತಾ.ಅಧ್ಯಕ್ಷರಾದ ರಮೇಶನಾಯಕ ಮಾತನಾಡಿ ಪಟ್ಟಣದ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ಕಳೆದ ಹಲವು ವರ್ಷಗಳಿಂದ ಹಮಾಲಿ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಉದ್ಭವ ಆಂಜನೇಯ್ಯ ಎ.ಪಿ.ಎಂ.ಸಿ, ಹಮಾಲರ ಸಂಘ ಮಾನ್ವಿಯ ಹಮಾಲಿ ಕಾರ್ಮಿಕರಿಗಾಗಿ 2004-05 ನೇ ಸಾಲಿನಲ್ಲಿ ಮುಸ್ಟೂರು ರಸ್ತೆಯಲ್ಲಿ ಕಾಯ್ದಿರಿಸಿದ 2 ಎಕರೆ 25 ಗುಂಟೆ ಜಮೀನಿನಲ್ಲಿ 120 ನಿವೇಶನಗಳನ್ನು ರಚಿಸಿದರು ಕೂಡ ಎ.ಪಿ.ಎಂ.ಸಿ, ಹಮಾಲರಿಗೆ ಹಕ್ಕು ಪತ್ರ ನೀಡುವಲ್ಲಿ ಕಾರಣಾಂತರಗಳಿAದ ವಿಳಾಂಬವಾಗುತ್ತಿರುವ ಕುರಿತು ಬೆಂಗಳೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉನ್ನತ ಅಧಿಕಾರಿಗಳ ಗಮನಕ್ಕೆ ತಂದನAತರ ನ.20 ರಂದು ವಿವಿಧ ನಿಭಂದನೆ ಷರತ್ತುಗಳಿಗೆ ಒಳಪಟ್ಟು ನಿಯಮಾನುಸಾರ ಪರಿಶೀಲಿಸಿ 73 ನಿವೇಶನಗಳನ್ನು ಹಮಾಲರಿಗೆ ಹಂಚಿಕೆ ಮಾಡುವುದಕ್ಕೆ ಅದೇಶ ನೀಡಿ ಎರಡು ತಿಂಗಳು ಕಳೆದರು ಕೂಡ ಇದುವರೆಗೆ ಎ.ಪಿ.ಎಂ.ಸಿ. ಕಾರ್ಯದರ್ಶಿಗಳು ನಿವೇಶನದ ಹಕ್ಕು ಪತ್ರಗಳನ್ನು ವಿತರಿಸುವುದಕ್ಕೆ ಮುಂದಾಗದೆ ಇರುವುದರಿಂದ ಮುಂದಿನ ತಿಂಗಳು ರಾಯಚೂರಿಗೆ ಆಗಮಿಸಲಿರುವ ರಾಜ್ಯದ ಮುಖ್ಯ ಮಂತ್ರಿಗಳಿಗೆ ಹಮಾಲರಿಗೆ ಹಕ್ಕು ಪತ್ರ ನೀಡುವಂತೆ ಮನವಿ ಸಲ್ಲಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕೆ.ಆರ್.ಎಸ್.ರಾಜ್ಯ ಎಸ್.ಸಿ.ಎಸ್.ಟಿ. ಘಟಕದ ರಾಜ್ಯ ಕಾರ್ಯದರ್ಶಿ ಬಸವಪ್ರಭು ಮೇದಾ , ಪ್ರಧಾನ ಕಾರ್ಯದರ್ಶಿ ಪಂಪಾತಿ ಹಡಪದ ಇದ್ದರು.


.

Leave a Reply

Your email address will not be published. Required fields are marked *