ಲಿಂಗಸಗೂರು : ಡಿ 1 ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ 17 ನೇ ವಾರ್ಡಿನ ಲಕ್ಷ್ಮೀದೇವಿ ದೇವಸ್ಧಾನದ ಹತ್ತಿರ ಬರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸಂಜೆ ಅಭಿನಂದನ್ ಸ್ಪೂರ್ತಿ ಧಾಮ ಅನಾಥ ವಿಕಲಚೇತನ ಮತ್ತು ಬಡಮಕ್ಕಳ ಆಶ್ರಮ ವಸತಿ ಶಾಲೆ ಮಕ್ಕಳಿಂದ 18 ಮೆಟ್ಟಿಲು ಪಡಿ ಪೂಜೆಯನ್ನು ಮಕ್ಕಳು ನೆರವೇರಿಸಿದರು. ಪಡಿ ಪೂಜೆಯನ್ನು ಅಭಿನಂದನ್ ಆಶ್ರಮದ ಮಕ್ಕಳಿಂದ ನೆರವೇರಿಸಲು ಲಿಂಗಸಗೂರು ಅಯ್ಯಪ್ಪ ಸ್ವಾಮಿ ದೇವಸ್ಥಾನ ಚಾರಿಟೇಬಲ್ ಟ್ರಸ್ಟ ವತಿಯಿಂದ ಅಭಿನಂದನ್ ಸ್ಪೂರ್ತಿ ಧಾಮ ಅನಾಥ ವಿಕಲಚೇತನ ಮತ್ತು ಬಡ ಮಕ್ಕಳ ಶಾಲೆ ದೇವಸ್ಧಾನ ವತಿಯಿಂದ ಆಹ್ವಾನಸಿಲಾಗಿತ್ತು. ಆಶ್ರಮದ ಮಕ್ಕಳು 18 ಮೆಟ್ಟಿಲು ಪಡಿ ಪೂಜೆ ನೆರವೇರಿಸಿ ಪಡಿ ಪೂಜೆಯಲ್ಲಿ ಅಭಿನಂದನ್ ಸ್ಪೂರ್ತಿ ಧಾಮ ಅನಾಥ ವಿಕಲಚೇತನ ಮತ್ತು ಬಡ ಮಕ್ಕಳ ಆಶ್ರಮ ಸಂಸ್ಧೆಯ ಅಧ್ಯಕ್ಷರಾದ ರಾಮಣ್ಣ ಹಂಪರಗುಂದಿ ಹಾಗೂ ಶ್ರುತಿ ರಾಮಣ್ಣ ಹಂಪರಗುಂದಿ ಅವರನ್ನು ದೇವಸ್ಧಾನ ವತಿಯಿಂದ ಸನ್ಮಾನಿಸಿದರು . ಈ ಸಂದರ್ಭದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಧಾನದ ಗುರುಸ್ವಾಮಿಗಳಾದ ಸಿದ್ರಾಮು ಗುರುಸ್ವಾಮಿ ನಗರಗುಂಡ,ಪತ್ರಕರ್ತ ರಾಜೇಶ ಮಾಣಿಕ್,
ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮಾಲೆಧಾರಿಗಳು,ಹಾಗೂ ಹೊನ್ನಳ್ಳಿ ಅಯ್ಯಪ್ಪ ಸ್ವಾಮಿ ದೇವಸ್ಧಾನ ಮಾಲೆಧಾರಿಗಳು,ಮತ್ತು ಅಯ್ಯಪ್ಪ ಸ್ವಾಮಿ ಭಕ್ತರು ಇದ್ದರು.

