ಬೆಂಗಳೂರಿನಲ್ಲಿ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆಮಾಡಿದ ಅವರು ಸಮಾಜದಲ್ಲಾಗುವ ಅನ್ಯಾಯ,ಅಕ್ರಮ,ಅತ್ಯಾಚಾರ,ಬ್ರಷ್ಟಾಚಾರಗಳನ್ನು ತಡೆಹಿಡಿಯುವ ನಿಟ್ಟಿನಲ್ಲಿ ರಾಜ್ಯದ ಪತ್ರಕರ್ತರು ಜೀವದ ಹಂಗನ್ನೇ ತೊರೆದು ಹಗಲಿರುಳೆನ್ನದೆ ಸುದ್ದಿಸಂಗ್ರಹಿಸಿ ವರದಿಮಾಡುವ ಪತ್ರಕರ್ತರಿಗೆ ರಕ್ಷಣೆಯಿಲ್ಲದಂತಾಗಿದೆ.
ಕಾರಣ ಈ ಬೆಳಗಾವಿಯ ಅಧಿವೇಶನದಲ್ಲಿ ಪತ್ರಕರ್ತರ ರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಬೇಕು,ಉಚಿತ ಬಸ್ ಪಾಸ್,ಆರೋಗ್ಯವಿಮೆ,ಮರಣಹೊಂದಿದರೆ ಹತ್ತುಲಕ್ಷ ರೂಪಾಯಿಗಳ ಪರಿಹಾರ, ಪತ್ರಿಕಾ ಭವನಗಳನ್ನು ಎಲ್ಲಾ ಪತ್ರಕರ್ತರಿಗೆ ಮುಕ್ತಗೊಳಿಸಬೇಕು,ಮಾಶಾಸನ,ಪತ್ರಕರ್ತರ ಖಾಸಗಿ ವಾಹನಗಳಿಗೆ ಟೋಲ್ ಗೇಟಗಳಲ್ಲಿ ರಸ್ತೆಸುಂಕ ಇಲ್ಲದ ಸಂಚಾರಕ್ಕೆ ಅವಕಾಶ ನೀಡಬೇಕು,ವಿಧಾನಸೌಧ ವಿಕಾಸ ಸೌಧಗಳಲ್ಲಿ ಮುಕ್ತ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ಇದೇ ತಿಂಗಳು ಹದಿನೈದನೆ ತಾರೀಕಿಗೆ ಬೆಳಗಾವಿಯ ಸುವರ್ಣಸೌಧದ ಮುಂದೆ ರಾಜ್ಯದ ಪತ್ರಕರ್ತರೆಲ್ಲ ಸೇರಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು. ಒಂದು ವೇಳೆ ಬೇಡಿಕೆ ಈಡೇರಿಸದಿದ್ದರೆ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಬೇಕಾಗುತ್ತದೆಂಬ ಎಚ್ಚರಿಕೆಯನ್ನು ನೀಡಿದರು.

