ರಾಯಚೂರು ಜಿಲ್ಲೆ ಸಿಂಧನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 2023 ರಲ್ಲಿ ನಡೆದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಕ್ಕೆ ಸಂಬಂಧಿಸಿದಂತೆ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಪೋಕೋ ನ್ಯಾಯಾಲಯ, ಪೀಠಾಸೀನ ಸಿಂಧನೂರು ನ್ಯಾಯಾಲಯವು 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ದಿನಾಂಕ 01-12-2025 ಆದೇಶ ನೀಡಿರುತ್ತಾರೆ.

ಸಿಂಧನೂರು ನಗರದ ನಿವಾಸಿಯಾದ ಅಮೀನ್ ಸಾಬ್ ತಂದೆ ಮಕ್ಯೂಮ್ ಸಾಬ್ ಕಾಲೇಗರ್ ವಯಸ್ಸು:-43 ವರ್ಷ ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದಾನೆ.

ನೊಂದ ಅಪ್ರಾಪ್ತ ಬಾಧಿತಳ ತಂದೆ ನೀಡಿದ ದೂರಿನ ಮೇರೆಗೆ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಅಂದಿನ ಆರಕ್ಷಕ ನಿರೀಕ್ಷಕರಾದ ಶ್ರೀ ದುರ್ಗಪ್ಪ ಇವರು ಆರೋಪಿತನ ವಿರುದ್ಧ ಮಾನ್ಯ ನ್ಯಾಯಾಲಯದಲ್ಲಿ ದೋಷಾರೋಪಣೆ ಪತ್ರವನ್ನು ಸಲ್ಲಿಸಿದ್ದು ಇರುತ್ತದೆ.

ಮಾನ್ಯ ನ್ಯಾಯಾಲಯವು ಸಾಕ್ಷಿ ಪುರಾವೆಗಳನ್ನು ಪರಿಶೀಲಿಸಿ ಆರೋಪಿಯ ಮೇಲಿನ ಅಪಾದನೆ ಸಾಬೀತಾಗಿದೆ ಎಂದು 3 ನೇ ಅಧಿಕ ಜಿಲ್ಲಾ ಮತ್ತು ಸತ್ರ ಪೋಕೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಬಿ.ಬಿ. ಜಕಾತಿ ಯವರು ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ.

ಅದರಂತೆ ಆರೋಪಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ರೂ. 55,000/- ದಂಡವನ್ನು ವಿಧಿಸಲಾಗಿದೆ ಮತ್ತು ಸರ್ಕಾರದ ಸಂತ್ರಸ್ತರ ಪರಿಹಾರ ನಿಧಿಯಿಂದ ನೊಂದ ಬಾಲಕಿಗೆ ರೂ.7.50,000/-(ರೂ. ಏಳು ಲಕ್ಷದ ಐವತ್ತು ಸಾವಿರ ರೂ ಗಳ) ಪರಿಹಾರವನ್ನು ನೀಡಬೇಕೆಂದು ಮಾನ್ಯ ನ್ಯಾಯಾಲಯವು ಆದೇಶಿಸಿದೆ.

ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಎಂ. ಮಂಜುನಾಥ ರವರು ವಾದವನ್ನು ಮಂಡಿಸಿರುತ್ತಾರೆ. ಸಾಕ್ಷಿದಾರರನ್ನು ಮಾನ್ಯ ನ್ಯಾಯಾಲಯಕ್ಕೆ ಸಮಯಕ್ಕೆ ಸರಿಯಾಗಿ ಪೇದೆಗಳಾದ ಬೂದೆಪ್ಪ ಮತ್ತು ಶ್ರೀಮತಿ ಕೆಂಚಮ್ಮ ರವರು ಕರೆತಂದು ಸಹಕರಿಸಿರುತ್ತಾರೆ.

Leave a Reply

Your email address will not be published. Required fields are marked *