ಲಿಂಗಸಗೂರು : ಕರ್ನಾಟಕದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ರೈತರಿಗೆ, ಹೇಳತೀರದಷ್ಟು ಕಷ್ಟವಾಗಿದೆ. ಸರಕಾರವು ಅಧಿಕಾರಕ್ಕೆ ಬಂದ ದಿನದಿಂದ ಹಿಂದಿನ ಸರಕಾರ ರೈತರಿಗೆ ಕೊಡುತ್ತಿದ್ದ ಎಲ್ಲಾ ಅನುದಾನಗಳನ್ನು ಮುಂದುವರಿಸಬೇಕು,
ರೈತರ ವಿವಿಧ ಬೇಡಿಕೆಗಳನ್ನು ತಕ್ಷಣವೆ ಪರಿಹರಿಸಬೇಕೆಂದು ಆಗ್ರಹಿಸಿ ಬಸ್ ನಿಲ್ದಾಣದ ಅಂಬೇಡ್ಕರ್ ವೃತ್ತದಲ್ಲಿ ಬೃಹತ ಪ್ರತಿಭಟನೆಯನ್ನು ನಡೆಸಿ ನಂತರ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿ ಮಾತನಾಡಿದ ಶಾಸಕ ಮಾನಪ್ಪ ಡಿ ವಜ್ಜಲ್
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಿಂದ, ಕೊಡುವ ವಾರ್ಷಿಕ 5 ಸಾವಿರದ ಜೊತೆ ರಾಜ್ಯ ಸರ್ಕಾರದಿಂದ 4 ಸಾವಿರ ಸೇರಿಸಿ ಕೊಟ್ಟು ರೈತರ ಕುಟುಂಬಕ್ಕೆ ಆಸರೆಯಾಗಿತ್ತು.
ರೈತರ ಮಕ್ಕಳ ಉನ್ನತ ವ್ಯಾಸಂಗಕ್ಕೆ” ವಿದ್ಯಾಸಿಧಿ” ಮೂಲಕ ಸ್ಕ್ಯಾಲರ್ ಶಿಪ್ ಕೊಟ್ಟು ಸಹ ಮಾಡಿತ್ತು.
ಅಮೃತ ಯೋಜನೆಯಲ್ಲಿ ರೈತರು ಸಂಘಟಿತರಾಗಿ ಸದೃಢವಾಗಲು FPO ಸ್ಥಾಪನೆಗೆ 220 ಕೋಟಿ ಕೊಟ್ಟಿತ್ತು. ಕೇವಲ 28 ಸಾವಿರದಲ್ಲಿ ರೈತರ ಹೊಲಗಳಿಗೆ ವಿದ್ಯುತ್ ಒದಗಿಸುತ್ತಿತ್ತು.
ಸಣ್ಣ ರೈತರಿಗೆ ಸಹಾಯಧನ ನೀಡಿ ಕೃಷಿ ಪರಿಕರಗಳನ್ನು ಕೊಡಿಸುತ್ತಿತ್ತು. ಸಮರ್ಪಕ ನೀರು ನಿರ್ವಹಣೆ ಮತ್ತು ಉತ್ತಮ ಪಸಲಿಗೆ, ಬೆಂಬಲ ಬೆಲೆಯಲ್ಲಿ ಖರೀಧಿ ಕೇಂದ್ರಗಳ ಮೂಲಕ ತೊಗರಿ ಜೋಳ ಭತ್ತ ಖರೀಧಿಸಿ, ಪ್ರೋತ್ಸಾಹಧನದ ಜೊತೆ ಹಣ ಸಂದಾಯ ಮಾಡುತ್ತಿತ್ತು. ನೀವುಗಳು ಕೇವಲ ಪಂಚ ಗ್ಯಾರಂಟಿಗಳಿಗೆ ಆದ್ಯತೆ ಕೊಟ್ಟು, ರೈತರಿಗೆ ಸಿಗಬೇಕಿದ್ದ ಎಲ್ಲಾ ಸೌಲತ್ತುಗಳನ್ನು ಕತ್ತರಿಸಿ, ಅವರ ಬದುಕುಗಳನ್ನು ಬೀದಿಗೆ ತಂದಿದ್ದೀರಿ.
ನಿಮ್ಮಿಂದಾಗುತ್ತಿರುವ ಅನ್ಯಾಯಗಳು :
1. ತುಂಗಭದ್ರಾ ಡ್ಯಾಮ್ ನಲ್ಲಿ 80 TMC ನೀರಿದ್ದರೂ, ಎರಡನೇ ಬೆಳೆಗೆ ನೀರು ಒದಗಿಸುತ್ತಿಲ್ಲ.
2. ಕೃಷಿ ಇಲಾಖೆಯ ಸಹಾಯಧನಕ್ಕೆ ಮೀಸಲಿಡಬೇಕಾದ ಹಣವಿಡದೆ, ರೈತರಿಗೆ ತೊಂದರೆ ಕೊಟ್ಟಿದ್ದೀರಿ.
3. ವಾರ್ಷಿಕ 4000/-ವನ್ನು, ಸಮ್ಮಾನ ನಿಧಿಯ ಜೊತೆ ಕೊಡುತ್ತಿಲ್ಲ ವಿದ್ಯಾನಿಧಿ ತೆಗೆದಿದ್ದೀರಿ.
4.ಅಂಗಸಗೂರು ತಾಲೂಕಿನ ಕೃಷಿ ಸಹಾಯಕ ನಿರ್ದೇಶಕರ ಕಛೇರಿಯನ್ನು ನಮ್ಮ ಲಿಂಗಸಗೂರಿನಿಂದ ಸಿಂಧನೂರಿಗೆ ಸ್ಥಳಾಂತರವನ್ನು ರದ್ದು ಪಡಿಸುವುದು.
5. ಸಕಾಲದಲ್ಲಿ ಖರೀಧಿ ಕೇಂದ್ರ ಸ್ಥಾಪಿಸದೆ ಅನ್ಯಾಯ ಮಾಡಿದ್ದೀರಿ.
6. ಬೆಂಬಲ ಬೆಲೆಯಲ್ಲಿ ಕೊಂಡುಕೊಂಡು ಧಾನ್ಯದ ಹಣವನ್ನು ಸರಿಯಾಗಿ ಸಂದಾಯ ಮಾಡಿಲ್ಲ.
ಹಕ್ಕೊತ್ತಾಯಗಳು.
1. TLBC ಯಿಂದ ಎರಡನೇ ಬೆಳೆಗೆ ನೀರು ಕೊಡಿ. ಆದಾಗದಿದ್ದರೆ ಪ್ರತಿ ಎಕರೆಗೆ ರೂ.25000/- ಪರಿಹಾರ ಕೊಡಿ.
2. ಅತಿವೃಷ್ಟಿಗೆ ತುತ್ತಾದ, ಸಮೀಕ್ಷೀತ ಬೆಳೆಗಳಿಗೆ ರಾಜ್ಯದಿಂದ ಪರಿಹಾರ ಕೊಡಿ.
3. ತುಂಗಭದ್ರ ಆಣಿಕಟ್ಟು ವ್ಯಾಪ್ತಿಯಲ್ಲಿ ಪ್ರತಿ ಎಕರೆಗೆ 50 ಚೀಲ ಭತ್ತ ಬರುತ್ತಿತ್ತು ಹವಮಾನ ವೈಪರತ್ಯದಿಂದ ಭತ್ತಕ್ಕೆ ವೈರಸ ರೋಗ ಬಂದು ಇಂದು ಕೇವಲ 20 ರಿಂದ 25ಚೀಲ ಬಂದಿದೆ, ಈ ಭಾಗದ ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ ಘೋಷಿಸಬೇಕು.
4. ರೈತರಿಗೆ ಉಚಿತ ವಿದ್ಯುತ್ ಸಂರ್ಪಕ ಕೊಡಿ.
5. ಹಾಲಿಗೆ ಸಹಾಯಧನ ಹೆಚ್ಚಿಸಿ.
6. ಸಕಾಲದಲ್ಲಿ ತೊಗರಿ, ಜೋಳ, ಭತ್ತ ಮತ್ತು ಮೆಕ್ಕೆಜೋಳ ಖರೀಧಿ ಕೇಂದ್ರ ಸ್ಥಾಪಿಸಿ. ರೈತರು ಬೆಳೆದಷ್ಟನ್ನು ಕೊಂಡುಕೊಳ್ಳಿ.
7. ಮುದ್ರಾಂಕ ಶುಲ್ಕ ಕಡಿಮೆ ಮಾಡಿ.
8. ಎಪಿಎಂಸಿ ಯಲ್ಲಿ ನಡೆಯುತ್ತಿರುವ ಅನ್ಯಾಯವನ್ನು ತಡೆಗಟ್ಟಿ, ತಪ್ಪಿತಸ್ತರನ್ನು ಕಾನೂನು ಶಿಸ್ತಿಗೆ ಒಳಪಡಿಸಿ.
9. CCI ಯಿಂದ ಹತ್ತಿ ಖರೀಧಿಗೆ ಬೇಕಿರುವಷ್ಟು ಮಿಲ್ಲುಗಳನ್ನು ಒದಗಿಸಿ.
10. ಅತಿವೃಷ್ಠಿ ಮತ್ತು ಹವಾಮಾನ ವೈಪರಿತ್ಯದಿಂದ ತತ್ತರಿಸುವ ದಾಳಿಂಬೆ ಬೆಳೆಗಾರರಿಗೆ ನೆರವಿಗೆ ದಾವಿಸಿ ಪರಿಹಾರ ಒದಗಿಸಬೇಕು.
ರೈತರಿಗೆ, ತಮ್ಮಿಂದ ಆಗುತ್ತಿರುವ ಅನ್ಯಾಯವನ್ನು ನಾವು ಮತ್ತು ಅಮಾಯಕ ರೈತರು ಸಹಿಸಲು ಸಾಧ್ಯವಿಲ್ಲ. ತಕ್ಷಣವೇ ತಪ್ಪು ತಿದ್ದಿಕೊಂಡು, ರೈತರಿಗೆ ನ್ಯಾಯ ಕೊಡಿ ಇಲ್ಲದಿದ್ದರೆ ತಮ್ಮನ್ನು ಅಧಿಕಾರದಿಂದ ಕೆಳಗೆ ಇಳಿಸುವವರೆಗೂ ನಿರಂತರ ಹೋರಾಟ ಮಾಡುತ್ತೇವೆಂದರು . ಈ ಸಂದರ್ಭದಲ್ಲಿ
ಯಂಕನಗೌಡ ಪಾಟೀಲ್ ಐದನಾಳ ಅಧ್ಯಕ್ಷರು, ಭಾ.ಜ.ಪಾ ರೈತ ಮೋರ್ಚಾ,
ಕೆ.ನಾಗಭೂಷಣ ಅಧ್ಯಕ್ಷರು.
ಭಾರತೀಯ ಜನತಾ ಪಾರ್ಟಿ , ವೀರನಗೌಡ ಲೆಕ್ಕಿಹಾಳ್ ಜಿಲ್ಲಾಧ್ಯಕ್ಷ ಭಾರತೀಯ ಜನತಾ ಪಾರ್ಟಿ , ಎಲ್ಲಾ ಮುಖಂಡರು ಸೇರಿದಂತೆ ಇದ್ದರು .

