ವಿದ್ಯಾರ್ಥಿಗಳ ಪ್ರಯಾಣದ ಅನಾನುಕೂಲತೆ ಮನಗಂಡು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿಯವರು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಶಾಸಕರ ಅನುದಾನದಡಿಯಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೆಕೆಆರ್‌ಟಿಸಿ ನಿಗಮದ ವಿದ್ಯಾರ್ಥಿ ರಥ ವಿಶೇಷ 14 ಬಸ್ ಗಳನ್ನು ಖರಿದೀಸಿ, ಅದನ್ನು ವಿದ್ಯಾರ್ಥಿಗಳ ಪ್ರಯಾಣಕ್ಕಾಗಿ ಮೀಸಲಿಟ್ಟಿದ್ದು, ಜ.5 ಸೋಮವಾರದಂದು ಶಾಸಕರು ಬಸ್ ಗಳಿಗೆ ಚಾಲನೆ ನೀಡುವ ಮೂಲಕ ವಿದ್ಯಾರ್ಥಿಗಳೊದಿಗೆ ಸಂವಾದ ನಡೆಸಿದರು.

ನಗರದ ಬಸ್ ನಿಲ್ದಾಣದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿ ರಥಕ್ಕೆ ಚಾಲನೆ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ಬಸ್ ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಬೇಕು. ರಾಜ್ಯ ಸರ್ಕಾರ ಕೆಕೆಆರ್.ಡಿ.ಬಿ. ಅಡಿಯಲ್ಲಿ ಬಸ್ ಗಳ ವಯವಸ್ಥೆ ಮಾಡಿದ್ದು, ಈ ಸೌಲಭವನ್ನು ವಿದ್ಯಾರ್ಥಿಗಳು ಸದೂಪಯೋಗ ಪಡಿಸಿಕೊಂಡು 100 ಪ್ರತಿಶತ ಶಾಲಾ ಕಾಲೇಜಗಳಿಗೆ ಹಾಜರಾಗಬೇಕು.

ನನಗೆ ಗೊತ್ತಿರುವಂತೆ ವಿದ್ಯಾರ್ಥಿಗಳ ಹಾಜುರಾತಿ ಎಲ್ಲಾ ಕಾಲೇಜುಗಳಲ್ಲಿ ಕಡಿಮೆ ಇದೆ. ಕೇಳಿದರೆ ಬಸ್ ಇಲ್ಲ ಇದ್ದರೂ ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ. ಎನ್ನುತ್ತಿದ್ದೀರಿ, ಈಗ ನಿಮಗಾಗಿ ಬಸ್ ವ್ಯವಸ್ಥೆ ಮಾಡಿದ್ದು, ಈಗಲಾದರೂ ನೀವು ಸರಿಯಾಗಿ ಶಾಲಾ ಕಾಲೇಜಗಳಿಗೆ ಹಾಜುರಾಗಿ, ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿ, ಉನ್ನತ ಹುದ್ದೆ ಪಡೆದು ಸಿಂಧನೂರು ತಾಲೂಕಿಗೆ ಹೆಸರು ತರಬೇಕು ಎಂದರು.

ಈ ಸಂದರ್ಭದಲ್ಲಿ: ಎಂಎಲ್ಸಿ ಬಸನಗೌಡ ಬಾದರ್ಲಿ, ಸುಡಾ ಅಧ್ಯಕ್ಷ ಬಾಬುಗೌಡ ಬಾದರ್ಲಿ, ತಹಶೀಲ್ದಾರ್ ಅರುಣ್ ಕುಮಾರ್ ದೇಸಾಯಿ, ಇಓ ಚಂದ್ರಶೇಖರ್, ಹಾಗೂ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಯ ಸದಸ್ಯರು ಇದ್ದರು.

Leave a Reply

Your email address will not be published. Required fields are marked *