ವಾಲ್ಮೀಕಿ ಮೂರ್ತಿ ನಿರ್ಮಾಣ ಮಾಡುವುದು ನಮ್ಮ
ಸಮಾಜದ ಮೇಲಿರುವ ದೊಡ್ಡ ಜವಬ್ದಾರಿಯಾಗಿದೆ. ನಾವೆಲ್ಲರೂ ಒಟ್ಟಾಗಿ ಸಮಾಜದ ಈ ಮಹತ್ವ ಕೆಲಸಕ್ಕೆ ಮುಂದಾಗೋಣ, ಇತ್ತೀಚೆಗೆ ನಡೆದ ಹತ್ತಿಗುಡ್ಡ ಹಾಗೂ ಕುರುಕುಂದ ಗ್ರಾಮಗಳಲ್ಲಿ ನಾಯಕ ಸಮಾಜದ ಮೇಲಿನ ದೌರ್ಜನ್ಯವನ್ನು ಖಂಡಿಸುತ್ತೇವೆ ಎಂದು ತಿಮ್ಮಯ್ಯ ನಾಯಕ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿಂದು ಮಂಗಳವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಹತ್ತಿಗುಡ್ಡ ಹಾಗೂ ಕುರುಕುಂದ ಗ್ರಾಮಗಳಲ್ಲಿ ನಾಯಕ ಸಮಾಜದವರ ಮೇಲಿನ ದೌರ್ಜನ್ಯವನ್ನು ಖಂಡಿಸುತ್ತೇವೆ. ಇದನ್ನು ಪ್ರತಿ ಸಮಾಜದ ಹಿರಿಯರು ತಮ್ಮ ತಮ್ಮ ಸಮಾಜದ ಕಿಡಿಗೇಡಿಗಳಿಗೆ ಬುದ್ದಿ ಹೇಳಿ ಸಮಾಜದಲ್ಲಿ ಶಾಂತಿ ಕಾಪಾಡುವಲ್ಲಿ ಮುಂದಾಗಬೇಕು.
ಹತ್ತಿಗುಡ್ಡ ಪ್ರಕರಣದಲ್ಲಿ ಸ್ಪಂದಿಸದಿರುವ ತುರ್ವಿಹಾಳ ಪೊಲೀಸ್ ಠಾಣೆ ಪಿಎಸ್‌ಐ ಅವರನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿಗಳಿಗೆ ಸಮಾಜದ ಮುಖಂಡರು ಸಲ್ಲಿಸಿದ ಮನವಿಯಲ್ಲಿ ದೂರಿದ್ದಾರೆ.
ತಾಲೂಕಿನ ನಾಯಕ ಸಮಾಜದಿಂದ ನೋಂದಣಿ ಅಭಿಯಾನ ಪ್ರಾರಂಭವಾಗಿದೆ. ಸಮಾಜದ ಸಮಸ್ತ ನಾಗರೀಕರು ನೋಂದಣಿಗೆ ಮುಂದಾಗಿ, ಪೋಷಕ ಸದಸ್ಯತ್ವ 25 ಸಾವಿರ, ದಾನಿಗಳ ಸದಸ್ಯತ್ವ 11 ಸಾವಿರ, ಅಜೀವ ಸದಸ್ಯತ್ವ 5 ಸಾವಿರ, ತ್ರೈಮಾಸಿಕ ಸದಸ್ಯತ್ವ 1 ಸಾವಿರ, ಸದಸ್ಯತ್ವ ಶುಲ್ಕವನ್ನು ನಿಗಧಿ ಪಡಿಸಲಾಗಿದೆ. ಸದಸ್ಯತ್ವ ಅಭಿಯಾನ ಡಿ.8 ರಿಂದ ಮಾರ್ಚ್ 3 ರವರೆಗೆ ನೋಂದಣಿಗೆ ಕಾಲವಕಾಶವಿದೆ ಎಂದರು.
ಈ ವೇಳೆ: ದೇವೇಂದ್ರಪ್ಪ ನಾಯಕ, ಕರೇಗೌಡ ಕುರುಕುಂದ, ಯಂಕೋಬ ರಾಮತ್ನಾಳ್, ವೆಂಕಟೇಶ ರಾಗಲಪರ್ವಿ, ಕನಕಪ್ಪ, ಹನುಮಂತ ಪುಲದಿನ್ನಿ, ಅರುಣಕುಮಾರ, ಲಕ್ಷ್ಮಣ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

