ಕೇಂದ್ರ ಬಸ್ ನಿಲ್ದಾಣದಲ್ಲಿ ಶಾಸಕ ಹಂಪನಗೌಡ ಬಾದರ್ಲಿ ನಗರದ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿಯವರನ್ನು ವೇದಿಕೆಗೆ ಕರೆಯಿಸಿ
ಶಿಷ್ಟಾಚಾರ ಉಲ್ಲಂಘಿಸಿ ಅವಮಾನ ಮಾಡಿದ್ದಾರೆಂದು ಎಂಎಲ್ಸಿ ಬೆಂಬಲಿಗರು ಡಿಪೋ ಮೆನೇಜರ್ ಹೊನ್ನಪ್ಪ ಸೇರಿದಂತೆ ಡಿಟಿಒ, ಬಸ್ ಡಿಪೋಗೇಟ್ ಹಾಕಿ ಆಕ್ರೋಶ ಹೊರ ಹಾಕಿದ್ದು ಕಂಡುಬಂತು.
ಸೋಮವಾರ ತಾಲೂಕಿನ ಕಾಲೇಜು ವಿದ್ಯಾರ್ಥಿಗಳಿಗೆ ಓಡಾಡಲು ಶಾಸಕ ಹಂಪನಗೌಡ ಬಾದರ್ಲಿ 14 ಬಸ್‌ಗಳಿಗೆ ಚಾಲನೆ ನೀಡಿ, ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿ, ವೇದಿಕೆಯಲ್ಲಿ ಮಾತನಾಡಲು ಅವಕಾಶ ಕೊಡದೆ, ಕಾರ್ಯಕ್ರಮ ಮುಗಿಸಿ ವಿಧಾನ ಪರಿಷತ್ ಶಾಸಕ ಬಸನಗೌಡ ಬಾದರ್ಲಿಯವರಿಗೆ ಅವಮಾನ ಮಾಡಿದ್ದಾರೆ. ಈ ಕುರಿತು ಡಿಪೋ ಮ್ಯಾನೇಜರ್ ಹೊನ್ನಪ್ಪ ಇದು ನಮ್ಮ ಕಾರ್ಯಕ್ರಮ ಅಲ್ಲ, ಶಾಸಕರು ಮಾಡಿದ್ದು ಅಂತ ಹೇಳುತ್ತಿದ್ದಾರೆ. ಮೇಲಾಧಿಕಾರಿಗಳ ಮೂಲಕ ನಡೆದ ಪತ್ರದ ವ್ಯವಹಾರಗಳು ಪರಿಶೀಲಿಸಿದಾಗ ಸತ್ಯಾಸತ್ಯತೆ ತಿಳಿಯುತ್ತದೆ.
ಅಧಿಕಾರಿಗಳು ರಾಜಕಾರಣ ಮಾಡಬೇಡಿ ನೌಕರಿ ಮಾಡಿ ಎಂದು ಅಧಿಕಾರಿಗಳಿಗೆ ಧಿಕ್ಕಾರ ಕೂಗಿದರು. ಎಂಎಲ್ಸಿ ಬೆಂಬಲಿಗರು ಕೂಗಿ ಡಿಪೋಗೇಟ್ ಹಾಕಿ, ಬೇಕೆ ಬೇಕು ನ್ಯಾಯ ಬೇಕೆಂದು ಕೂಗಾಡಿ ರಸ್ತೆ ಬಂದ್ ಮಾಡಲು ಮುಂದಾದಾಗ ಡಿವೈಎಸ್ಪಿ ಜಿ.ಚಂದ್ರಶೇಖರ್ ಪ್ರತಿಭಟನೆ ನಿರತ ಬೆಂಬಲಿಗರನ್ನು ತಮ್ಮ ಪೊಲೀಸ್ ವಾಹನದಲ್ಲಿ ಕರೆದೊಯ್ದು ನಂತರ ಬಿಡುಗಡೆ ಮಾಡಿದರು.

