ಸಿರವಾರ,ಡಿ.01-ಒಬ್ಬಮಹಿಳೆ ಏನು ಮಾಡಿದರೂ ಅದು ಒಳಿತನ್ನೆ ಬಯಸುವ ದಾರಿ ಯಾಗಿರುತ್ತದೆ, ಪ್ರತಿಯೊಬ್ಬ ಮಹಿಳೆ ನಡೆದುಕೊಂಡು ಬಂದಿರುವ ದಾರಿಯು ಅವಳ ಸಂಸ್ಕಾರವೇ ಮೂಲಾಧಾರವಾಗಿದೆ.ಭಾರತೀಯ ಸಂಸ್ಕೃತಿ, ಸಂಪ್ರದಾಯ ಉಳಿದಿದೆ ಎಂದರೆ ಅದು ಮಹಿಳೆಯರಿಂದ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಜ್ಯೋತಿ ಅಕ್ಕ ಹೇಳಿದರು.
ಪಟ್ಟಣದ ಸಜ್ಜಲಶ್ರೀ ಶರಣಮ್ಮ ತಾಯಿ ಶಾಖಾಮಠದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಜ್ಞಾನ ವಿಕಾಸದಿಂದ ಭಾನುವಾರ ನಡೆದ “ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ’ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಯನ್ನು ಉದ್ಘಾಟಿಸಿ ಮಾತನಾಡಿದರು. ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆ ಯರ ಏಳಿಗೆಗೆ ಶ್ರಮಿಸುತ್ತಿದೆ, ಗ್ರಾಮಾಭಿವೃದ್ಧಿ ಯೋಜನೆ ಅಡಿ ಯಲ್ಲಿ ಮಹಿಳೆಯರ ಸಬಲೀಕರಣ, ಎಲ್ಲಾ ರಂಗಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಗೆ ನೀಡುತ್ತಿರುವುದು ಪ್ರೋತ್ಸಾಹ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಶ್ರೀಕ್ಷೇತ್ರದಿಂದ ಧರ್ಮ ಉಳಿಸುವ ಕಾರ್ಯವಾಗುತ್ತಿದೆ. ಮಹಿಳೆಯರು ಆದ್ಯಾತ್ಮಿಕತೆ ಬಗ್ಗೆ ತಿಳಿದುಕೊಳಬೇಕು. ದ್ಯಾನವು ಸಂಸಾರ ನಿರ್ವಹಣೆಗೆ ಸಹಕಾರಿಯಾಗುತ್ತದೆ. ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ನಮ್ಮ ಸಂಸ್ಕೃತಿಯ ಬಗ್ಗೆ ಸಂಸ್ಕಾರ, ಗುರು ಹಿರಿಯ ಬಗ್ಗೆ ಗೌರವ ನೀಡುವುದನ್ನು
ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಶಿಕ್ಷಕಿ ಮಂಜುಳಾ ಸಗರದ ತಮ್ಮ ಉಪನ್ಯಾಸದಲ್ಲಿ
ಗ್ರಾಮೀಣ ಮಟ್ಟದಲ್ಲಿರುವ ನಾವು ಕೂಡ ಗ್ರಾಮಾಭಿವೃದ್ಧಿಯ ಯೋಜನೆಗಳನ್ನು ಸದ್ಬಳಕೆ ಮಾಡಿ ಕೊಂಡು ಉನ್ನತ ವಿದ್ಯಾಭ್ಯಾಸದ ಉತ್ತಮ ಸಂಸ್ಕಾರ ನೀಡಬೇಕಾಗಿದ್ದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಯೋಜನೆಯ ಜಿಲ್ಲಾ ನಿರ್ದೇಶಕ ಮೋಹನ ನಾಯ್ಕ ಮಾತನಾಡಿ, ಮಹಿಳೆಯರು ತಮ್ಮ ಬದುಕನ್ನು ರೂಪಿಸಿಕೊಳ್ಳಲು, ಕುಟುಂಬದ ನಿರ್ವ ಹಣೆಜೊತೆಯಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ, ಮಾನಸಿಕವಾಗಿ ಸಬಲ ರಾಗಲು, ಈ ಮಹಿಳಾ ವಿಚಾರ ಎಂದರು. ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ ಪ್ರಾಸ್ತಾವಿಕವಾಗಿ ತಾಲ್ಲೂಕು ಯೋಜನಾಧಿಕಾರಿ ಚಂದ್ರಹಾಸ ಬಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿಯ, ಜ್ಞಾನ ವಿಕಾಸ ಯೋಜನೆಯ ಕುರಿತು ಮಾಹಿತಿ ನೀಡಿದರು.
ಸದಸ್ಯ ಅಯ್ಯನಗೌಡ ಏರಡ್ಡಿ, ಪ.ಪಂ ಅಧ್ಯಕ್ಷ ವೈ.ಭೂಪನಗೌಡ, ಜ್ಞಾನ ವಿಕಾಸ ಯೋಜನೆಯ ಪ್ರಾದೇಶಿಕ ಯೋಜನಾಧಿಕಾರಿ ಸುಧಾಗಾಂಪ್ಪರ್, ಎನ್.ರೇಣುಕಾ ಮಾತನಾಡಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಜ್ಞಾನಮಿತ್ರ, ಮೇಲ್ವಿಚಾರಕಿ ವನಿತಾ, ಜ್ಞಾನ ವಿಕಾಸದ ಸಮನ್ವ ಯಾಧಿಕಾರಿ ಯಶೋಧಾ, ಸೇರಿ ದಂತೆ ಯೋಜನೆಯ ಮೇಲ್ವಿಚಾರ ಕರು, ಸಿಬ್ಬಂದಿ ಸೇರಿದಂತೆ ಜ್ಞಾನ ವಿಕಾಸ ಕೇಂದ್ರಗಳ ಮಹಿಳಾ ಸದ ಸ್ಯರು ಭಾಗವಹಿಸಿದ್ದರು.

