ಸಿಂಧನೂರು.-ಏಳನೇ ಮೈಲ್ ಕ್ಯಾಂಪ್ – ಬನ್ನಟ್ಟಿ ಕ್ಯಾಂಪ್ ರಸ್ತೆ ಅಭಿವೃದ್ಧಿ ಕಾಮಗಾರಿ ಗೆ ಭೂಮಿ ಪೂಜೆ ನೇರವೇರಿಸಿ ಶಾಸಕ ಬಸನಗೌಡ ತುರವಿಹಾಳ ಕಾಮಗಾರಿ ಕೈಗೆತ್ತಿಕೊಂಡ ಗುತ್ತೆದಾರರರು ಕಳಪೆ ಯಾಗದಂತೆ ಗುಣಮಟ್ಟದ ಕಾಮಗಾರಿ ನಿರ್ವಹಿಸಿ ಎಂದು ತಿಳಿಸಿದರು.
ಪಿ.ಎಮ್.ಜಿ.ಎಸ್.ವಾಯ್ ಇಲಾಖೆ ಅನುಷ್ಠಾನದ 20 ಕೋಟಿ ರೂ ಪ್ಯಾಕೇಜ್ ನಲ್ಲಿ ಹತ್ತಿಗುಡ್ಡ – ಬೋಗಾಪುರ ಗುಂಜಳ್ಳಿಯಿಂದ ಕಣ್ಣೂರು, ಹಾಗೂ ನಾಗರಬೆಂಚಿ – ಮೇರನಾಳ ಕಾಮಗಾರಿಗಳು ತ್ವರಿತಗತಿಯಲ್ಲಿ ಅಂ-ದಾಜು ಪ್ರತಿಯಲ್ಲಿ ಇರುವಂತೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದೆಂದರು.
ಗುಂಜಳ್ಳಿ- ತಿಡಿಗೋಳ ರಸ್ತೆ ಕಾಮಾಗರಿ ನಿರ್ವಹಿಸಿ ಮೂರು
ತಿಂಗಳಲ್ಲಿ ಮೊದಲಿದ್ದ ಸ್ಥಿತಿಗೆ ತಲುಪಿದೆ ಎನ್ನುವ ಪತ್ರಕರ್ತರ ಪ್ರಶ್ನೆಗೆ ಶಾಸಕರು ಕೆ ಆರ್ ಐ ಡಿ ಎಲ್ ನಿಂದ ಒಂದು ಕಿಮೀ ರಸ್ತೆಗೆ ಚಾಲನೆ ನೀಡಲಾಗಿತ್ತು ಕಳಪೆ ದೂರು ಬಂದ ಹಿನ್ನಲೆಯಲ್ಲಿ ಪುನಃ ಸಂಪೂರ್ಣ ಡಾಂಬರಿಕರಣ
ಮಾಡಲು ಗುತ್ತೆದಾರರು ಹಾಗೂ ಜೆಇ ಗೆ ತಿಳಿಸಲಾಗಿದೆಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ನಲ್ಲಾ ವೆಂಕಟೇಶ್ವರರಾವ್ ಸಿದ್ದನಗೌಡ ಮಾಟುರು ಗುಂಜಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಅಂಬಣ್ಣ
ಸದಸ್ಯ ಸೋಮನಾತ ಹಂಚಿನಾಳ ,ಅಪ್ಪರಾವ್.ನಾಗರಾಜ,ಪಿಡಿಒ ಪವಿತ್ರ ,ಪಿಎಸ್‌ಐ ಸುಜಾತ ಎಇಇ ಭರತಕುಮಾರಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.

