ತಾಲೂಕಿನಾದ್ಯಂತ ನಡೆಯು ಅಕ್ರಮ ಚಟುವಟಿಕೆ ಇಸ್ಪೀಟು, ಮಟ್ಕಾ, ಗಾಂಜಾ, ಅಕ್ರಮ ಮರಳುಗಾರಿಕೆ, ಲಂಚ, ಸೇರಿದಂತೆ ಪ್ರತಿಯೊಂದನ್ನು ಕಡಿವಾಣ ಹಾಕಲು ಸೂಚಿಸಿ, ಯಾವುದೇ ಸರ್ಕಾರಿ ಕೆಲಸಗಳಿಗೆ ಬರುವ ಜನಸಾಮಾನ್ಯರನ್ನು ಅನಗತ್ಯವಾಗಿ ಕಾಯಿಸಬೇಡಿ, ನಿಗಧಿತ ಸಮಯದೊಳಗೆ ಅವರ ಕೆಲಸಗಳನ್ನು ಮಾಡಿಕೊಡಲು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ತಮ್ಮ ಜನಸ್ಪಂದನ ಕಚೇರಿಯಲ್ಲಿ ಸಭೆ ನಡೆಸಿ, ತಾಲೂಕಾಡಳಿತ, ತಾಲೂಕು ಪಂಚಾಯತಿ, ಪೊಲೀಸ್ ಇಲಾಖೆ, ಸೇರಿದಂತೆ ವಿವಿಧ ಅಧಿಕಾರಿಗಳ ಸಭೆ ಕರೆದು ಅಕ್ರಮಕ್ಕೆ ಕಡಿವಾಣ ಹಾಕಲು ಎಂಎಲ್ಸಿ ಖಡಕ್ಕಾಗಿಯೇ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ: ದಂಡಾಧಿಕಾರಿ ಅರುಣ್ ಕುಮಾರ್ ದೇಸಾಯಿ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಚಂದ್ರಶೇಖರ್, ಡಿವೈಎಸ್ಪಿ ಚಂದ್ರಶೇಖರ್ ಜಿ, ಗ್ರಾಮೀಣ ಪಿಎಸ್‌ಐ ಮೌನೇಶ ರಾಠೋಡ್, ಸೇರಿದಂತೆ ಅನೇಕ ಅಧಿಕಾರಿಗಳು ಭಾಗವಹಿಸಿದ್ದರು.

