ಸಿಂಧನೂರು : ಸಿಂಧನೂರು ಡಿ 27 ರಾಮಕೃಷ್ಣ ಆಶ್ರಮದ ವತಿಯಿಂದ ಇಂದು “ವಿವೇಕ ಪಥ ರಾಷ್ಟ್ರದ ಹಿತ ” 6ನೇ ಕಾರ್ಯಕ್ರಮವನ್ನು ಸಿಂಧನೂರಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಸಿಂಧನೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪೂಜ್ಯ ಶ್ರೀ ಸ್ವಾಮಿ ಸದಾನಂದ ಮಹಾರಾಜ್ ರವರು ವಿದ್ಯಾರ್ಥಿಗಳಿಗೆ ಭಜನೆ ಹೇಳಿಕೊಟ್ಟರು ಹಾಗೂ ವಿದ್ಯಾರ್ಥಿಗಳಿಗೆ ಅಧ್ಯಯನ, ವ್ಯಕ್ತಿತ್ವ ನಿರ್ಮಾಣಕಾರಿ ವಿಷಯಗಳ ಬಗ್ಗೆ ತಿಳಿಸಿದರು..*
ಕಾರ್ಯಕ್ರಮದ ಉಪನ್ಯಾಸಕರಾದ ಶ್ರೀ ಪಂಪಾಪತಿ ಯಾದವ, ವ್ಯವಸ್ಥಾಪಕರು, HDFC ಬ್ಯಾಂಕ್ ಲಿಮಿಟೆಡ್ ಮುಖ್ಯ ಶಾಖೆ ಸಿಂಧನೂರು ಇವರು “ವಿದ್ಯಾರ್ಥಿಗಳಿಗಾಗಿ ಹಣಕಾಸು ಶಿಕ್ಷಣ” ವಿಷಯದ ಕುರಿತು ಅಕೌಂಟ್ ಮಾಡುವ ವಿಧಾನ, ಹಣ ಉಳಿತಾಯ, ಬ್ಯಾಂಕಿನ ವ್ಯವಹಾರಗಳ ಮಾಹಿತಿಗಳ ಕುರಿತು ವಿದ್ಯಾರ್ಥಿಗಳಿಗೆ ಅತ್ಯಪಯುಕ್ತ ಮಾಹಿತಿ ನೀಡಿದರು…*ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀ ಹೇಮಣ್ಣ ಪ್ರಾಚಾರ್ಯರು, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಸಿಂಧನೂರು ಇವರು ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳಿಂದ ಸಣ್ಣ ವಯಸ್ಸಿನಲ್ಲಿಯೇ ಉತ್ತಮ ವ್ಯವಹಾರಿಕ ಜ್ಞಾನ ದೊರೆಯುತ್ತದೆಂದು ಹೇಳಿದರು.

Leave a Reply

Your email address will not be published. Required fields are marked *